ಕಲಬುರಗಿ | ಅಂಗನವಾಡಿ ಕೇಂದ್ರಗಳ ಆಹಾರ ಸಾಮಾಗ್ರಿ ವರದಿ ನೀಡುವಂತೆ ಒತ್ತಾಯ

Date:

ಸೇಡಂ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳ ಮೂರು ತಿಂಗಳ ಆಹಾರ ಸಾಮಾಗ್ರಿ ಮತ್ತು ಅಡುಗೆ ಅನಿಲದ ವರದಿ ನೀಡುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮನವಿ ಪತ್ರ ಸಲ್ಲಿಸಿದೆ.

- Advertisement -

“ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಕೇಂದ್ರದ ಸಿಬ್ಬಂದಿಯು ಮೂರು ತಿಂಗಳಿಂದ ಸರಿಯಾಗಿ ನಮಗೆ ಆಹಾರ ಸಾಮಾಗ್ರಿ ಮತ್ತು ಅಡಿಗೆ ಅನೀಲವನ್ನು ನೀಡುತ್ತಿಲ್ಲ ಎಂದು ಭಯದಿಂದ ತಿಳಿಸಿದರು. ತದನಂತರ ನಾವು ಸುತ್ತಲಿನ ಗ್ರಾಮಸ್ತರಿಗೆ ವಿಚಾರಿಸಿದಾಗ, ಪ್ರತಿ ತಿಂಗಳು ಆಹಾರ ಸರಬರಾಜು ವಾಹನನ್ನು ಕೇಂದ್ರಕ್ಕೆ ನೀಡಬೇಕಾಗಿದ್ದ ಪದಾರ್ಥನ್ನು ನೀಡದೆ, ಅಲ್ಪ ಪದಾರ್ಥ ನೀಡಿ ಪೂನಃ ಅದೆ ವಾಹನದ ಮುಖಾಂತರ ಮಾರಾಟವಾಗುತ್ತದೆ” ಎಂದು ಬಿಎಸ್‌ಪಿ ಮುಖಂಡರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಈ ದಂಧೆಯು ಅಧಿಕಾರಿಗಳ ಮಖಾಂತರವೇ ನಡೆಯುತ್ತಿದೆ ಎಂದು ಕೆಲವು ಮೂಲಗಳಿಂದ ಕಂಡುಬಂದಿರುತ್ತದೆ. ಅಡಿಗೆ ಅನೀಲವನ್ನು ಪ್ರತಿ ತಿಂಗಳು ನೀಡದೆ ಬೋಕಾಸು ಬಿಲ್ಲುಗಳು ಪಡೆದಿರುತ್ತಾರೆ. ಅಂಗನವಾಡಿ ಸಿಬ್ಬಂದಿಗಳ ಸಂಬಳಕ್ಕೆ ಪ್ರತಿ ತಿಂಗಳಿಗೆ ರೂ.200ನ್ನು ಮೇಲ್ವವಿಚಾರಕರು ಲಂಚವನ್ನು ಪಡೆಯುತ್ತಿದ್ದರೆ.

ಅದ್ದರಿಂದ ಬಡ ಮಕ್ಕಳಿಗೆ ನೀಡಬೇಕಿದ್ದ ಆಹಾರ ಸಾಮಾಗ್ರಿಗೆ ಕನ್ನ ಹಾಕಿ ಬಡವರ ಹೊಟ್ಟೆಯ ಮೇಲೆ ಹೊಡೆದು ನೀವು ಸಂಪಾದಿಸುತ್ತಿರುವುದನ್ನು ಬಹುಜನ ಸಮಾಜ ಪಕ್ಷವು ಸಹಿಸುವುದಿಲ್ಲ. ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ.

ಶೀಘ್ರವಾಗಿ ತಾವೂ ಇದನ್ನು ಸರಿಪಡಿಸಿ ಕೇಂದ್ರಗಳಿಗೆ ನೀಡಬೇಕಿದ್ದ ಆಹಾರ ಸಾಮಾಗ್ರಿಗಳು ನೀಡದಿದ್ದಲ್ಲಿ ತಮ್ಮ ವಿರುದ್ಧ ಬಹುಜನ ಸಮಾಜ ಪಕ್ಷವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಈ ವೇಳೆ ರೇವಣಸಿದ್ಧಪ್ಪ ಎಸ್. ಸಿಂಧೆ, ಸುನಿಲ್ ಹಳ್ಳಿ ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೃಷ್ಣೆಯ ನೀರು ಕೇಳಲು ತೆಲಂಗಾಣಕ್ಕೆ ನೈತಿಕ ಹಕ್ಕಿಲ್ಲ: ಅಖಂಡ ಕರ್ನಾಟಕ ರೈತ ಸಂಘ

ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ತೆಲಂಗಾಣಕ್ಕೆ ಕೃಷ್ಣೆಯ ನೀರು ಹರಿಸುವುದನ್ನು...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9 ತಿಂಗಳಲ್ಲಿ 28,000 ನಾಯಿ ಕಡಿತ ಪ್ರಕರಣ!

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ...

ಕುಮಟಾ | ಹೆಗಲೆ ಗ್ರಾಮದಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ, ನಗದು ಕಳವು

ಕುಮಟಾ ತಾಲೂಕಿನ ಹೆಗಲೆಯಲ್ಲಿರುವ ಶ್ರೀಪತಿ ವೆಂಕಟ್ರಮಣ ಆಚಾರಿ ಅವರ ಮನೆಯಲ್ಲಿ ಯಾರೂ...

ಉಜಿರೆಯಲ್ಲಿ ಸೌಜನ್ಯ ನ್ಯಾಯ ಯಾತ್ರೆ: ನೈಜ ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳನ್ನು...