ರಸ್ತೆಗಳು ಗುಂಡಿಮಯವಾಗಿದ್ದರೆ, ಚರಂಡಿ, ಮ್ಯಾನ್ ಹೋಲ್ಗಳಿಂದ ಕೊಳಚೆ ನೀರು ಉಕ್ಕಿ ರಸ್ತೆಯಲ್ಲಿ ಹರಿದು ಸುಗಂಧ ಬೀರುತ್ತಿವೆ! ಬ್ರ್ಯಾಂಡ್ ಬೆಂಗಳೂರು ಬ್ಯಾಂಡ್ ಬಜಾಯಿಸುತ್ತಿದೆ! ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, “ಆ ದಿನಗಳ ಬ್ರ್ಯಾಂಡ್ ಬೆಂಗಳೂರಿನ ಕನಸು ಹೊತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬರು ಅದನ್ನು ಅಚ್ಚುಕಟ್ಟಾಗಿ ಜಾರಿ ಮಾಡುತ್ತಿರುವುದಕ್ಕೆ ರಾಜಧಾನಿಯ ರಸ್ತೆಗಳ ದುಸ್ಥಿತಿಯೇ ಸಾಕ್ಷಿ. ಟ್ರಾಫಿಕ್ ಸಮಸ್ಯೆಯ ನಡುವೆ ಈ ವಾಸನೆಯನ್ನು ಕುಡಿದು ಜನತೆ ಪಾವನರಾಗುತ್ತಿದ್ದಾರೆ” ಎಂದು ಲೇವಡಿ ಮಾಡಿದೆ.
“ಈಗಾಗಲೇ ಆ ದಿನಗಳಂತೆ ಬೆಂಗಳೂರಿನಲ್ಲಿ ಹಾಡಹಾಗಲೇ ರಾಜಾರೋಷವಾಗಿ ಗೂಂಡಾಗಿರಿ ನಡೆಯುತ್ತಿದೆ. ಗೂಂಡಾಗಿರಿ ಸಹಿಸಲಾರದೆ ಕೆಲಸ ಅರಸಿ ಬಂದವರು ಕಾಲ್ಕೀಳುತ್ತಿದ್ದಾರೆ” ಎಂದು ಕುಟುಕಿದೆ.
ಕೇಂದ್ರದ ಬಸ್ಸುಗಳನ್ನೂ ತನ್ನದು ಎನ್ನುತ್ತಿದ್ದಾರೆ ಸಿಎಂ
“ಜನರಿಗೆ ಕಷ್ಟ ಬಂದಾಗಲೆಲ್ಲಾ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವನ್ನು ಕೇಳಿದ್ದೇನೆ ಎಂದು ಬೆರಳು ತೋರಿಸುವ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನೂ ತನ್ನದು ಎಂದು ಹೇಳುವುದರಲ್ಲಿ ನಿಸ್ಸೀಮರು” ಎಂದು ವಾಗ್ದಾಳಿ ನಡೆಸಿದೆ.
“ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ತಮ್ಮ ಫೋಟೋ ಹಾಕುತ್ತಿದ್ದ ಸಿದ್ದರಾಮಯ್ಯರವರು ಈಗ ಕೇಂದ್ರ ಸರ್ಕಾರ ಕೊಡುವ ಬಸ್ಸುಗಳನ್ನೂ ತನ್ನದು ಎನ್ನುತ್ತಿದ್ದಾರೆ” ಎಂದು ಬಿಜೆಪಿ ಹರಿಹಾಯ್ದಿದೆ.
ಆ ದಿನಗಳ ಬ್ರ್ಯಾಂಡ್ ಬೆಂಗಳೂರಿನ ಕನಸು ಹೊತ್ತಿರುವ ಡಿಸಿಎಂ @DKShivakumar ಸಾಹೇಬರು ಅದನ್ನು ಅಚ್ಚುಕಟ್ಟಾಗಿ ಜಾರಿ ಮಾಡುತ್ತಿರುವುದಕ್ಕೆ ರಾಜಧಾನಿಯ ರಸ್ತೆಗಳ ದುಸ್ಥಿತಿಯೇ ಸಾಕ್ಷಿ.
ಈಗಾಗಲೇ ಆ ದಿನಗಳಂತೆ ಬೆಂಗಳೂರಿನಲ್ಲಿ ಹಾಡಹಾಗಲೇ ರಾಜಾರೋಷವಾಗಿ ಗೂಂಡಾಗಿರಿ ನಡೆಯುತ್ತಿದೆ. ಗೂಂಡಾಗಿರಿ ಸಹಿಸಲಾರದೆ ಕೆಲಸ ಅರಸಿ ಬಂದವರು… pic.twitter.com/3l0VBMdJd9
— BJP Karnataka (@BJP4Karnataka) December 29, 2023