ರಾಯಚೂರು ಜಿಲ್ಲೆ ಸಿಂಧನೂರು ನಗರದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ರಾಯಚೂರು ಜಿಲ್ಲಾ 9ನೇ ಜಿಲ್ಲಾ ಸಮ್ಮೇಳನ ನಡೆಯಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷ, ಆರ್.ಮಾನಸಯ್ಯ, ಕೇಂದ್ರದ ಆರ್‌ಎಸ್‌ಎಸ್ ನೇತೃತ್ವದ ಫ್ಯಾಸಿಸ್ಟ್ ಆಳ್ವಿಕೆಯಿಂದ ಕಾರ್ಮಿಕ ವರ್ಗದ ಹಕ್ಕುಗಳು, ಕಾನೂನುಗಳನ್ನು ಮರೆ ಮಾಚುತ್ತಿವೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಏರ್ಪಾಡನ್ನು ಮೋದಿ ಆಡಳಿತ ಸಿದ್ದಮಾಡಿಕೊಳ್ಳುತ್ತಿದೆ ಎಂದರು.
44 ಕಾರ್ಮಿಕ ಕಾನೂನುಗಳ ಬದಲಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಕಾರ್ಪೊರೇಟ್ ಬಂಡವಾಳಕ್ಕೆ ದೇಶದ ಸಂಪನ್ಮೂಲವನ್ನು ಧಾರೆ ಎರೆಯುತ್ತಾ, ಕಾರ್ಮಿಕ ವರ್ಗದ ವಿನಾಶಕ್ಕೆ ಹಾದಿಯನ್ನು ಸುಗಮಗೊಳಿಸುತ್ತಲಿದೆ. ಕಾರ್ಮಿಕರು ತನ್ನ ವರ್ಗ ಮತ್ತು ಹಕ್ಕುಗಳು ಹಾಗೂ ಕಾನೂನುಗಳನ್ನು ರಕ್ಷಿಸಿಕೊಳ್ಳಲು ಜೀವನ್ಮರಣದ ಹೋರಾಟಗಳಿಗೆ ಹೆಗಲೊಡ್ಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಹಟ್ಟಿ ಚಿನ್ನದ ಗಣಿ, ತುಂಗಭದ್ರ ನೀರಾವರಿ, ವಸತಿ ನಿಲಯ, ಉದ್ಯೋಗ ಖಾತರಿ, ಆಟೋ, ಹಮಾಲಿ, ಬೀದಿಬದಿ ವ್ಯಾಪಾರಿ, ವೈದ್ಯಕೀಯ ಸೇರಿದಂತೆ ಕಾರ್ಮಿಕರನ್ನೊಳಗೊಂಡು ಜಿಲ್ಲೆಯ ಏಳು ತಾಲೂಕುಗಳ ಕಾರ್ಮಿಕ, ಕಾರ್ಮಿಕರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಜಿ.ಅಮರೇಶ, ಡು.ಕೆ. ಲಿಂಗಸೂಗೂರು, ಮಾಬುಸಾಬ ಬೆಳ್ಳಟ್ಟಿ, ನೇತೃತ್ವದ ಅಧ್ಯಕ್ಷೀಯ ಮಂಡಳಿ, ಗುಡುದಪ್ಪ ಭಂಡಾರಿ, ಎಚ್.ಆರ್. ಹೊಸಮನಿಯವರ ದಸ್ತಾವೇಜು ಸಮಿತಿ, ಆರ್. ಮಾನಸಯ್ಯ, ಎಂ.ಡಿ. ಅಮೀರ ಅಲಿ, ಚಿನ್ನಪ್ಪ ಕೊಟ್ರಿಕಿ, ಎಂ.ಗಂಗಾಧರ ಇನ್ನಿತರರು ಹಾಜರಿದ್ದರು.