ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಬುಶ್ರಾ ಲಿಬರಲ್ ಎಜುಕೇಶನ್ ಅಸೋಸಿಯೇಷನ್ ಕಾರ್ಯಕರ್ತರು ಇಂಡಿಯಲ್ಲಿರುವ ಮಿನಿ ವಿದಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಉಪ ವಿಭಾಗಾಧಿಕಾರಿ ಅಬಿದ್ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಹಸನ ಮುಜಾರ, “ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ರಾಜ್ಯ ಗಡಿ ಭಾಗದ ಅತಿ ಹಿಂದುಳಿದ ಪ್ರದೇಶಗಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣವೂ ಒಂದಾಗಿದೆ. ಅಲ್ಲದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದೆ. ಆದರೆ ಇಂಡಿಯು ಆಡಳಿತಾತ್ಮಕವಾಗಿ ಎಲ್ಲ ವಿಧದಲ್ಲೂ ಪ್ರಗತಿ ಹೊಂದಬೇಕಾದರೆ ಜಿಲ್ಲೆ ಮಾಡಿದಾಗ ಮಾತ್ರ ಸಾಧ್ಯ” ಎಂದರು.
ಇಮ್ರಾನ್ ಮುಜಾವರ, ಅಬ್ಬಾಸ್ ದೇಸಾಯಿ ಮಾತನಾಡಿ, “ಅಭಿವೃದ್ಧಿ ದೃಷ್ಟಿಯಿಂದ ಇಂಡಿಗೆ ಪ್ರತ್ಯೇಕ ಜಿಲ್ಲೆ ಸ್ಥಾನಮಾನ ನೀಡಬೇಕು. ಈ ಭಾಗದ ಬಹು ದಿನದ ಜಿಲ್ಲಾ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು” ಎಂದರು.
ಜಿಲ್ಲೆಗೆ ಇರಬೇಕಾದ ಪೂರಕ ಅಂಶಗಳು ಈಗಾಗಲೆ ಸಾಕಷ್ಟು ಇಲ್ಲಿ ಲಭ್ಯವಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಡಿ ಪ್ರತೇಕ ಜಿಲ್ಲೆ ರಚನೆ ಮಾಡಿ ಘೋಷಣೆ ಮಾಡಬೇಕು. ಅಂತೆಯೇ ಸಂವಿಧಾನ ವಿಧಿ 371(ಜೆ)ಗೆ ಅಖಂಡ ಇಂಡಿ ಮತ್ತು ಸಿಂದಗಿ ತಾಲೂಕು ಸೇರ್ಪಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಪ್ರೌಢಶಾಲೆಗೆ ಮೀಸಲಿಟ್ಟ ಜಾಗ ಒತ್ತುವರಿ; ತೆರವಿಗೆ ಆಗ್ರಹ
ರಂಜಾನ ಇಂಡಿಕರ, ಶಹಿನಶಾ ಜಾಗಿರದಾರ, ಅಕೀಲ ಪಟೇಲ, ಮುಸ್ತಾಕ ಇಂಡಿಕರ, ಯಾಸೀನ್ ಟಾಮಟಗಾರ, ಸರಫರಾಜ ಬಾಗವಾನ, ಮೌಶೀನ ಬಾಗವಾನ, ರಫೀಕ ಅರಬ, ಜೈದ ಗೌರ, ಜಾಬೀರ ಲಶಕೇರಿ, ಎಂಡಿ ಕೈಫ್ ಇಂಡಿಕರ ಸೇರಿದಂತೆ ಇತರರು ಇದ್ದರು.