ಈ ದಿನ ಸಂಪಾದಕೀಯ | ಕೆಂಪೇಗೌಡ ವಿಮಾನನಿಲ್ದಾಣ ಸೀಮೆ- ರೈತರ ಕೊರಳ ಬಿಗಿದಿರುವ ಭೂಮಾಫಿಯಾ, ಕುಣಿಕೆ ಕಳಚಲಿ ಕಾಂಗ್ರೆಸ್ ಸರ್ಕಾರ

Date:

ಬಿಜೆಪಿ ಸರ್ಕಾರ ಜಾರಿ ಮಾಡಿರುವ 2019ರ ಭೂಸ್ವಾಧೀನ ಕಾಯಿದೆ ಮತ್ತು 2020ರ ಭೂಸುಧಾರಣಾ ಕಾಯಿದೆಗಳು ರೈತನ ಪಾಲಿನ ಮರಣಶಾಸನಗಳಾಗಿ ಪರಿಣಮಿಸಿವೆ

- Advertisement -

ಕೃಷಿವಲಯ ತೀವ್ರ ಒತ್ತಡಕ್ಕೆ ಸಿಲುಕಿದೆ. ಬೆಳೆ ವಿಮೆ, ಸರ್ಕಾರದಿಂದ ಕೃಷಿ ಉತ್ಪನ್ನಗಳ ಖರೀದಿ, ಮಾರುಕಟ್ಟೆ, ಸಾಲ, ದಾಸ್ತಾನು ವ್ಯವಸ್ಥೆಗಳು ಅವಗಣನೆಗೆ ಗುರಿಯಾಗಿ ನರಳಿವೆ. ಮಳೆಯನ್ನೇ ಅತಿಯಾಗಿ ಆಶ್ರಯಿಸಿರುವ ಒಕ್ಕಲುತನ, ಧಾರಣೆಗಳ ಕುಸಿತ, ಒಂದೆಕರೆ ಗಾತ್ರಕ್ಕೆ ಕುಗ್ಗುತ್ತ ನಡೆದಿರುವ ಭೂ ಹಿಡುವಳಿಗಳು, ಹದ್ದುಮೀರಿದ ಮನುಷ್ಯಲಾಲಸೆಯನ್ನು ಪ್ರತಿಭಟಿಸಿ ಎರ್ರಾಬಿರ್ರಿಯಾಗಿರುವ ಹವಾಮಾನ, ಜಾಳಾಗುತ್ತಿರುವ ನೆಲ, ಕೃಷಿಯೇತರ ಉದ್ದೇಶಗಳಿಗೆ ಕೃಷಿ ಭೂಮಿಯ ಪರಿವರ್ತನೆ ಈ ವಲಯವನ್ನು ಹಿಂಡಿ ಹಿಪ್ಪೆ ಮಾಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಬೆಂಗಳೂರು ನಗರ ಜಾಗತಿಕ ಭೂಪಟದಲ್ಲಿ ಪ್ರಧಾನ ಸ್ಥಾನ ಗಳಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಿಲ್ದಾಣದ ಸನಿಹದಲ್ಲಿ ರೈತರು ಒಂದೂವರೆ ವರ್ಷದಿಂದ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವಿಮಾನನಿಲ್ದಾಣದ ಬಳಿ ಕೈಗಾರಿಕೆ ಮತ್ತು ಬಂಡವಾಳ ಪಾರ್ಕ್‌ನ ಎರಡನೆಯ ಹಂತವನ್ನು ಅಭಿವೃದ್ಧಿಪಡಿಸುವ ಯೋಜನೆ ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಒಂದನೆಯ ಹಂತದಲ್ಲಿ ಇದೇ ಉದ್ದೇಶಕ್ಕೆಂದು ರೈತರಿಂದ ಸಾವಿರ ಎಕರೆಗಳಿಗೂ ಹೆಚ್ಚಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಸ್ಥಳೀಯ ಕೃಷಿ ಅರ್ಥವ್ಯವಸ್ಥೆ ಛಿದ್ರಗೊಂಡಿತ್ತು. ಪರಿಸರ ಸಮಸ್ಯೆಗಳು ಸರಮಾಲೆಯೇ ತಲೆದೋರಿತ್ತು. ರೈತರನ್ನು ಒಕ್ಕಲೆಬ್ಬಿಸಿ ಖಾಲಿ ಮಾಡಿಸಿದ ಈ ಜಮೀನನ್ನು ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಬಿಡಿಗಾಸಿಗೆ ನೀಡಲಾಗಿದೆ. ಎರಡೇ ಕಾರ್ಖಾನೆಗಳು ತಲೆಯೆತ್ತತೊಡಗಿವೆ. ನೆಲ ಕಳೆದುಕೊಂಡ ರೈತರಿಗೆ ಈ ‘ಅಭಿವೃದ್ಧಿ’ಯಲ್ಲಿ ಪಾಲು ಸಿಕ್ಕಿಲ್ಲ. ಉದ್ಯೋಗಾವಕಾಶದ ಸುಳಿವೇ ಇಲ್ಲ. ಅವರ ಹಿತಾಸಕ್ತಿಯನ್ನು ಲೆಕ್ಕಿಸುವವರೇ ದಿಕ್ಕಿಲ್ಲ. ಅವರ ಪ್ರತಿಭಟನೆ ಅರಣ್ಯರೋದನ. ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ನೀಡಿದ್ದ ವಚನವನ್ನು ಮರೆತೇ ಹೋಗಿದೆ.

