ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜವನ್ನು ದಿಟ್ಟತನದಿಂದ ಎದುರಿಸಿ, ನೋವು ಮತ್ತು ಅವಮಾನಗಳನ್ನು ಮೆಟ್ಟಿನಿಂತು, ಶಾಲೆ ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಹೇಳಿದರು.
ಬೀದರ್‌ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಅಕ್ಷರದಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಾತೆ ಸಾವಿತ್ರಿಬಾಯಿ ಫುಲೆಯವರ ಜನ್ಮದಿನ ಆಚರಿಸುವ ಜ.3ರಂದು ಹಾಗೂ ಬುದ್ಧ ಪೂರ್ಣಮೆ ದಿನದಂದು ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಬೇಕು. ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಮಾತೆ ಸಾವಿತ್ರಿಬಾಯಿ ಫುಲೆಯವರ ಹೆಸರು ನಾಮಕರಣ ಮಾಡಬೇಕು ಹಾಗೂ ರಾಜ್ಯ ಮತ್ತು ರಾಷ್ಟ್ರದ ವಸತಿ ಶಾಲೆಗಳಿಗೆ ಸಾವಿತ್ರಿಬಾಯಿ ಫುಲೆಯವರ ಹೆಸರು ನಾಮಕರಣ ಮಾಡಬೇಕೆಂದು ಪ್ರಧಾನಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ಯುದ್ದ ವಿಶ್ವಕ್ಕೆ ಮಾದರಿ: ಶಿವರಾಜ ಕುದುರೆ
ಈ ಸಂದರ್ಭದಲ್ಲಿ ದಸಂಸ ಸಮಿತಿಯ ಪದಾಧಿಕಾರಿಗಳಾದ ರಾಜಕುಮಾರ ಬನ್ನೇರ್, ಬಸವರಾಜ ಸಾಗರ, ರಮೇಶ ಮಂದಕನಳ್ಳಿ, ಬಸವರಾಜ ಕಾಂಬಳೆ, ಬಕ್ಕಪ್ಪಾ ದಂಡಿನ್, ರಂಜಿತಾ ಜೈನೂರ್, ಅಹ್ಮದ ಅಲಿಯಾಬಾದ, ಝರೆಪ್ಪಾ ರಾಂಪೂರೆ, ಸುಧಾಕರ ಮಾಳಗೆ, ವಿದ್ಯಾಸಾಗರ ಬೆಲ್ದಾರ್, ಸಂಜುಕುಮಾರ ಬ್ಯಾಗಿ, ಲಕ್ಷ್ಮಣ ಹೊನ್ನಡ್ಡಿ, ರಾಜಕುಮಾರ ಕಾಳೆಕರ್, ಮಾರುತಿ ಜಗದಾಳೆ, ಘಾಳೆಪ್ಪಾ ಮಳಚಾಪೂರ, ಸೂರ್ಯಕಾಂತ ಸಾದುರೆ, ಗೋಪಾಲ ಸಾಗರ, ನಿತಿನ ಹೊಸಮನಿ, ಶಾಹುರಾಜ ಡಾಕುಳಗಿ, ವಿಠಲ ಲಾಡ್ಕರ್, ತುಕಾರಾಮ ಲಾಡ್ಕರ್, ಚಂದ್ರಕಾಂತ ನಿರಾಟೆ, ಸಾಗರ ಮರಖಲಕರ್ ಇದ್ದರು.