ಕನ್ನಡಕ್ಕೆ ಮತ್ತೊಂದು ಡಿಜಿಟಲ್ ಮಾಧ್ಯಮ: ‘ಕನ್ನಡ ಪ್ಲಾನೆಟ್’ ವೆಬ್‌ಸೈಟ್‌ ಲೋಕಾರ್ಪಣೆ

Date:

ಸುಳ್ಳೇ ಸತ್ಯವಾಗುತ್ತಿರುವ ಯುಗದಲ್ಲಿ ತಿಳಿವಿನ ಆಳ ಮತ್ತು ಸತ್ಯದ ಪರಿಮಳವನ್ನು ಹರಡಲು ಕನ್ನಡ ಪ್ಲಾನೆಟ್ (Kannada Planet) ಎಂಬ ನೂತನ ವೆಬ್‌ಸೈಟ್‌ ಆರಂಭವಾಗಿದೆ. ವೆಬ್‌ಸೈಟ್‌ಅನ್ನು ಹಿರಿಯ ಪತ್ರಕರ್ತೆ ಡಾ. ವಿಜಯಾ ಲೋಕಾರ್ಪಣೆಗೊಳಿಸಿದ್ದಾರೆ.

- Advertisement -

“ದುರಿತ ಕಾಲದಲ್ಲಿ ಮಾತಿನ ಶಕ್ತಿ ಕುಂದಬಾರದು. ಮಾತು ಸೋಲಬಾರದು, ಮಾತು ಮುಗಿದು ಹೋಗಿಬಿಡಬಾರದು. ಬರೆದು ಬದುಕುತ್ತ ಬಂದವರು ನಾವು. ಹಿಂದೆ ಪತ್ರಿಕೆ, ನಂತರ ಟಿವಿ, ಈಗ ಡಿಜಿಟಲ್ ಮಾಧ್ಯಮ. ಸುತ್ತ ನೂರು ಟೆಂಪ್ಲೇಟುಗಳು ಅಡ್ಡಾದಿಡ್ಡಿಯಾಗಿ ಬಿದ್ದಿರುವಾಗ, ನಾವು ಹೊಸದೊಂದು ಬೋರ್ಡು ಹಿಡಿದು ಬರಬೇಕು. ಮಾತಾಡಬೇಕು, ನಮ್ಮ ತಿಳಿವಿನ ಆಳ ಹರಡುತ್ತ ಸಾಗಬೇಕು” ಎಂದು ಕನ್ನಡ ಪ್ಲಾನೆಟ್ ಬಳಗ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ಕನ್ನಡ ಪ್ಲಾನೆಟ್ ನಾವೇ ಕಟ್ಟಿಕೊಂಡ ಹೊಸ ವೇದಿಕೆ. ಇದನ್ನು ನಿಮ್ಮ ವೇದಿಕೆಯನ್ನಾಗಿಸುವುದು ನಮ್ಮ ಗುರಿ. ಕನ್ನಡ ಪ್ಲಾನೆಟ್ ಒಂದು ದೊಡ್ಡ ಕಿಟಕಿ, ನಿಮ್ಮನ್ನು ನೋಡಲು, ಜಗತ್ತನ್ನು ಅರ್ಥ ಮಾಡಿಕೊಳ್ಳಲು, ಸತ್ಯ ಮಾತಾಡಲು. ರಾಶಿರಾಶಿ ಕನಸುಗಳನ್ನು ಹರಡಿ ಕುಳಿತಿದ್ದೇವೆ. ಇದೆಲ್ಲ ಒಂದೇ ಏಟಿಗೆ ಸಾಧ್ಯವಾಗುವಂಥಾಗಲು ನಾವು ಸಹಸ್ರ ಬಾಹುಗಳಾಗಬಾರದೇ ಎಂಬ ಧಾವಂತ ನಮ್ಮದು. ನೀವು ಜತೆಗಿದ್ದರೆ ಯಾವುದೂ ಅಸಾಧ್ಯವಲ್ಲ” ಎಂದಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೊಬೈಲ್ ಎತ್ತಿಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಜಿಗಿದ ಮಹಿಳೆ; ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಣೆ

