‘ಸಲಾರ್‘ ಸಿನಿಮಾ ನೋಡಿದ ಬಹುತೇಕರು, ಒಂಬತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ‘ಉಗ್ರಂ’ ಸಿನಿಮಾದ ರೀಮೇಕ್ ಇದು ಎನ್ನುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳ ಮುಂಚೆ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿರುವ ವಿಡಿಯೋ ಎಕ್ಸ್ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
ಕ್ರಿಸ್‌ಮಸ್ ರಜೆಯಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಅತಿ ಹೆಚ್ಚು ಸದ್ದು ಮಾಡಿದ್ದು ಶಾರುಖ್ ನಟನೆಯ ‘ಡಂಕಿ’ ಮತ್ತು ‘ಸಲಾರ್’ ಸಿನಿಮಾಗಳು. ಬಿಡುಗಡೆ ಪೂರ್ವದಲ್ಲೇ ಇವೆರಡನ್ನೂ ಪರಸ್ಪರ ವಿರುದ್ಧ ಎಂಬಂತೆ ಬಿಂಬಿಸಲಾಗಿತ್ತು. ಉತ್ತರ ವರ್ಸಸ್ ದಕ್ಷಿಣ, ಶಾರುಖ್ ವರ್ಸಸ್ ಪ್ರಭಾಸ್, ರಾಜ್‌ಕುಮಾರ್ ಹಿರಾನಿ ವರ್ಸಸ್ ಪ್ರಶಾಂತ್ ನೀಲ್ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಪ್ರಿಯರು ಸಂಘರ್ಷಕ್ಕಿಳಿದಿದ್ದರು. ಇವುಗಳ ಪೈಕಿ ನಿನ್ನೆ (ಡಿ.21) ಬಿಡುಗಡೆಯಾದ ಶಾರುಖ್‌ನ ‘ಡಂಕಿ’ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ವಿಶೇಷವೆಂದರೆ, ಇಂದು (ಡಿ.22) ಬಿಡುಗಡೆಯಾದ ಪ್ರಭಾಸ್‌ನ ‘ಸಲಾರ್’ಗೂ ಕೂಡ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
‘ಡಂಕಿ’ ರಾಜ್‌ಕುಮಾರ್ ಹಿರಾನಿಯ ಹಿಂದಿನ ಸಿನಿಮಾಗಳಂತಿಲ್ಲ ಎನ್ನುವುದು ಅದರ ಬಗೆಗಿನ ಅತಿ ದೊಡ್ಡ ಟೀಕೆ. ಅದಕ್ಕೆ ವಿರುದ್ಧವಾಗಿ ‘ಸಲಾರ್’ ಪ್ರಶಾಂತ್ ನೀಲ್‌ರ ಹಿಂದಿನ ಸಿನಿಮಾಗಳಂತೆಯೇ ಇದೆ ಎನ್ನುವುದು ಅದರ ಮುಖ್ಯ ಮಿತಿ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅದರಲ್ಲೂ ಸಿನಿಮಾ ನೋಡಿದ ಬಹುತೇಕರು, ಒಂಬತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ‘ಉಗ್ರಂ’ ಸಿನಿಮಾದ ರೀಮೇಕ್ ‘ಸಲಾರ್’ ಎನ್ನುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳ ಮುಂಚೆ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿರುವ ವಿಡಿಯೋ ಎಕ್ಸ್ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
The loss of #Ugramm will regain with INTEREST……..😜🙌
There is no passion for cinema to me, it's business to me, in that business I do my best. Passion died long time back#PrashanthNeel @hombalefilms #SalaarCeaseFireOnDec22 #SalaarSecondSingle #SalaarCeaseFire pic.twitter.com/FtzjrY5ZNi— 𝐀𝐊𝐒𝐇𝐀𝐘🖤 (@nameisakshay03) December 21, 2023
ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾ ನಿರ್ಮಾಣ ಆರಂಭಿಸಿದಾಗಲೇ ಅದು ‘ಉಗ್ರಂ’ ರೀಮೇಕ್ ಎಂದು ಕೆಲವರು ಹೇಳತೊಡಗಿದ್ದರು. ಆದರೆ, ಚಿತ್ರತಂಡ ಅದನ್ನು ನಿರಾಕರಿಸಿತ್ತು. ಪ್ರಶಾಂತ್ ನೀಲ್ ಅದರ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಇನ್ನೇನು ಚಿತ್ರ ಬಿಡುಗಡೆಯಾಗುತ್ತಿದೆ ಎನ್ನುವಾಗ ಅವರು ಆ ಕುರಿತ ಸತ್ಯವನ್ನು ಒಪ್ಪಿಕೊಂಡಿದ್ದಾರೆ.
‘ಉಗ್ರಂ’ ಚಿತ್ರ ಮಾಡುವಾಗ ಪ್ರಶಾಂತ್ ನೀಲ್ ಚಿತ್ರರಂಗಕ್ಕೆ ಹೊಸಬರಾಗಿದ್ದರು. ಹಾಗೂ ಹೀಗೂ ಚಿತ್ರ ಮಾಡಿದ್ದರಾದರೂ ಅದನ್ನು ಬಿಡುಗಡೆ ಮಾಡಲೂ ಅವರಿಗೆ ಸಾಧ್ಯವಾಗಿರಲಿಲ್ಲ. ಕೊನೆಗೆ ನಟ ದರ್ಶನ್ ಸಹಾಯದಿಂದ ಚಿತ್ರ ಬಿಡುಗಡೆ ಕಂಡಿತ್ತು. ಚಿತ್ರದಿಂದ ಪ್ರಶಾಂತ್ ನೀಲ್‌ಗೆ ಹೆಸರು ಬಂತಾದರೂ ಚಿತ್ರ ಚೆನ್ನಾಗಿ ಓಡಿರಲಿಲ್ಲ. ಅದೇ ಕಾರಣಕ್ಕೆ ಆ ಕಥೆಯನ್ನು ಕೊಂಚ ಬದಲಾಯಿಸಿ ‘ಸಲಾರ್’ ಮಾಡಿದ್ದೇನೆ ಎನ್ನುವುದು ಪ್ರಶಾಂತ್ ನೀಲ್ ವಾದ.
‘‘ಉಗ್ರಂ’ ಮಾಡುವಾಗ ನನಗೆ ಸಿನಿಮಾ ಬಗ್ಗೆ ಪ್ಯಾಷನ್ ಇತ್ತು. ಆದರೆ, ಈಗ ನನಗೆ ಚಿತ್ರಮಂದಿರಕ್ಕೆ ಜನರನ್ನು ಕರೆದುಕೊಂಡು ಬರುವುದೇ ಮುಖ್ಯ’ ಎಂದು ಪ್ರಶಾಂತ್ ನೀಲ್ ‘ಉಗ್ರಂ’ ಅನ್ನೇ ಮತ್ತೆ ಹೊಸ ಬಾಟಲಿಗೆ ಹಾಕಿ ‘ಸಲಾರ್’ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಮೂರೇ ಸಿನಿಮಾಗೆ ಪ್ಯಾಷನ್ ಕಳೆದುಕೊಂಡರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
His Passion Has Killed Him Totally
He Taken Best Cinematographer, Music Director everything and Sold one House for a Good product
But Not even One Distributer Bought Movie
PASSION OF MAKING CINEMA DIED LONG BACK, IT'S A BUSINESS
Fan Of Him For This 🛐🧎#PrashanthNeel #Salaar pic.twitter.com/PRBOndlYRk— VINEETH𓃵🦖 (@sololoveee) December 21, 2023
Nice