ಚುನಾವಣೆ 2023 | ಮೊಗವೀರರ ಕದನ ಕಣವಾದ ಉಡುಪಿ ಕ್ಷೇತ್ರ!

Date:

Advertisements
ಉಡುಪಿ ಕ್ಷೇತ್ರದಲ್ಲಿ ಎರಡು ಪಕ್ಷಗಳು ಮೊಗವೀರ ಯುವಕರಿಗೆ ಟಿಕೆಟ್ ನೀಡಿರುವುದು ಜಾತಿ ಆಧಾರಿತ ರಾಜಕೀಯಕ್ಕೆ ಇಂಬು ನೀಡಿರುವಂತೆ ಕಾಣಿಸಿಕೊಂಡಿವೆ. ಆ ಮೂಲಕ ಉಡುಪಿ ಕ್ಷೇತ್ರವೀಗ ಮೊಗವೀರರ ಕದನ ಕಣವಾಗಿ ಮಾರ್ಪಟ್ಟಿದೆ

ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ದಿನ ಸಮೀಪಿಸಿರುವಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿವೆ.ಉಡುಪಿ ಕ್ಷೇತ್ರದಲ್ಲಿ ಎರಡು ಪಕ್ಷಗಳು ಮೊಗವೀರ ಯುವಕರಿಗೆ ಟಿಕೆಟ್ ನೀಡಿರುವುದು ಜಾತಿ ಆಧಾರಿತ ರಾಜಕೀಯಕ್ಕೆ ಇಂಬು ನೀಡಿರುವಂತೆ ಕಾಣಿಸಿಕೊಂಡಿವೆ. ಆ ಮೂಲಕ ಉಡುಪಿ ಕ್ಷೇತ್ರವೀಗ ಮೊಗವೀರರ ಕದನ ಕಣವಾಗಿ ಮಾರ್ಪಟ್ಟಿದೆ.

ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿದ್ದ ಎಂಟು ಜನ ಆಕಾಂಕ್ಷಿಗಳಲ್ಲಿ ಮೊಗವೀರ ಸಮುದಾಯದವರೇ ಹೆಚ್ಚಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಮಾಜಿ ಅಧ್ಯಕ್ಷ ದಿವಾಕರ ಕುಂದರ್, ಕೋಟ ಬ್ಲಾಕ್ ಅಧ್ಯಕ್ಷ ಶಂಕರ ಕುಂದರ್, ಮಾಜಿ ಜಿಲ್ಲಾ ಪರಿಷತ್ ಸದಸ್ಯೆ, ಮಹಿಳಾ ಮಂಡಳಿ – ಒಕ್ಕೂಟಗಳ ನಾಯಕಿ, ಅವಿಭಜಿತ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕಿನ ಸ್ಥಾಪಕಾಧ್ಯಕ್ಷೆ ಸರಳಾ ಕಾಂಚನ್ ರ ಮಗ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಯುವ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹೀಗೆ ಐದು ಜನ ಮೊಗವೀರ ಸಮುದಾಯದವರೇ ಆಗಿದ್ದು ಆ ಪೈಕಿ ಪ್ರಸಾದ್ ರಾಜ್ ಕಾಂಚನ್ ಅವರನ್ನು ಆಯ್ಕೆ ಮಾಡಿದ್ದ ಕೈ ಹೈಕಮಾಂಡ್ ಚುನಾವಣೆಯಲ್ಲಿ ಜಾತಿ ರಾಜಕೀಯದ ಜೊತೆ ಚುನಾವಣಾ ಖರ್ಚು ನಿಭಾಯಿಸುವ ತಾಕತ್ತನ್ನು ಗಮನಿಸಿ ಆಯ್ಕೆ ಮಾಡಿತ್ತು!

