ಸುಳ್ಳೇ ಸತ್ಯವಾಗುತ್ತಿರುವ ಯುಗದಲ್ಲಿ ತಿಳಿವಿನ ಆಳ ಮತ್ತು ಸತ್ಯದ ಪರಿಮಳವನ್ನು ಹರಡಲು ಕನ್ನಡ ಪ್ಲಾನೆಟ್ (Kannada Planet) ಎಂಬ ನೂತನ ವೆಬ್‌ಸೈಟ್ ಆರಂಭವಾಗಿದೆ. ವೆಬ್‌ಸೈಟ್‌ಅನ್ನು ಹಿರಿಯ ಪತ್ರಕರ್ತೆ ಡಾ. ವಿಜಯಾ ಲೋಕಾರ್ಪಣೆಗೊಳಿಸಿದ್ದಾರೆ.
“ದುರಿತ ಕಾಲದಲ್ಲಿ ಮಾತಿನ ಶಕ್ತಿ ಕುಂದಬಾರದು. ಮಾತು ಸೋಲಬಾರದು, ಮಾತು ಮುಗಿದು ಹೋಗಿಬಿಡಬಾರದು. ಬರೆದು ಬದುಕುತ್ತ ಬಂದವರು ನಾವು. ಹಿಂದೆ ಪತ್ರಿಕೆ, ನಂತರ ಟಿವಿ, ಈಗ ಡಿಜಿಟಲ್ ಮಾಧ್ಯಮ. ಸುತ್ತ ನೂರು ಟೆಂಪ್ಲೇಟುಗಳು ಅಡ್ಡಾದಿಡ್ಡಿಯಾಗಿ ಬಿದ್ದಿರುವಾಗ, ನಾವು ಹೊಸದೊಂದು ಬೋರ್ಡು ಹಿಡಿದು ಬರಬೇಕು. ಮಾತಾಡಬೇಕು, ನಮ್ಮ ತಿಳಿವಿನ ಆಳ ಹರಡುತ್ತ ಸಾಗಬೇಕು” ಎಂದು ಕನ್ನಡ ಪ್ಲಾನೆಟ್ ಬಳಗ ಹೇಳಿದೆ.
“ಕನ್ನಡ ಪ್ಲಾನೆಟ್ ನಾವೇ ಕಟ್ಟಿಕೊಂಡ ಹೊಸ ವೇದಿಕೆ. ಇದನ್ನು ನಿಮ್ಮ ವೇದಿಕೆಯನ್ನಾಗಿಸುವುದು ನಮ್ಮ ಗುರಿ. ಕನ್ನಡ ಪ್ಲಾನೆಟ್ ಒಂದು ದೊಡ್ಡ ಕಿಟಕಿ, ನಿಮ್ಮನ್ನು ನೋಡಲು, ಜಗತ್ತನ್ನು ಅರ್ಥ ಮಾಡಿಕೊಳ್ಳಲು, ಸತ್ಯ ಮಾತಾಡಲು. ರಾಶಿರಾಶಿ ಕನಸುಗಳನ್ನು ಹರಡಿ ಕುಳಿತಿದ್ದೇವೆ. ಇದೆಲ್ಲ ಒಂದೇ ಏಟಿಗೆ ಸಾಧ್ಯವಾಗುವಂಥಾಗಲು ನಾವು ಸಹಸ್ರ ಬಾಹುಗಳಾಗಬಾರದೇ ಎಂಬ ಧಾವಂತ ನಮ್ಮದು. ನೀವು ಜತೆಗಿದ್ದರೆ ಯಾವುದೂ ಅಸಾಧ್ಯವಲ್ಲ” ಎಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೊಬೈಲ್ ಎತ್ತಿಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಜಿಗಿದ ಮಹಿಳೆ; ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಣೆ
“ನಾವು ನೊಂದವರ ಧ್ವನಿಯಾಗಬೇಕು, ಶೋಷಿತರ ಕೊರಳಾಗಬೇಕು, ಸಮಾಜದ ಕಟ್ಟಕಡೆಯಲ್ಲಿ ನಿಲ್ಲಿಸಲ್ಪಟ್ಟ ಮನುಷ್ಯನ ಎದೆಯ ಕೂಗಾಗಬೇಕು. ಇದೆಲ್ಲ ಈಗ ಕ್ಲೀಷೆಯ ಮಾತುಗಳಾದವು. ತುಂಬ ತುರ್ತಾಗಿ ನಾವು ಈಗ ನೀವಾಗಬೇಕು. ನಿಮ್ಮ ಕಣ್ಣಲ್ಲಿ ಜಗತ್ತನ್ನು ನೋಡಬೇಕು. ಹಾಗಾದಾಗ ಎಲ್ಲ ದೊಡ್ಡದೊಡ್ಡ ಆಶಯಗಳೂ ಸಾವಯವವಾಗಿ ಸಾಧ್ಯವಾಗಿಬಿಡುತ್ತದೆ” ಎಂದು ಕನ್ನಡ ಪ್ಲಾನೆಟ್ ಹೇಳಿಕೆ.
