‘ಸಲಾರ್’ ಕನ್ನಡ ಚಿತ್ರದ ರೀಮೇಕ್ ಎಂದ ಪ್ರೇಕ್ಷಕರು; ಸಕ್ಸಸ್ ಮುಖ್ಯ ಎಂದ ಪ್ರಶಾಂತ್ ನೀಲ್

Date:

‘ಸಲಾರ್‘ ಸಿನಿಮಾ ನೋಡಿದ ಬಹುತೇಕರು, ಒಂಬತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ‘ಉಗ್ರಂ’ ಸಿನಿಮಾದ ರೀಮೇಕ್ ಇದು ಎನ್ನುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳ ಮುಂಚೆ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿರುವ ವಿಡಿಯೋ ಎಕ್ಸ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

- Advertisement -

ಕ್ರಿಸ್‌ಮಸ್‌ ರಜೆಯಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಅತಿ ಹೆಚ್ಚು ಸದ್ದು ಮಾಡಿದ್ದು ಶಾರುಖ್ ನಟನೆಯ ‘ಡಂಕಿ’ ಮತ್ತು ‘ಸಲಾರ್’ ಸಿನಿಮಾಗಳು. ಬಿಡುಗಡೆ ಪೂರ್ವದಲ್ಲೇ ಇವೆರಡನ್ನೂ ಪರಸ್ಪರ ವಿರುದ್ಧ ಎಂಬಂತೆ ಬಿಂಬಿಸಲಾಗಿತ್ತು. ಉತ್ತರ ವರ್ಸಸ್ ದಕ್ಷಿಣ, ಶಾರುಖ್ ವರ್ಸಸ್ ಪ್ರಭಾಸ್, ರಾಜ್‌ಕುಮಾರ್ ಹಿರಾನಿ ವರ್ಸಸ್ ಪ್ರಶಾಂತ್ ನೀಲ್ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಪ್ರಿಯರು ಸಂಘರ್ಷಕ್ಕಿಳಿದಿದ್ದರು. ಇವುಗಳ ಪೈಕಿ ನಿನ್ನೆ (ಡಿ.21) ಬಿಡುಗಡೆಯಾದ ಶಾರುಖ್‌ನ ‘ಡಂಕಿ’ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ವಿಶೇಷವೆಂದರೆ, ಇಂದು (ಡಿ.22) ಬಿಡುಗಡೆಯಾದ ಪ್ರಭಾಸ್‌ನ ‘ಸಲಾರ್’ಗೂ ಕೂಡ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

‘ಡಂಕಿ’ ರಾಜ್‌ಕುಮಾರ್ ಹಿರಾನಿಯ ಹಿಂದಿನ ಸಿನಿಮಾಗಳಂತಿಲ್ಲ ಎನ್ನುವುದು ಅದರ ಬಗೆಗಿನ ಅತಿ ದೊಡ್ಡ ಟೀಕೆ. ಅದಕ್ಕೆ ವಿರುದ್ಧವಾಗಿ ‘ಸಲಾರ್‌’ ಪ್ರಶಾಂತ್ ನೀಲ್‌ರ ಹಿಂದಿನ ಸಿನಿಮಾಗಳಂತೆಯೇ ಇದೆ ಎನ್ನುವುದು ಅದರ ಮುಖ್ಯ ಮಿತಿ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅದರಲ್ಲೂ ಸಿನಿಮಾ ನೋಡಿದ ಬಹುತೇಕರು, ಒಂಬತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ‘ಉಗ್ರಂ’ ಸಿನಿಮಾದ ರೀಮೇಕ್ ‘ಸಲಾರ್’ ಎನ್ನುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳ ಮುಂಚೆ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿರುವ ವಿಡಿಯೋ ಎಕ್ಸ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾ ನಿರ್ಮಾಣ ಆರಂಭಿಸಿದಾಗಲೇ ಅದು ‘ಉಗ್ರಂ’ ರೀಮೇಕ್ ಎಂದು ಕೆಲವರು ಹೇಳತೊಡಗಿದ್ದರು. ಆದರೆ, ಚಿತ್ರತಂಡ ಅದನ್ನು ನಿರಾಕರಿಸಿತ್ತು. ಪ್ರಶಾಂತ್ ನೀಲ್ ಅದರ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಇನ್ನೇನು ಚಿತ್ರ ಬಿಡುಗಡೆಯಾಗುತ್ತಿದೆ ಎನ್ನುವಾಗ ಅವರು ಆ ಕುರಿತ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

‘ಉಗ್ರಂ’ ಚಿತ್ರ ಮಾಡುವಾಗ ಪ್ರಶಾಂತ್ ನೀಲ್ ಚಿತ್ರರಂಗಕ್ಕೆ ಹೊಸಬರಾಗಿದ್ದರು. ಹಾಗೂ ಹೀಗೂ ಚಿತ್ರ ಮಾಡಿದ್ದರಾದರೂ ಅದನ್ನು ಬಿಡುಗಡೆ ಮಾಡಲೂ ಅವರಿಗೆ ಸಾಧ್ಯವಾಗಿರಲಿಲ್ಲ. ಕೊನೆಗೆ ನಟ ದರ್ಶನ್ ಸಹಾಯದಿಂದ ಚಿತ್ರ ಬಿಡುಗಡೆ ಕಂಡಿತ್ತು. ಚಿತ್ರದಿಂದ ಪ್ರಶಾಂತ್ ನೀಲ್‌ಗೆ ಹೆಸರು ಬಂತಾದರೂ ಚಿತ್ರ ಚೆನ್ನಾಗಿ ಓಡಿರಲಿಲ್ಲ. ಅದೇ ಕಾರಣಕ್ಕೆ ಆ ಕಥೆಯನ್ನು ಕೊಂಚ ಬದಲಾಯಿಸಿ ‘ಸಲಾರ್’ ಮಾಡಿದ್ದೇನೆ ಎನ್ನುವುದು ಪ್ರಶಾಂತ್ ನೀಲ್ ವಾದ.

