ಗದಗ-ಬೆಟಗೇರಿ ನಗರಸಭೆಯಿಂದ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಶನಿವಾರದಂದು 44 ಲಕ್ಷ ರೂ. ಅನುದಾನದಲ್ಲಿ 800 ಲೀ ಸಾಮರ್ಥ್ಯದ ಸಕ್ಷನ್ ಕಮ್ ಜೆಟ್ಟಿಂಗ್ ಯಂತ್ರೋಪಕರಣ ವಾಹನ, 3.60 ಲಕ್ಷ ರೂ. ಅನುದಾನದಲ್ಲಿ ಸಾರ್ಟಿಂಗ ಬೆಲ್ಟ್ ಕನ್ವೆಯರ್ ಟೇಬಲ್‌ಗಳಿಗೆ ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಡಾ ಎಚ್ ಕೆ ಪಾಟೀಲ್ ಅವರು ಚಾಲನೆ ನೀಡಿದರು.
₹100 ಲಕ್ಷ ಅನುದಾನದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದಲ್ಲಿ ವಾಹನ ನಿಲುಗಡೆ ಜಾಗೆಯಲ್ಲಿ ಕಾಂಪೌಂಡ್ ಗೋಡೆ ಹಾಗೂ ನೆಲ ಹಾಸು ಕಾಮಗಾರಿಗೆ, ₹11.30 ಲಕ್ಷ ಅನುದಾನದಲ್ಲಿ ಮುನ್ಸಿಪಲ್ ಹೈಸ್ಕೂಲ್ ಮೇಲ್ಛಾವಣಿ ಅಭಿವೃದ್ಧಿಪಡಿಸುವ ಕಾಮಗಾರಿ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಎಸ್‌ಎಫ್‌ಐ 54ನೇ ಸಂಸ್ಥಾಪನಾ ದಿನಾಚರಣೆ
ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ನಗರಸಭೆ ಸದಸ್ಯರು, ಪೌರಾಯುಕ್ತ ಗಂಗಪ್ಪ ಎಂ., ನಗರ ಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್ ಎ ಬಂಡಿವಡ್ಡರ, ನಗರ ಸಭೆ ಪರಿಸರ ಅಧಿಕಾರಿ ಆನಂದ ಬದಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಇದ್ದರು.