“ಕನ್ನಡ ಪ್ಲಾನೆಟ್ ಬದಲಾದ ಕಾಲಘಟ್ಟದಲ್ಲಿ ನಮ್ಮ ಅಳಿದುಳಿದ ಸಂವೇದನೆಗಳನ್ನು ಎತ್ತಿಹೇಳುವ ವೇದಿಕೆ. ನಮ್ಮೆಲ್ಲರ ಆತ್ಮಸಾಕ್ಷಿಗಳನ್ನು ಬಡಿದು ಏಳಿಸುವ ವೇದಿಕೆ. ಸತ್ಯಕ್ಕಾಗಿ ಹಂಬಲಿಸುವ ವೇದಿಕೆ. ಸದ್ಯದಲ್ಲೇ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಹೀಗೆ ಎಲ್ಲ ಕಡೆಗಳಲ್ಲೂ ನಿಮ್ಮ ಈ ಕನ್ನಡ ಪ್ಲಾನೆಟ್ ಇರುತ್ತದೆ. ಇದರ ಮೂಲಕವೇ ನಾವು ಮಾತನಾಡುತ್ತೇವೆ. ಮಾತಿನ ಧ್ವನಿ ಸೋಲದಂತೆ. ನಿಮ್ಮ ಎಲ್ಲ ಬಗೆಯ ಬೆಂಬಲವನ್ನೂ ಬೇಡುತ್ತೇವೆ. ಜತೆಗೆ, ನಿಂತುಕೊಳ್ಳಿ, ನಿಮಗೆ ನಿರಾಶೆಯಾಗದಂತೆ ಬದುಕುತ್ತೇವೆ” ಎಂದು ತಿಳಿಸಿದೆ.
ಕನ್ನಡ ಪ್ಲಾನೆಟ್ ಒಂದು ದೊಡ್ಡ ಕಿಟಕಿ, ನಿಮ್ಮನ್ನು ನೋಡಲು, ಜಗತ್ತನ್ನು ಅರ್ಥ ಮಾಡಿಕೊಳ್ಳಲು, ಸತ್ಯ ಮಾತಾಡಲು. ರಾಶಿರಾಶಿ ಕನಸುಗಳನ್ನು ಹರಡಿ ಕುಳಿತಿದ್ದೇವೆ. ಇದೆಲ್ಲ ಒಂದೇ ಏಟಿಗೆ ಸಾಧ್ಯವಾಗುವಂಥಾಗಲು ನಾವು ಸಹಸ್ರ ಬಾಹುಗಳಾಗಬಾರದೇ ಎಂಬ ಧಾವಂತ ನಮ್ಮದು. ನೀವು ಜತೆಗಿದ್ದರೆ ಯಾವುದೂ ಅಸಾಧ್ಯವಲ್ಲ. ನಾವೇ ಕಟ್ಟಿಕೊಂಡ ಹೊಸ ವೇದಿಕೆ. ಇದನ್ನು ನಿಮ್ಮ ವೇದಿಕೆಯನ್ನಾಗಿಸುವುದು ನಮ್ಮ ಗುರಿ ಎಂದು ಕನ್ನಡ ಪ್ಲಾನೆಟ್ ಬಳಗ ಹೇಳಿದೆ.