ಪತ್ರ | ಧರ್ಮಸ್ಥಳ ಮಿನಿ ವಿಮಾನ ನಿಲ್ದಾಣ ಪ್ರಸ್ತಾಪ: ಇದು ಬಡವರ ಕಣ್ಣೀರ ಕತೆ

Date:

Advertisements

ಕರ್ನಾಟಕದ ಜನರು ಓದಲೇಬೇಕಾದ ಕಣ್ಣೀರ ಕತೆ ಇದು. ಸಮಾಜವಾದಿ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಆಡಳಿತದಲ್ಲೇ ಈ ದುರಂತ ನಡೆಯುತ್ತಿರುವುದು ಎಲ್ಲರಲ್ಲೂ ಹತಾಶೆ ಉಂಟು ಮಾಡಿದೆ. ಈಗಲಾದರೂ ಅವರು ಎಚ್ಚತ್ತುಕೊಂಡು ಈ ಅನ್ಯಾಯ ಸರಿಪಡಿಸುವರೋ ಏನೋ ಎಂಬ ಹಂಬಲ ಎಲ್ಲರದ್ದೂ.

ಬಿಜೆಪಿ ಸರ್ಕಾರದ ಕೊನೆಯ ದಿನಗಳ ಅವಧಿಯಲ್ಲಿ ಅಂದಿನ ಸಚಿವರಾಗಿದ್ದ ವಿ ಸೋಮಣ್ಣ ಅವರು ಧರ್ಮಸ್ಥಳಕ್ಕೆ ಮಿನಿ ವಿಮಾನ ನಿಲ್ದಾಣ ಮಂಜೂರು ಮಾಡಿದರು. ಧರ್ಮಸ್ಥಳಕ್ಕೆ ವಿಮಾನದಲ್ಲಿ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ. ಆದರೂ ಯಾರು ವಿರೋಧ ವ್ಯಕ್ತಪಡಿಸಲಿಲ್ಲ.

ಈಗ ಈ ವಿಮಾನ ನಿಲ್ದಾಣದ ಹೆಸರಿನಲ್ಲಿ ನಡೆಯುತ್ತಿರುವುದು ಮಾತ್ರ ಹಗಲು ದರೋಡೆ. ಧಮಸ್ಥಳದ ಬಳಿ ನಿರ್ಮಾಣವಾಗಬೇಕಿದ್ದ ಈ ಮಿನಿ ವಿಮಾನ ನಿಲ್ದಾಣವನ್ನು ಸುಮಾರು ಐದು ಕಿಲೋ ಮೀಟರ್ ದೂರದಲ್ಲಿ ನಿರ್ಮಿಸಲು ಅಧಿಕಾರಿಗಳು, ರಾಜಕಾರಣಿಗಳು ಸ್ಕೆಚ್ ಹಾಕಿದ್ದಾರೆ. ಸರ್ವೇ ಕೂಡಾ ಆರಂಭವಾಗಿದೆ. ಬಡವರು, ನಿರ್ಗತಿಕರ ಮನೆಗಳನ್ನೆಲ್ಲ ಆಪೋಶನ ತೆಗೆದುಕೊಂಡು ಉಳ್ಳವರ ಜಮೀನಿನ ಬೆಲೆ ಇನ್ನಷ್ಟು ಗಗನಮುಖಿಯಾಗುವಂತೆ ಮಾಡುವ ರೀತಿಯಲ್ಲೇ ಇದರ ರೂಪುರೇಷೆ ಮಾಡಲಾಗುತ್ತಿದೆ.

Advertisements

ಯಾವುದೇ ಒಂದು ಪ್ರಾಜೆಕ್ಟ್ ಆರಂಭಕ್ಕೆ ಮುನ್ನ ಒಂದು ಕಾರ್ಯಸಾಧ್ಯತಾ ಸಮೀಕ್ಷೆ ನಡೆಸಲೇಬೇಕು. ಅದನ್ನು ಇಲ್ಲಿ ನಡೆಸಲಾಗಿಲ್ಲ. ಸರ್ಕಾರ 200 ಕೋಟಿ ರೂ. ಹಣ ವ್ಯಯಯಿಸುತ್ತಿದೆ. ಅದರ ಲಾಭ ಯಾರಿಗೆ? ಇದನ್ನೆಲ್ಲ ಯೋಚಿಸದೆ, ಸರ್ಕಾರ ಈಗ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಮುಂದಾಗಿರುವುದು ಎಷ್ಟು ಸರಿ?