‘‘ಉಗ್ರಂ’ ಮಾಡುವಾಗ ನನಗೆ ಸಿನಿಮಾ ಬಗ್ಗೆ ಪ್ಯಾಷನ್ ಇತ್ತು. ಆದರೆ, ಈಗ ನನಗೆ ಚಿತ್ರಮಂದಿರಕ್ಕೆ ಜನರನ್ನು ಕರೆದುಕೊಂಡು ಬರುವುದೇ ಮುಖ್ಯ’ ಎಂದು ಪ್ರಶಾಂತ್ ನೀಲ್ ‘ಉಗ್ರಂ’ ಅನ್ನೇ ಮತ್ತೆ ಹೊಸ ಬಾಟಲಿಗೆ ಹಾಕಿ ‘ಸಲಾರ್’ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಮೂರೇ ಸಿನಿಮಾಗೆ ಪ್ಯಾಷನ್ ಕಳೆದುಕೊಂಡರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ವಿಚಿತ್ರವೆಂದರೆ, ಈ ವರ್ಷ ತೆರೆಗೆ ಬಂದ ಚಿತ್ರಗಳಲ್ಲಿ, ಅದರಲ್ಲೂ ಸ್ಟಾರ್‌ಗಳ ಸಿನಿಮಾಗಳ ಪೈಕಿ, ಸೆನ್ಸಿಬಲಿಟಿ ದೃಷ್ಟಿಯಿಂದ ಉತ್ತಮ ಎನ್ನುವಂಥ ಸಿನಿಮಾಗಳೇ ಇಲ್ಲ. ಶಾರುಖ್ ಖಾನ್‌ನ ‘ಜವಾನ್’, ರಣ್‌ಬೀರ್ ಕಪೂರ್‌ನ ‘ಅನಿಮಲ್’, ರಜನಿಕಾಂತ್ ಅಭಿನಯದ ‘ಜೈಲರ್’ ಮುಂತಾದ ಚಿತ್ರಗಳಲ್ಲಿ ಕಥೆಗಿಂತ ಆಕ್ಷನ್ ದೃಶ್ಯಗಳು, ಹೀರೋ ಬಿಲ್ಡಪ್‌ಗಳು ಇವೇ ಮುಖ್ಯವಾಗಿದ್ದವು. ಇವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡವು ಎನ್ನುವುದು ಬಿಟ್ಟರೆ, ಯಾವ ಅರ್ಥದಲ್ಲೂ ಇವು ಉತ್ತಮ ಚಿತ್ರಗಳೇನಲ್ಲ. ‘ಸಲಾರ್’ ಕೂಡ ಅದೇ ಪಟ್ಟಿಗೆ ಸೇರುತ್ತದೆ ಎನ್ನಲಾಗುತ್ತಿದೆ. ಆದರೆ, ‘ಸಲಾರ್’ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣುವುದೇ ಎನ್ನುವುದರ ಬಗ್ಗೆ ಇನ್ನೂ ಖಾತ್ರಿ ಇಲ್ಲ.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ವಿಚಾರಣೆಗೆ ದರ್ಶನ್‌ ಪರ ವಕೀಲರ ಆಕ್ಷೇಪ

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ, 'ಮಾಫಿ ಸಾಕ್ಷಿ'ಯ...

ಪುರುಷರಿಗೂ ‘ಪೀರಿಯಡ್ಸ್’ ಬರಬೇಕು; ಗಂಡಸರಿಗೆ ‘ಮುಟ್ಟಾಗಿದ್ದರೆ’ ಕೆಲಸದ ನಿಯಮಗಳೇ ಬದಲಾಗುತ್ತಿದ್ದವು: ನಟಿ ಶೃತಿ ಹಾಸನ್

ಪುರುಷರಿಗೂ ಪೀರಿಯಡ್ಸ್ ಬರುವಂತಾಗಿದ್ದರೆ ಪರಿಸ್ಥಿತಿ ತೀರಾ ಭಿನ್ನವಾಗಿರುತ್ತಿತ್ತು. ಉದ್ಯೋಗ ಒಪ್ಪಂದಗಳಲ್ಲಿ 'ಋತುಚಕ್ರದ...

ಆಸ್ಕರ್ 2026: ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ವಿಭಾಗಕ್ಕೆ ಮರಾಠಿಯ ‘ಗೋಂಧಳ್’ ಆಯ್ಕೆ

2026ರಲ್ಲಿ ನಡೆಯಲಿರುವ 99ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಯ (ಆಸ್ಕರ್) 'ಅತ್ಯುತ್ತಮ...

‘ವೆಟ್ಟುವಂ’ | ಪಾ ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ!

ನಿರ್ದೇಶಕ ಪಾ ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್...