“ನಾವು ನೊಂದವರ ಧ್ವನಿಯಾಗಬೇಕು, ಶೋಷಿತರ ಕೊರಳಾಗಬೇಕು, ಸಮಾಜದ ಕಟ್ಟಕಡೆಯಲ್ಲಿ ನಿಲ್ಲಿಸಲ್ಪಟ್ಟ ಮನುಷ್ಯನ ಎದೆಯ ಕೂಗಾಗಬೇಕು. ಇದೆಲ್ಲ ಈಗ ಕ್ಲೀಷೆಯ ಮಾತುಗಳಾದವು. ತುಂಬ ತುರ್ತಾಗಿ ನಾವು ಈಗ ನೀವಾಗಬೇಕು. ನಿಮ್ಮ ಕಣ್ಣಲ್ಲಿ ಜಗತ್ತನ್ನು ನೋಡಬೇಕು. ಹಾಗಾದಾಗ ಎಲ್ಲ ದೊಡ್ಡದೊಡ್ಡ ಆಶಯಗಳೂ ಸಾವಯವವಾಗಿ ಸಾಧ್ಯವಾಗಿಬಿಡುತ್ತದೆ” ಎಂದು ಕನ್ನಡ ಪ್ಲಾನೆಟ್ ಹೇಳಿಕೆ.

“ಕನ್ನಡ ಪ್ಲಾನೆಟ್ ಬದಲಾದ ಕಾಲಘಟ್ಟದಲ್ಲಿ ನಮ್ಮ ಅಳಿದುಳಿದ ಸಂವೇದನೆಗಳನ್ನು ಎತ್ತಿಹೇಳುವ ವೇದಿಕೆ. ನಮ್ಮೆಲ್ಲರ ಆತ್ಮಸಾಕ್ಷಿಗಳನ್ನು ಬಡಿದು ಏಳಿಸುವ ವೇದಿಕೆ. ಸತ್ಯಕ್ಕಾಗಿ ಹಂಬಲಿಸುವ ವೇದಿಕೆ. ಸದ್ಯದಲ್ಲೇ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಹೀಗೆ ಎಲ್ಲ ಕಡೆಗಳಲ್ಲೂ ನಿಮ್ಮ ಈ ಕನ್ನಡ ಪ್ಲಾನೆಟ್ ಇರುತ್ತದೆ. ಇದರ ಮೂಲಕವೇ ನಾವು ಮಾತನಾಡುತ್ತೇವೆ. ಮಾತಿನ ಧ್ವನಿ ಸೋಲದಂತೆ. ನಿಮ್ಮ ಎಲ್ಲ ಬಗೆಯ ಬೆಂಬಲವನ್ನೂ ಬೇಡುತ್ತೇವೆ. ಜತೆಗೆ, ನಿಂತುಕೊಳ್ಳಿ, ನಿಮಗೆ ನಿರಾಶೆಯಾಗದಂತೆ ಬದುಕುತ್ತೇವೆ” ಎಂದು ತಿಳಿಸಿದೆ.

ಕನ್ನಡ ಪ್ಲಾನೆಟ್ ಒಂದು ದೊಡ್ಡ ಕಿಟಕಿ, ನಿಮ್ಮನ್ನು ನೋಡಲು, ಜಗತ್ತನ್ನು ಅರ್ಥ ಮಾಡಿಕೊಳ್ಳಲು, ಸತ್ಯ ಮಾತಾಡಲು. ರಾಶಿರಾಶಿ ಕನಸುಗಳನ್ನು ಹರಡಿ ಕುಳಿತಿದ್ದೇವೆ. ಇದೆಲ್ಲ ಒಂದೇ ಏಟಿಗೆ ಸಾಧ್ಯವಾಗುವಂಥಾಗಲು ನಾವು ಸಹಸ್ರ ಬಾಹುಗಳಾಗಬಾರದೇ ಎಂಬ ಧಾವಂತ ನಮ್ಮದು. ನೀವು ಜತೆಗಿದ್ದರೆ ಯಾವುದೂ ಅಸಾಧ್ಯವಲ್ಲ. ನಾವೇ ಕಟ್ಟಿಕೊಂಡ ಹೊಸ ವೇದಿಕೆ. ಇದನ್ನು ನಿಮ್ಮ ವೇದಿಕೆಯನ್ನಾಗಿಸುವುದು ನಮ್ಮ ಗುರಿ ಎಂದು ಕನ್ನಡ ಪ್ಲಾನೆಟ್‌ ಬಳಗ ಹೇಳಿದೆ.

 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ಡ್ರೋನ್ ಪ್ರತಾಪ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು:‌ ಹೈಕೋರ್ಟ್ ಹೇಳಿದ್ದೇನು?

ಕೃಷಿ ಹೊಂಡಲ್ಲಿ 100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...