ಏಕರೂಪ ನಾಗರಿಕ ಸಂಹಿತೆ ಈ ಮಣ್ಣಿನ ಕಾನೂನಾಗಿದ್ದು, ಅನುಷ್ಠಾನಗೊಳಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಕಾನೂನಿನ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಪಶ್ವಿಮ ಬಂಗಾಳದ ಬಿಜೆಪಿ ಸಾಮಾಜಿಕ ಮಾಧ್ಯಮ ಹಾಗೂ ಐಟಿ ವಿಂಗ್ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಸಿಎಎ ಅನುಷ್ಠಾನಗೊಳಿಸುವುದಕ್ಕೆ ಪಕ್ಷ ಬದ್ಧವಾಗಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 42 ಲೋಕಸಭಾ ಸ್ಥಾನಗಳಲ್ಲಿ 35ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸಿದರು. 2019ರಲ್ಲಿ ಕೇಸರಿ ಪಕ್ಷ 18 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.
“ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕು. ಬಿಜೆಪಿ ಸರ್ಕಾರವೆಂದರೆ ಒಳನುಸಳುವಿಕೆ, ಜಾನುವಾರು ಕಳ್ಳಸಾಗಾಣಿಕೆಯ ಅಂತ್ಯ ಹಾಗೂ ಧಾರ್ಮಿಕ ಕಿರುಕುಳ ಅನುಭವಿಸುತ್ತಿರುವ ಜನರಿಗೆ ಸಿಎಎ ಯೋಜನೆಯನ್ನು ಜಾರಿಗೊಳಿಸುವುದು ಎಂದರ್ಥ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿಎಎ ವಿರುದ್ಧ ಮಮತಾ ಬ್ಯಾನರ್ಜಿ ಜನರ ದಾರಿ ತಪ್ಪಿಸುತ್ತಿರುವುದರ ವಿರುದ್ಧ ಕಟುವಾಗಿ ವಾಗ್ದಾಳಿನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪೇಗೌಡ ವಿಮಾನನಿಲ್ದಾಣ ಸೀಮೆ- ರೈತರ ಕೊರಳ ಬಿಗಿದಿರುವ ಭೂಮಾಫಿಯಾ, ಕುಣಿಕೆ ಕಳಚಲಿ ಕಾಂಗ್ರೆಸ್ ಸರ್ಕಾರ
“ಒಂದೊಂದು ಸಲ, ಈ ಮಹಿಳೆ ಸಿಎಎ ದೇಶದಲ್ಲಿ ಅನುಷ್ಠಾನವಾಗುತ್ತದೆಯೋ ಇಲ್ಲವೋ ಎಂದು ವಲಸಿಗರ ಬಗ್ಗೆ ಜನರ ದಾರಿ ತಪ್ಪಿಸುತ್ತಾರೆ. ಸಿಎಎ ನೆಲದ ಕಾನೂನಾಗಿದ್ದು, ಇದನ್ನು ಅನುಷ್ಠಾನಗೊಳಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಬಗ್ಗೆ ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ನಮ್ಮ ಪಕ್ಷ ಇದಕ್ಕೆ ಬದ್ಧವಾಗಿದೆ” ಎಂದು ಹೇಳಿದರು.
2019ರಲ್ಲಿ ಸಂಸತ್ತಿನಲ್ಲಿ ಸಿಎಎ ಮಸೂದೆ ಅಂಗೀಕಾರವಾದಾಗ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರು. ವಿವಾದಾತ್ಮಕ ಸಿಎಎ ಮಸೂದೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಬಿಜೆಪಿ ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ಪಕ್ಷದ ಪ್ರಮುಖ ಯೋಜನೆಯಾಗಿತ್ತು. ಬಿಜೆಪಿ ನಾಯಕರು ಈ ಅಂಶವನ್ನು ಪಶ್ಚಿಮ ಬಂಗಾಳದಲ್ಲಿ ಕೇಸರಿ ಉದಯಕ್ಕೆ ಕಾರಣವಾಗಿದೆ ಎಂದು ಪರಿಗಣಿಸುತ್ತಾರೆ.
ಸಿಎಎಯು 2014 ಡಿಸೆಂಬರ್ 31 ಹಾಗೂ ಅದಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಜೈನ, ಬುದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡುವ ಕಾನೂನಾಗಿದೆ.
ಚುನಾವಣೆ ಅನುಕೂಲಕ್ಕಾಗಿ ಹೇಳುವುದು ಎಲ್ಲವೂ ನೆಲದ ಕಾನೂನುಗಳು,, ಚುನಾವಣೆ ನಂತರ ಎಲ್ಲವೂ ಆಪ್ತ ಬಂಡವಾಳಿಗರ ಕಾನೂನುಗಳು,,,ದೇಶ ಮತ್ತು ದೇಶದ ಜನರು ಹೊರಗೆ ಬರದಂತೆ ನಿಮ್ಮ ತಂತ್ರಗಳಲ್ಲಿ ಸಿಕ್ಕೊಂಬಿಟ್ಟಿದ್ದಾರೆ,, ದೇವರೇ ಕಾಪಾಡಬೇಕು