ಈ ಸೀಮೆಯ ಹದಿಮೂರು ಹಳ್ಳಿಗಳ ರೈತರು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ನಿತ್ಯ ಸರದಿಯ ಪ್ರಕಾರ ಸೇರುತ್ತಾರೆ. ಚಂದಾ ಎತ್ತಿದ ಹಣ ಮತ್ತು ದವಸಧಾನ್ಯದ ಸಾಮೂಹಿಕ ಭೋಜನ, ಆನಂತರ ಕೃಷಿಯನ್ನು ಬಾಧಿಸುವ ವಿಷಯಗಳ ಚರ್ಚೆಯಲ್ಲಿ ತೊಡಗುತ್ತಾರೆ. 1,777 ಎಕರೆಗಳಷ್ಟು ಕೃಷಿಭೂಮಿಯನ್ನು ವಶಪಡಿಸಿಕೊಳ್ಳುವ ತೀರ್ಮಾನವನ್ನು ಕೈ ಬಿಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಾರೆ. ಎಷ್ಟೇ ಪರಿಹಾರ ನೀಡಿದರೂ ತಮ್ಮ ಹೊಲನೆಲಗಳನ್ನು ಬಿಟ್ಟುಕೊಡೆವು, ರೈತರಾಗಿಯೇ ಉಳಿಯುವೆವು ಎಂಬುದು ಅವರ ದೃಢ ಸಂಕಲ್ಪ. ರಾಗಿ, ನೀಲಿ ದ್ರಾಕ್ಷಿ, ತರಾವರಿ ತರಕಾರಿಗಳು, ಹಣ್ಣುಗಳು, ಹೂವುಗಳು ಸೊಂಪಾಗಿ ಬೆಳೆಯುವ ಫಲವತ್ತು ನೆಲದ ಸೀಮೆಯಿದು. ಸರ್ಕಾರ ಜಮೀನು ಸ್ವಾಧೀನಪಡಿಸಿಕೊಂಡರೆ ಲಕ್ಷ ಲಕ್ಷ ಜೀವನೋಪಾಯಗಳು ನೆಲಕಚ್ಚುತ್ತವೆ. ನೆಲವನ್ನೇ ನಂಬಿ ಬದುಕುವ ಮಕ್ಕಳ ಬೇರುಗಳು ಬುಡಮೇಲಾಗಿ ವಲಸೆಯ ಸಂಕಟದ ವಿಷವೃತ್ತಕ್ಕೆ ಬೀಳುತ್ತವೆ. ಈ ದುರಂತ ಹೊಸ ವಿದ್ಯಮಾನವೇನೂ ಅಲ್ಲ. ದಶಕ ದಶಕಗಳಿಂದ ನಡೆದುಕೊಂಡು ಬಂದಿರುವಂತಹುದೇ. ಆದರೆ ಯಾವುದು ವಿಕಾಸ, ಯಾವುದು ವಿನಾಶ ಎಂಬ ನಿಚ್ಚಳ ನೋಟ ಕಾಣದಾಗಿದೆ. ನಗದು ಹಣಕ್ಕಾಗಿ ಜೀವಪೋಷಣೆಯ ನಿಜಸಂಪತ್ತನ್ನು ಕೈಯಾರೆ ಹಾಳುಗೆಡವಲಾಗುತ್ತಿದೆ. ತಾನು ಕುಳಿತ ಟೊಂಗೆಯನ್ನೇ ಕಡಿದು ಹಾಕುವ ಮೂರ್ಖ ಮಾನವ ಇಂದು ಸರ್ವವ್ಯಾಪಿ. ಭೂದಲ್ಲಾಳಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳನೇಕರು ಈ ವಿಧ್ವಂಸಕ ಕೃತ್ಯದಲ್ಲಿ ಸಕ್ರಿಯರು. ಸಾಮಾಜಿಕ ಮಾನವಶಾಸ್ತ್ರಜ್ಞೆ ಎ.ಆರ್.ವಾಸವಿ ಅವರು ಈ ಕುರಿತು ಇತ್ತೀಚೆಗೆ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ಬರೆದಿರುವ ಲೇಖನ ಕಣ್ಣು ತೆರೆಸುವಂತಹುದು. ಆದರೆ ನಿದ್ರೆ ಮಾಡಿದವರಂತೆ ನಟಿಸುವವರನ್ನು ಯಾರು ಎಚ್ಚರಿಸಲಾದೀತು?

ಬಿಜೆಪಿ ಸರ್ಕಾರ ಜಾರಿ ಮಾಡಿರುವ 2019ರ ಭೂಸ್ವಾಧೀನ ಕಾಯಿದೆ ಮತ್ತು 2020ರ ಭೂಸುಧಾರಣಾ ಕಾಯಿದೆಗಳು ರೈತನ ಪಾಲಿನ ಮರಣಶಾಸನಗಳಾಗಿ ಪರಿಣಮಿಸಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕಾಯಿದೆಗಳನ್ನು ಮರುವಿಮರ್ಶೆಗೆ ಒಳಪಡಿಸಬೇಕು. ರೈತನ ಕೊರಳಿಗೆ ಬಿಗಿದಿರುವ ಉರುಳನ್ನು ಕಳಚಬೇಕು. ರೈತನನ್ನು ಹೆಬ್ಬಾವಿನಂತೆ ಸುತ್ತಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಮಾಫಿಯಾವನ್ನು ನಿಗ್ರಹಿಸಬೇಕು. ಘನತೆಯಿಂದ ಬದುಕುವ ಹಕ್ಕನ್ನು ರೈತರಿಗೆ ಮರಳಿಸಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...