ದಮನಿತರ ದ್ವನಿಯಾಗಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಕಾರ್ಯ ಮಾಡುತ್ತಿದೆ. ಕಳೆದ 54 ವರ್ಷಗಳಿಂದ ವಿದ್ಯಾರ್ಥಿ ಹಕ್ಕುಗಳ ರಕ್ಷಣೆಗೆ, ಶಿಕ್ಷಣದ ಉಳಿವಿಗಾಗಿ, ಸೈದ್ದಾಂತಿಕ ಮತ್ತು ಶೈಕ್ಷಣಿಕ ಚಳವಳಿಯನ್ನು ನಿರಂತರವಾಗಿ ಮುಂದುವರಿಸಿದೆ ಎಂದು ಎಸ್‌ಎಫ್‌ಐ ರಾಜ್ಯ ಪದಾಧಿಕಾರಿ ಗಣೇಶ ರಾಠೋಡ್ ತಿಳಿಸಿದರು.
ಗದಗ ನಗರದ ಎಸ್‌ಎಫ್‌ಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 54ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಎಸ್‌ಎಫ್‌ಐ ಧ್ವಜಾರೋಹಣ ಮಾಡಿ ಮಾತನಾಡಿದರು.
“ಅದೇ ರೀತಿ ಕುವೆಂಪು ಅವರ ಜನ್ಮದಿನವಾದ ಇಂದು ಅವರು ʼಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳುʼ ಎಂದು ಹೇಳಿದಂತೆ ಸಮಾನತೆಯ ಶಿಕ್ಷಣಕ್ಕಾಗಿ ಮತ್ತು ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಮಾಜವಾದಕ್ಕಾಗಿ ನಿರಂತರ ಹೋರಾಟ ಮಾಡುತ್ತಿದೆ. ಶೋಷಿತರ, ದಮನಿತರ ಧ್ವನಿಯಾಗಿ ಎಸ್‌ಎಫ್‌ಐ ಕಾರ್ಯ ಮಾಡುತ್ತಿದೆ” ಎಂದರು.
ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಮಾತನಾಡಿ, “ನಿವೆಲ್ಲಾ ರೈತ, ಕಾರ್ಮಿಕ, ಕೃಷಿ ಕೂಲಿಕಾರರ ಮಕ್ಕಳು ನಿಮ್ಮ ಹಕ್ಕುಗಳಿಗಾಗಿ ನಡೆಯುವ ಚಳವಳಿಯ ಜೊತೆ ನಿಲ್ಲಬೇಕು. ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇವೆ. ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ಶಾಂತಿಯ ತೋಟವನ್ನು ಎಲ್ಲರೂ ಸೇರಿ ರಕ್ಷಿಸಬೇಕು. ಉದ್ಯೋಗದ ಅಭದ್ರತೆ ಹೆಚ್ಚುತಿದ್ದು, ಸರ್ಕಾರದ ನೀತಿಗಳು ಕಾರ್ಪೊರೇಟ್ ಪರ ಇವೆ. ಅದಕ್ಕೆ ಕಾರ್ಮಿಕ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ತಡೆಯಲು ಎಸ್‌ಎಫ್‌ಐ ಪಾತ್ರ ಮಹತ್ತದ್ದು, ಹಾಗಾಗಿ ನೀವು ಈ ಸಂಸ್ಥಪನಾ ದಿನದಂದು ಸಂಕಲ್ಪ ಮಾಡಿ ವಿದ್ಯಾರ್ಥಿ ಸಂಘಟನೆಯನ್ನು ಬಲಗೊಳಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕುವೆಂಪು ಚಿಂತನೆಗಳನ್ನು ಆತ್ಮದಲ್ಲಿ ಸ್ಥಾಪಿಸಿಕೊಳ್ಳಬೇಕು: ಹಿರಿಯ ಸಾಹಿತಿ ಕಾಳೇಗೌಡ ನಾಗವಾರ
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಚಂದ್ರು ರಾಠೋಡ್, ತಾಲೂಕು ಮುಖಂಡ ಶರಣು ಎಂ, ಸುಮಾ, ಮಂಜುಳಾ, ಸರಳಾ, ಸುಜಾತಾ, ಮುಸ್ಕಾನ್, ನಿವೇದಿತಾ, ಶ್ರೇಯಾ, ವೀಣಾ, ರೋಹಿಣಿ, ಅಶ್ವಿನಿ, ರಕ್ಷಿತಾ, ಶ್ರೀದೇವಿ ಸೇರಿದಂತೆ ಇತರರು ಇದ್ದರು.