ಪೊನಂಪೇಟೆ ಬಳಿಯ ಬರಪೊಳೆಯ ಆರ್ಜಿಗುಂಡ್ಡಿಯಲ್ಲಿ ಮೂವರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.
ಮೂವರು ಹಳ್ಳಿಗಟ್ಟುವಿನ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳು ಪೊನ್ನಂಪೇಟೆ ತಾಲೂಕು ಕುಂದ ಸಮೀಪದ ಆರ್ಜಿಗುಂಡ್ಡಿ ಬಳಿ ತೆರಳಿದ್ದರು. ಕಾಲೇಜಿನಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕೇರಳಕ್ಕೆ ಹರಿಯುವ ಬರಪೊಳೆ ನದಿಯಲ್ಲಿ ಈ ಘಟನೆ ನಡೆದಿದೆ.
ಪೊನ್ನಂಪೇಟೆ ಪೊಲೀಸರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿ ಮೃತ ದೇಹದ ಗುರುತಿಸುವ ಮತ್ತು ಶವ ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಊಟ ಮಾಡಲೆಂದು ಹೊಳೆ ಬದಿಗೆ ತೆರಳಿದ್ದರು ಆಕಸ್ಮಿಕವಾಗಿ ಒಬ್ಬರು ಕಾಲು ಜಾರಿದ್ದರಿಂದ, ಇನ್ನಿಬ್ಬರು ಸಹಾಯ ಮಾಡಲು ಹೋಗಿ ಸಾವನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರೆಲ್ಲರೂ ಕೊಡಗು ಮೂಲದವರು ಎಂದು ಪೊಲೀಸರು ಹೇಳುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.