ಮಿನಿ ವಿಮಾನ ನಿಲ್ದಾಣ ಅಗತ್ಯವಿದ್ದರೆ, ಧರ್ಮಸ್ಥಳದ ಪಕ್ಕದಲ್ಲೇ ಸರ್ಕಾರಿ ಜಮೀನಿನಲ್ಲೇ ಅದನ್ನು ನಿರ್ಮಿಸಬಹುದು. ಅದರ ಬದಲಿಗೆ ಯಾವುದೊ ಒಂದು ಮೂಲೆಯಲ್ಲಿ ಅದನ್ನು ನಿರ್ಮಿಸುವ ಹುನ್ನಾರ ಏನು? ಅದರ ಅಂತಿಮ ಲಾಭ ಯಾರಿಗೆ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರವಿದೆಯೇ?

ಈಗ ಈ ವಿಮಾನ ನಿಲ್ದಾಣವನ್ನು ಸುಮಾರು ಐದು ಕಿಲೋಮೀಟರ್ ದೂರದ ಕನ್ಯಾಡಿ ಎಂಬಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲಿರುವವರೆಲ್ಲರೂ ಬಡವರು. ಅವರು ಖಂಡಿತಾ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯ ಹೊಂದಿಲ್ಲ. ಇದನ್ನು ಅರಿತುಕೊಂಡೆ ಈಗ ಎಲ್ಲರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ.

ಧರ್ಮಸ್ಥಳದ ಭಕ್ತರಿಗೆ ಈಗ ಬೇಕಿರುವುದು ಅಲ್ಲಿಗೆ ನೇರ ರೈಲು ಸಂಪರ್ಕ. ಅದನ್ನು ಬಿಟ್ಟು ಈ ವಿಮಾನ ನಿಲ್ದಾಣ ಅಗತ್ಯವಿದೆಯೇ? ಈ ಬಗ್ಗೆ ಕರ್ನಾಟಕ ಸರ್ಕಾರ ಮೌನ ಮುರಿಯುವುದೇ?

– ಸೌಗಂಧಿನಿ ಬಹುಜನ
ಕ್ರಾಂತಿ ನೀರ ಚಿಲುಮೆ
ಉಜಿರೆ, ಬೆಳ್ತಂಗಡಿ ತಾಲೂಕು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ: 🤔 ಧರ್ಮಸ್ಥಳದ ಬಡವರ ಕಣ್ಣೀರ ಸಮಸ್ಯೆ ವಿಚಾರಿಸುವ ಸಮಯ ಬಂದಿದೆ. ಸರ್ಕಾರದ ನಿರ್ಣಯ ಸರಿಯಾಗಿದೆಯೇ ಅಥವಾ ಕನ್ಯಾಡಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ್ದೇವೆಯೇ ಎಂಬ ಪ್ರಶ್ನೆಗಳು ನನಗೆ ಇವೆ. 🏗️ ಸರ್ಕಾರಕ್ಕೆ ನೀಡಿದ ಬಡವರ ಚಂದಾದಾರಿ ಹೇಗೆ ಹಣ ವ್ಯಯಿಸಲಾಗುತ್ತದೆ ಎಂಬುದು ನನಗೆ ಆಶ್ಚರ್ಯ ತರುವುದು. ನಮ್ಮ ಬೆಂಬಲದಿಂದ ಸತ್ಯ ಮತ್ತು ನ್ಯಾಯ ಆದರ್ಶಗಳನ್ನು ಸಾರಬೇಕು. 💪 ಮಿನಿ ವಿಮಾನ ನಿಲ್ದಾಣವು ಅಗತ್ಯವೇ ಆಗಿದ್ದರೆ, ಸರ್ಕಾರದ ಜಮೀನಿನಲ್ಲಿ ಅದನ್ನು ನಿರ್ಮಿಸಲು ಸಾಧ್ಯವಿದೆ. ಬದಲಾಗಿ, ಬಡವರ ಸಮಸ್ಯೆಗಳನ್ನು ಪರಿಹರಿಸದೆ ಹೊಡೆಯುವ ವಿಷಯದಲ್ಲಿ ಸರ್ಕಾರಕ್ಕೆ ಪ್ರಶ್ನೆಗಳಿವೆ. 🤷‍♂️ ನಾವು ನಮ್ಮ ನೋಟದಿಂದ ಈ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮೂಲಕ ಸರ್ಕಾರಕ್ಕೆ ಸಂಕೇತಿಸಬೇಕು. ಬಡವರ ಆತ್ಮೀಯತೆಗಾಗಿ ನಮ್ಮ ಸಹಾಯ ಸಾಕು! 🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X