ಹಿಜಾಬ್‌ ವಾಪಸ್‌ | ಬಿಜೆಪಿ ಹೋರಾಟ ಮಾಡುವ ಅಗತ್ಯವಿಲ್ಲ: ಬಿ ಎಸ್‌ ಯಡಿಯೂರಪ್ಪ

Date:

Advertisements

ಹಿಜಾಬ್‌ ವಾಪಸ್‌ ಪಡೆಯುವುದರ ವಿರುದ್ಧ ಬಿಜೆಪಿ ಹೋರಾಟ ಮಾಡುವ ಅಗತ್ಯವಿಲ್ಲ. ಇದೊಂದು ಭಂಡ ಸರ್ಕಾರ, ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಆಗದೇ ಇಂತಹ ಕೆಲಸಕ್ಕೆ ಕೈಹಾಕಿ ಜನರ ದಾರಿ ತಪ್ಪಿಸುತ್ತಿದ್ದಾರೆ ಅಷ್ಟೇ. ಇದನ್ನು ಯಾರೂ ಒಪ್ಪುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಆಶಿಸುವ ಪಕ್ಷ ಬಿಜೆಪಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್‌ ನಿಷೇಧವನ್ನು ವಾಪಸ್‌ ಪಡೆಯಲು ಹೊರಟಿರುವ ನಡೆಯನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದರು.

“ಶಾಲಾ, ಕಾಲೇಜು ಮಕ್ಕಳು ಒಂದೇ ಸಮಾನವಾಗಿ ಇರಬೇಕು. ಇದನ್ನು ಧಿಕ್ಕರಿಸಿ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವುದನ್ನು ಕಾಂಗ್ರೆಸ್ ಬಿಡಬೇಕು. ಹಿಜಾಬ್‌ ರದ್ದು ಮಾಡುವಂತೆ ಯಾವ ಮುಸ್ಲಿಂ ನಾಯಕರು ಕೇಳಿದ್ದರು? ಇಂತಹ ಡೊಂಬರಾಟವನ್ನು ಮುಖ್ಯಮಂತ್ರಿಗಳು ಬಿಡಬೇಕು”‌ ಎಂದು ಹರಿಹಾಯ್ದರು.

Advertisements

”ಸಿದ್ದರಾಮಯ್ಯ ಅವರು ಹೀಗೆ ನಡೆದುಕೊಂಡರೆ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಆಗುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಈಗಲಾದ್ರೂ ಸಿದ್ದರಾಮಯ್ಯ ಜಾಗೃತರಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಹಿಜಾಬ್ ನಿಷೇಧ ವಾಪಸ್‌ ಹಿಂದೆ ಸಿದ್ದರಾಮಯ್ಯ ಕುತಂತ್ರ ಅಡಗಿದೆ: ಆರ್‌ ಅಶೋಕ್

ಮುಖ್ಯಮಂತ್ರಿ ಹೇಳಿದ್ದೇನು?

ಮೈಸೂರಿನ ಕಲವಂದೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, “ಹಿಜಾಬ್ ನಿಷೇಧ ವಾಪಸ್ ಪಡೆಯಲು ಸೂಚಿಸಿದ್ದೇನೆ. ಉಡುಪು, ಆಹಾರ ಪದ್ಧತಿ, ಅವು ನಿಮ್ಮ ಆಯ್ಕೆ. ನಾನೇಕೆ ಇವುಗಳಿಗೆ ಅಡ್ಡಿಯಾಗಲಿ? ನೀವು ಬಯಸಿದ ಉಡುಪನ್ನು ಧರಿಸಿ, ನಿಮಗೆ ಬೇಕಾದದ್ದನ್ನು ತಿನ್ನಿ. ನನಗೆ ಬೇಕೆನಿಸಿದ್ದನ್ನು ನಾನು ತಿನ್ನುವೆ. ಉಡುಪು, ಆಹಾರ ಅವರವರ ಇಷ್ಟ ಮತ್ತು ಹಕ್ಕು. ಇದು ತುಂಬಾ ಸರಳ, ಓಟಿಗಾಗಿ ರಾಜಕಾರಣ ಮಾಡಬಾರದು. ನಾವು ಅಂತಹ ರಾಜಕಾರಣ ಮಾಡುವುದಿಲ್ಲ” ಎಂದಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು ಬಿ ಎಸ್ ವೈ ಸಾಧಾರಣವಾಗಿ ಕೋಮುವ್ಯಾಧಿ ಚಟುವಟಿಕೆಗಳನ್ನು ಬೆಂಬಲಿಸಿದ್ದು ವಿರಳ,,, ಆದರೆ ವೈದಿಕ ಪ್ರೇರಿತ ಸಂಘಟನೆಗಳು ಹಿಜಾಬ್ ನಿಷೇಧ ಮಾಡುವ ಒತ್ತಡ ಹಾಕಿದಾಗ ಅವರಿಗೆ ತಿಳಿ ಹೇಳಬೇಕಿತ್ತು,,, ದೇಶದಲ್ಲಿ ಸಾವಿರಾರು ಸಮುದಾಯಗಳು ಇವೆ ಅವರಿಗೆ ಅವರದೇ ಆದ ಊಟಾ ಉಡುಗೆ ತೊಡುಗೆ ಸಂಪ್ರದಾಯಗಳಿವೆ,,, ಪ್ರತಿಯೊಂದು ವಿಷಯದಲ್ಲೂ ಮೂಗುತೂರಿಸುವ ಬಾಹ್ಯ ಸಂಘಟನೆಗಳಿಂದಾಗಿ ದೇಶದಲ್ಲಿ ಸಾಮಾಜಿಕ ಅಶಾಂತಿ ಸೌಹಾರ್ದ ಕದಡುತ್ತಿದ್ದಾರೆ ಅವರಿಗೆ ಯಾಕೆ ತಾಕೀತು ಮಾಡಬಾರದು,,, ಪುರೋಹಿತರ ಆಜ್ಞೆಯಂತೆ ಸರಕಾರ ಯಾಕೆ ವರ್ತಿಸಬೇಕು,,, ಸರ್ಕಾರಗಳು ಸಂವಿಧಾನದ ಆಶಯದಂತೆ ನಡೆಯಬೇಕೇ ಹೊರತು ಫ್ಯಾಸಿಸ್ಟ್ ಸಂಘಟನೆಯ ಹಿಡನ್ ಅಜೆಂಡಾದಂತೆ ಅಲ್ಲ,,, ಉತ್ತರ ಭಾರತದ ವ್ಯಾಪಾರಿಗಳಿಂದ
    ರಾಜ್ಯದ ಹಿತಾಸಕ್ತಿ ಕಾಯಲು ಸಿದ್ದರಾಮಯ್ಯ ಮತ್ತು ನಿಮ್ಮಂಥ ಹಿರಿಯ ನಾಯಕರು ಮುಂದೆ ನಿಲ್ಲಬೇಕು

  2. ಹೌದು ಸರ್. ಯಡಿಯೂರಪ್ಪರಂತಹ ಮುತ್ಸದ್ಧಿ ಜಾತ್ಯತೀತ ನಾಯಕರು ಬಿಜೆಪಿ ಮತ್ತದರ ಅಂಗ ಸಂಘಟನೆಗಳ ಆಟತೋಪಗಳಿಗೆ ಕಡಿವಾಣ ಹಾಕುವತ್ತ ದಿಟ್ಟತೆ ಮೆರೆಯಬೇಕು.ಆಗ ಮಾತ್ರ ಯಡ್ಡಿ -ಸಿದ್ದರಾಮಯ್ಯಂತಹವರು ಇತಿಹಾಸದಲ್ಲಿ ಉಳಿಯುತ್ತಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X