ತಡವಾಗಿ ಅಭ್ಯರ್ಥಿ ಘೋಷಿಸಿರುವ ಬಿಜೆಪಿಯೂ ಹಾಲಿ ಶಾಸಕ ರಘುಪತಿ ಭಟ್ಟರನ್ನು ಸೈಲೆಂಟಾಗಿ ಸೈಡಿಗೆ ಸರಿಸಿ ಮೊಗವೀರ ಯುವಕ ಯಶ್ಪಾಲ್ ಸುವರ್ಣರನ್ನು ಕಣಕ್ಕಿಳಿಸಿದೆ. ಹಾಗೇ ನೋಡಿದರೇ ಬಿಜೆಪಿಯಲ್ಲೂ ಮೂರು ಜನ ಮೊಗವೀರರು ಟಿಕೆಟ್ ಬಯಸಿದ್ದರು. ಕಾಂಗ್ರೆಸ್‌ನಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವಗಿರಿ ಗಿಟ್ಟಿಸಿಕೊಂಡಿದ್ದ ಪ್ರಮೋದ್ ಮಧ್ವರಾಜ್ ಕೆಲವು ತಿಂಗಳ ಹಿಂದೆ ಪಕ್ಷದಲ್ಲಿ ಉಸಿರುಗಟ್ಟುತ್ತಿದೆ ಎಂದೇಳಿ ಬಿಜೆಪಿ ಸೇರಿ ಅದೃಷ್ಟ ಪರೀಕ್ಷೆಗೆ ಯೋಚಿಸಿದ್ದರು. ಉಡುಪಿ ನಗರಸಭೆಯ ಕೊಡವೂರು ವಾರ್ಡಿನ ಸದಸ್ಯರಾಗಿ ಕ್ರಿಯಾಶೀಲರಾಗಿರುವ ವಿಜಯ ಕುಂದರ್ ಅವರೂ ವಿಭಿನ್ನ ಚಟುವಟಿಕೆಯ ಮೂಲಕ ಸುದ್ದಿಯಲ್ಲಿದ್ದು ಟಿಕೇಟ್ ಬಯಸಿದ್ದರು.

ಇದನ್ನೂ ಓದಿ ಈ ದಿನ ಸಂಪಾದಕೀಯ| 2023ರ ಐಟಿ ನಿಯಮಗಳು- ಅಭಿವ್ಯಕ್ತಿ ಸ್ವಾತಂತ್ರ್ಯ ಹಣಿಯುವ ಮತ್ತೊಂದು ಹುನ್ನಾರ?

ಆದಿ ಉಡುಪಿ ಬೆತ್ತಲೆ ಪ್ರಕರಣದ ಮೂಲಕ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದ ಯಶ್ಪಾಲ್ ಸುವರ್ಣ ಉಡುಪಿ ನಗರ ಸಭೆಯ ಮಾಜಿ ಸದಸ್ಯರಾಗಿ, ಅವಿಭಜಿತ ದ.ಕ. ಜಿಲ್ಲಾ ಮೀನುಗಾರಿಕಾ ಫೆಡರೇಷನ್ ಮತ್ತು ಮೊಗವೀರ ಸಮುದಾಯದ ಪ್ರತಿಷ್ಢಿತ ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ ಬೆಳೆದಿದ್ದ ಯಶ್ಪಾಲ್ ಉಡುಪಿಯಲ್ಲಿ ಬಲ ಪಂಥೀಯ ರಾಜಕಾರಣವನ್ನು ಬೆಳೆಸುವುದರ ಜೊತೆ ಸಂಘ ಪರಿವಾರದ ನಿಯತ್ತಿನ ಕಾರ್ಯಕರ್ತರಾಗಿ ಆರ್ಥಿಕವಾಗಿಯೂ ಬಲ ಹೆಚ್ಚಿಸಿಕೊಂಡು ಉಡುಪಿ ಅಥವಾ ಕಾಪು ಕ್ಷೇತ್ರದಿಂದ ಆಯ್ಕೆಯಾಗ ಬಯಸಿದ್ದರು. ಇದೀಗ ಅವರ ತಂತ್ರ ಫಲಿಸಿದ್ದು ಕಾಪುವಿನಲ್ಲಿ ಹಾಲಿ ಶಾಸಕ ಲಾಲಾಜಿ ಮೆಂಡನ್ ರಿಗೆ ಟಿಕೇಟ್ ಕೊಡದ ಬಿಜೆಪಿ ಅದನ್ನು ಸರಿತೂಗಿಸಲು ಇವರನ್ನೇ ಆಯ್ಕೆ ಮಾಡಿ ಕಣಕ್ಕಿಳಿಸಿದೆ. ಈ ಮೂಲಕ ಉಡುಪಿ ಕ್ಷೇತ್ರ ಮೊಗವೀರರ ಕದನ ಕಣವಾಗಿ ಮಾರ್ಪಟ್ಟಿದೆ! ಕಣದಲ್ಲಿರುವ ಇಬ್ಬರು ಮೊಗವೀರರ ಪೈಕಿ ಕ್ಷೇತ್ರದ ಜನ ಯಾರನ್ನು ಆಯ್ಕೆ ಮಾಡಬಹುದೆಂಬುದನ್ನು ಮುಂದಿನ ದಿನಗಳೇ ಹೇಳ ಬಲ್ಲವು.

