ವಿಜಯಪುರ | ಐದು ತಿಂಗಳ ವೇತನ ಬಾಕಿ; ಆಲಮಟ್ಟಿ ಕೆಬಿಜೆಎನ್‌ಎಲ್‌ ಗಾರ್ಡನ್ ‘ಡಿ ಗ್ರೂಪ್’ ನೌಕರರ ಪ್ರತಿಭಟನೆ

Date:

Advertisements

ಆಲಮಟ್ಟಿಯ ಕೆಬಿಜೆಎನ್‌ಎಲ್‌ (ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ) ಗಾರ್ಡ್‌ನಲ್ಲಿ ಕೆಲಸಮಾಡುತ್ತಿರುವ ಡಿ ಗ್ರೂಪ್ ನೌಕರರಿಗೆ 5 ತಿಂಗಳ ಬಾಕಿ ವೇತವನ್ನು ಪಾವತಿಸಿಲ್ಲ. ವೇತನಕ್ಕೆ ಆಗ್ರಹಿಸಿ ನೌಕರರು ಆಲಮಟ್ಟಿ ಸಿಇ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಸಂಘದ ಜಿಲ್ಲಾ ಅಧ್ಯಕ್ಷ  ಮಲ್ಲಿಕಾರ್ಜುನ್ ಎಚ್.ಟಿ, ವಿಶ್ವದ ಅತಿ ದೊಡ್ಡ ಆಣೆಕಟ್ಟಾ ಆಲಮಟ್ಟಿ ಆಣೆಕಟ್ಟಿನ ಸುತ್ತಮುತ್ತಲು ನೂರಾರು ಎಕರೆಯಲ್ಲಿ ತಲೆ ಎತ್ತಿರುವ ಗಾರ್ಡನ್‌ಗಳನ್ನು ವಿಕ್ಷಸಿಸಲು ದೇಶ ವಿದೇಶಗಳಿಂದ ಜನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅವುಗಳ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ, ಈ ಗಾರ್ಡನ್‌ಗಳನ್ನು ಹಗಲಿರುಳು ಶ್ರಮವಹಿಸಿ ತಯಾರಿಸಿದ ನೌಕರರ ಮಾತ್ರ 5 ತಿಂಗಳಿಂದ ವೇತನ ವಿಲ್ಲದೆ ಅರೆ ಹೂಟ್ಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಆರೋಗ್ಯ, ಬಟ್ಟೆಗಳನ್ನು ಒದಗಿಸುವುದು ಕನಸಿನ ಮಾತಾಗಿದೆ. ಮನೆ ನಿರ್ವಹಣೆ ಜೊತೆಯಲ್ಲಿ ಮಾಲೀಕರಿಗೆ ಬಾಡಿಗೆ ನೀಡುವುದು ಹೇಗೆ? ಆದಕಾರಣ ಸದರಿ ನೌಕರರು ಈ ಸಮಸ್ಯೆ ಪರಿಹರಿಸಬೇಕೆಂದು ಹಲವು ಬಾರಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಬೇಟೆಯಾಗಿ ಚರ್ಚಿಸಿದರು ಸಹ ಇಲ್ಲಿಯವರೆಗೆ ಯಾವುದೇ ತರಹ ಪ್ರಯೋಜನ ಆಗಿಲ್ಲ.

Advertisements

ಆದಷ್ಟೂ ಬೇಗನೆ ಈ ಬಾಕಿ ಇರುವ 5 ತಿಂಗಳ ವೇತನವನ್ನು ಪಾವತ್ತಿಸಲು ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಅನಿವಾರ್ಯವಾಗಿ ಗಾರ್ಡನ್‌ಗಳನ್ನು ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಬೇಡಿಕೆಗಳು.

  1. ಬಾಕಿ ಇರುವ ಜುಲೈ 2023ರಿಂದ ನವೆಂಬರ್ 2023ರವರೆಗಿನ ಐದು ತಿಂಗಳ ವೇತನವನ್ನು ಒಟ್ಟಿಗೆ ಕಾರ್ಮಿಕರ ಖಾತೆಗೆ ಜಮಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಿ.
  2. ಕಾರ್ಮಿಕರಿಗೆ ಪ್ರತಿ ವರ್ಷ ಎರಡು ಜೊತೆ ಯುನಿಫಾರ್ಮ್ ಒದಗಿಸಿ.
  3. ಸದರಿ ಕಾರ್ಮಿಕರ ಕೆಲಸ ಸ್ಥಳವನ್ನು ಮೇಲಿಂದ ಮೇಲೆ ಬದಲಾಯಿಸಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X