ಹಂತ ಹಂತವಾಗಿ ರಸ್ತೆ ಅಭಿವೃದ್ದಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಸ್ತೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಲಾಗುವದು ಎಂದು ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಂಕಾಪುರ-ಲಕ್ಷ್ಮೇಶ್ವರ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.
ಕೈಗಾ ಇಳಕಲ್ ರಾಜ್ಯ ಹೆದ್ದಾರಿ ವೀಕ್ಷಿಸುತ್ತಿದ್ದ ಸಚಿವರು ಮೊದಲು ಮಳೆಗಾಲದ ಸಂದರ್ಭದಲ್ಲಿ ಅನೇಕ ಅಪಘಾತಗಳ ತಾಣವಾಗಿ ಮಾರ್ಪಟ್ಟಿರುವ ಯಲವಿಗಿ ರೈಲ್ವೆ ಕೆಳ ಸೇತುವೆ ನೋಡಿ, “ರಾಜ್ಯ ಸರ್ಕಾರದಿಂದ ಕೂಡಲೇ ಕೇಂದ್ರಕ್ಕೆ ಪತ್ರ ಬರೆದು ಮೇಲ್ಸೆತುವೆ ನಿರ್ಮಿಸಲು ಮನವಿ ಮಾಡಲಾಗುವುದು. ರಸ್ತೆ ಪರಿಸ್ಥಿತಿಯನ್ನು ಕಣ್ಣಾರೆ ವೀಕ್ಷಿಸಿದ ಸಚಿವರು ಅದರ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುಧಾನ ಬಿಡುಗಡೆಗೊಳಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಂಗನವಾಡಿ ಕೇಂದ್ರಗಳ ಆಹಾರ ಸಾಮಾಗ್ರಿ ವರದಿ ನೀಡುವಂತೆ ಒತ್ತಾಯ
ಗದಗ ಪರಿವೀಕ್ಷಣಾ ಮಂದಿರದಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ, “ಇಲಾಖೆ ವತಿಯಿಂದ ಕಾಮಗಾರಿಗಳನ್ನು ನಿರ್ವಹಿಸಲು 4 ಸಾವಿರ ಕೋಟಿ ರೂ. ಅನುದಾನ ಸರ್ಕಾರದ ಹಂತದಲ್ಲಿದ್ದು, ಮಂಜೂರಾತಿ ನೀಡಿದ ಕೂಡಲೇ ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುದಾನ ಒದಗಿಸಲಾಗುವುದು” ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ ಎಸ್ ಪಾಟೀಲ, ಬಿ ಬಿ ಅಸೂಟಿ ಸೇರಿದಂತೆ ಇತರರು ಇದ್ದರು.