ತುಮಕೂರು | ಎಲ್ಲ ಜಾತಿಗಳ ಪರವಾಗಿ ಹೋರಾಟ ಸಾಗಿದೆ: ದಸಂಸ ಸಂಚಾಲಕ

Date:

Advertisements

ಪ್ರೊ‌. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ 50ವರ್ಷದ ಸಂಭ್ರಮದಲ್ಲಿದೆ. ಬುದ್ಧ, ಬಸವ, ಅಂಬೇಡ್ಕರ್ ರಚಿಸಿ ಸ್ಥಾಪಿಸಿದ ಸಂವಿಧಾನದಡಿಯಲ್ಲಿ ಶೋಷಿತ, ದಮನಿತ, ದಲಿತರ ಪರವಾಗಿ ಸಾಮಾಜಿಕ ನ್ಯಾಯ ಒದಗಿಸಿ ಎಲ್ಲಾ ಜಾತಿಗಳ ಪರವಾಗಿ ಹೋರಾಟ ನಡೆಸುತ್ತಾ ಸಮಿತಿ ಸಾಗಿದೆ ಎಂದು ದಸಂಸ ತುಮಕೂರು ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಹೇಳಿದರು.

ತುಮಕೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಿಪಟೂರಿನಲ್ಲಿ ಸ್ಥಾಪಿತವಾಗಿ 46ವರ್ಷ ತುಂಬಿದೆ. ಶೋಷಿತರಾ, ಸಾಮಾಜಿಕ ನ್ಯಾಯಕ್ಕಾಗಿ ಸಾವಿರಾರು ಕಿ.ಮೀ. ಪಾದಯಾತ್ರೆ ನಡೆಸಿ ನ್ಯಾಯ ದೊರಕಿಸಿ ಕೊಟ್ಟಿದ್ದೇವೆ. ಸಮಿತಿಯ ಆದೇಶದಂತೆ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ ಎಂದರು.

ಸಾಮಾಜಿಕ ನ್ಯಾಯಗಳಿಂದ ವಂಚಿತರಾದ ಯಾವುದೇ ಸಮುದಾಯದ ಪರ ಹೋರಾಟ ಮಾಡಲು ಸಮಿತಿ ಸಿದ್ಧವಿದೆ. ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಕ್ಕೆ ಧನವಂತರು ದಲಿತರನ್ನು ಜಾತಿನಿಂದನೆ ಪ್ರಕರಣಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ದಲಿತರು ಎಚ್ಚೆತ್ತುಕೊಳ್ಳಬೇಕು, ಸಮಿತಿ ನ್ಯಾಯದ ಪರವಿರುತ್ತದೆ ಎಂದರು.

Advertisements

ಕರ್ನಾಟಕ ದಸಂಸ ಸ್ಥಾಪಿತವಾಗಿ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ ಈ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಮೊದಲ ಬಾರಿಗೆ ತಾಲೂಕು ಸಂಚಾಲಕನಾಗಿ ಆಯ್ಕೆಯಾದಾಗ ಪಾದಯಾತ್ರೆಯ ಮುಖಾಂತರ, ಹೋರಾಟ ನಡೆಸಿ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿದ್ದೇವು ಎಂದರು.

ತಿಪಟೂರು ತಾಲೂಕು ಸಂಚಾಲಕರಾಗಿ ಮೋಹನ್ ಜಕ್ಕನಹಳ್ಳಿ, ಸಂಘಟನಾ ಸಂಚಾಲಕರಾಗಿ ಮಂಜುನಾಥ್ ಹರಚನಹಳ್ಳಿ, ರಂಗಸ್ವಾಮಿ ಹುಲಿಹಳ್ಳಿ, ಉಗ್ರ ನರಸಿಂಹಯ್ಯ ಯಗಚಿಕಟ್ಟೆ, ಚಂದ್ರಶೇಖರ್ ಗಡಬನಹಳ್ಳಿ, ಚಂದ್ರಶೇಖರ್ ಕರಡಾಳು, ಸುರೇಶ್ ಕರಿಕೆರೆ, ಲೋಕೇಶ್ ಚಿಗ್ಗಾವಿ, ರವೀಶ್ ಮಂಜುನಾಥ್ ಪುರ, ಮೋಹನ್ ಬಾಬು ಬೈರಾಪುರ, ಖಜಾಂಚಿಯಾಗಿ ರಮೇಶ್ ಶಿವಪುರ, ಕಾನೂನು ಸಲಹೆಗಾರರಾಗಿ ವೆಂಕಟೇಶ್, ತಿಪಟೂರು, ಮಹಿಳಾ ಸಂಚಾಲಕಿಯಾಗಿ ಧನಲಕ್ಷ್ಮಿ ಕೊನೇಹಳ್ಳಿ, ಸಂಘಟನಾ ಸಂಚಾಲಕರಾಗಿ ನಂದಿನಿ, ಮಡೆ ನೂರು, ಶಾರದಾ ಕಲ್ಲು ಶೆಟ್ಟಿಹಳ್ಳಿ, ನಗರ ಸಂಚಾಲಕರಾಗಿ ರಮೇಶ್ ಮಾರನಗೆರೆ ನಗರ ಸಂಘಟನಾ ಸಂಚಾಲಕರಾಗಿ, ಮಂಜುನಾಥ್ ಮಾರನಗೆರೆ, ಸಂದೀಪ್ ಮಣಿಕಂಠ ಮುನ್ನು ಕಂಚಾಘಟ್ಟ ಮನೋಜ್ ಲೋಕೇಶ್, ಕಸಬಾ ಹೋಬಳಿ ಸಂಚಾಲಕರಾಗಿ ಗಿರೀಶ್ ಕುಮಾರ್ ನಾಗಹಳ್ಳಿ, ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ನಾಗತಿಹಳ್ಳಿ ಕೃಷ್ಣಮೂರ್ತಿ, ಶಿವಲಿಂಗಪ್ಪ, ಮುರುಳಿ, ಮಧುಸೂಧನ್, ಧನಲಕ್ಷ್ಮಿ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

Download Eedina App Android / iOS

X