ಉಡುಪಿ | ಮಕ್ಕಳ ಜೀವನ ಹೊಳೆಯುವ ನಕ್ಷತ್ರದಂತೆ ಇರಬೇಕು: ಯೂಸುಫ್ ಕನ್ನಿ

Date:

Advertisements

“ಪ್ರತಿಯೊಂದು ಮಗುವಿನ ಮೊದಲ ಪಾಠಶಾಲೆ ತಾಯಿಯ ಮಡಿಲು ಆಗಿರುತ್ತದೆ. ತಾಯಿ ತನ್ನ ಮಗುವಿನ ಉತ್ತಮ ಸಂಸ್ಕಾರವುಳ್ಳ ವಿದ್ಯೆ ನೀಡಿ, ಇಹ ಮತ್ತು ