ಸಂಸತ್ ಭದ್ರತಾ ಲೋಪ | ರಾಜ್ಯಕ್ಕೆ ಕಾಲಿಟ್ಟರೂ ಮಾಧ್ಯಮಗಳಿಗೆ ಒಂದೇ ಒಂದು ಹೇಳಿಕೆ ನೀಡದ ಸಂಸದ ಪ್ರತಾಪ್ ಸಿಂಹ!

Date:

Advertisements

ಡಿಸೆಂಬರ್ 13ರಂದು ಸಂದರ್ಶಕರ ಸೋಗಿನಲ್ಲಿ ಸಂಸತ್ತಿಗೆ ಬಂದಿದ್ದ ಇಬ್ಬರು ಯುವಕರು ಏಕಾಏಕಿ ಲೋಕಸಭೆಯ ಹಾಲ್‌ಗೆ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿ, ಭದ್ರತಾ ಲೋಪ ಎಸಗಿದ್ದ ಪ್ರಕರಣದಲ್ಲಿ ಪಾಸ್ ನೀಡಿದ್ದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಆಗಮಿಸಿದ್ದಾರೆ.

ಪ್ರತಿಯೊಂದು ರಾಜಕೀಯ ಬೆಳವಣಿಗೆಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಲು ಮುಂಚೂಣಿಯಲ್ಲಿರುತ್ತಿದ್ದ ಬಿಜೆಪಿ ಸಂಸದ, ಸಂಸತ್ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಒಂದೇ ಒಂದು ಅಧಿಕೃತ ಹೇಳಿಕೆಯನ್ನು ಎಲ್ಲೂ ನೀಡಿಲ್ಲ. ಡಿಸೆಂಬರ್ 13ರಂದು ಘಟನೆ ನಡೆದಿದ್ದರೂ ಈವರೆಗೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ಪ್ರತಾಪ್ ಸಿಂಹ, ನಿನ್ನೆ(ಡಿ.22) ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ಆದರೆ, ‘ನೋ ರಿಯಾಕ್ಷನ್’ ಎನ್ನುವ ಮೂಲಕ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

ಮಾಧ್ಯಮಗಳ ಪ್ರತಿನಿಧಿಗಳನ್ನು ಕಂಡೊಡನೆಯೇ, ‘ನೋ ರಿಯಾಕ್ಷನ್’ ಎಂದು ಕೈ ಸನ್ನೆ ಮಾಡಿದ ಪ್ರತಾಪ್ ಸಿಂಹ ಅವರಲ್ಲಿ ಎಷ್ಟೇ ವಿನಂತಿಸಿದರೂ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Advertisements

“ನಾನೂ ಕೂಡ ಬಹಳಷ್ಟು ವರ್ಷ ಜರ್ನಲಿಸಂ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಚೇಸ್ ಮಾಡಬೇಡಿ. ನಾನೂ ಕೂಡ ಜರ್ನಲಿಸ್ಟ್ ಆಗಿದ್ದೆ” ಎಂದಷ್ಟೇ ಹೇಳಿದ್ದಾರೆ. ಈ ನಡುವೆ ಖಾಸಗಿ ಚಾನೆಲ್‌ನ ಪ್ರತಿನಿಧಿಯೋರ್ವನಿಗೆ, “ನೀನು ಈ ವೃತ್ತಿಗೆ ಹೊಸಬ. ನಾನು ಐದು ವರ್ಷ ಜರ್ನಲಿಸಂ ಓದಿದ್ದೀನಿ. ಸುಮ್ಮನಿದ್ದು ಬಿಡು” ಎಂದು ಕೈಬೆರಳು ತೋರಿಸುವ ಮೂಲಕ ಸುಮ್ಮನಾಗಿಸಿ, ಅಲ್ಲಿಂದ ತೆರಳಿದ್ದಾರೆ. ಇದೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ.

146 ಸಂಸದರ ಅಮಾನತಾಗಿದ್ದರೂ, ಅಮಾನತ್ತಾಗದ ಬಿಜೆಪಿ ಸಂಸದ!
ಸಂಸತ್ ಭದ್ರತಾ ಲೋಪ ಘಟನೆ ನಡೆದಿದ್ದು ಡಿ.13ರಂದು. ಇದು ಡಿ.22ರವರೆಗೆ ನಡೆಯಬೇಕಿದ್ದ ಚಳಿಗಾಲದ ಅಧಿವೇಶನವನ್ನೇ ನುಂಗಿ ಹಾಕಿತ್ತು. ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಸದನದಲ್ಲಿ ಬಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಉತ್ತರಿಸಬೇಕೆಂದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸದಸ್ಯರು ಆಗ್ರಹಿಸಿ, ಗದ್ದಲವೆಬ್ಬಿಸಿದ್ದರು. ಆದರೆ ಈ ಬಗ್ಗೆ ಒಂದೇ ಒಂದು ಹೇಳಿಕೆಯನ್ನು ನೀಡಿರಲಿಲ್ಲ. ಬದಲಾಗಿ ಲೋಕಸಭೆಯಿಂದ 100 ಮಂದಿ ಹಾಗೂ ರಾಜ್ಯಸಭೆಯಿಂದ 46 ಮಂದಿ ಸೇರಿ ಒಟ್ಟು 146 ಮಂದಿ ಸಂಸದರನ್ನು ಅಮಾನತು ಮಾಡಲಾಗಿತ್ತು. ಆದರೆ, ವಿಪರ್ಯಾಸ ಏನೆಂದರೆ, ಪಾಸ್ ನೀಡಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಅಮಾನತು ಮಾಡಲೇ ಇಲ್ಲ.

ಪ್ರತಾಪ್ ಸಿಂಹ ಹೇಳಿಕೆ ದಾಖಲು
ಸಂಸತ್ ಭದ್ರತಾ ಲೋಪ ಘಟನೆಯ ಆರೋಪಿಗಳಿಗೆ ಸಂಸದ ಪ್ರತಾಪ್‌ ಸಿಂಹ, ಸಂದರ್ಶಕರ ಪಾಸ್‌ ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲಾಗಿದೆ. ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಖಚಿತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X