ಇದನ್ನೂ ಓದಿ ಬಿಜೆಪಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ಆಘಾತ : ಲಕ್ಷ್ಮಣ ಸವದಿ ರಾಜೀನಾಮೆ ಘೋಷಣೆ

Advertisements

ಕ್ಷೇತ್ರದಲ್ಲಿ ಹೆಚ್ಚು ಅವಧಿಯ ಶಾಸಕತ್ವ ಮೊಗವೀರರದ್ದೇ ಆಗಿತ್ತು ಎನ್ನುವುದು ಇತಿಹಾಸ! ದಿವಂಗತ ಎಸ್ ಕೆ ಅಮೀನ್, ಮಲ್ಪೆ ಮಧ್ವರಾಜ್, ಮನೋರಮಾ ಮಧ್ವರಾಜ್, ಯು.ಆರ್.ಸಭಾಪತಿ ಮತ್ತು ಪ್ರಮೋದ್ ಮಧ್ವರಾಜ್ ಮೊಗವೀರ ಸಮುದಾಯದವರೇ ಆಗಿದ್ದು ಉಡುಪಿಯ ಶಾಸಕರಾಗಿದ್ದರು. ಅವರ ಹೊರತಾಗಿ ಉಪೇಂದ್ರ ನಾಯ್ಕ್ ಮತ್ತು ಕೆ.ರಘುಪತಿ ಭಟ್ ಅವರಿಬ್ಬರೇ ಬೇರೆ ಸಮುದಾಯದಿಂದ ಇಲ್ಲಿ ಶಾಸಕರಾದವರು. 1952ರ ಪ್ರಥಮ ಚುನಾವಣೆಯಿಂದ 2013ರವರೆಗಿನ ಚುನಾವಣಾ ಫಲಿತಾಂಶದ ಇತಿಹಾಸವ ಗಮನಿಸಿದರೇ ಕ್ಷೇತ್ರದಲ್ಲಿ ಹೆಚ್ವು ಅವಧಿಯ ಶಾಸಕಗಿರಿ ಮೊಗವೀರ ಸಮುದಾಯದ್ದೇ ಆಗಿತ್ತು. ಅದರಲ್ಲೂ 1967ರಿಂದ 1989ರವರೆಗಿನ ಸುಧೀರ್ಘ ಅವಧಿ ಮತ್ತು 2013-2018 ರ ಅವಧಿಯಲ್ಲಿ ಕ್ಷೇತ್ರಡಾಳಿತವು ಪ್ರತಿಷ್ಟಿತ ಮಲ್ಪೆ ಮಧ್ವರಾಜ್ ಕುಟುಂಬದ್ದೇ ಆಗಿತ್ತು ಎನ್ನುವ ದಾಖಲೆಯೂ ಇಲ್ಲಿಯದ್ದು!

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X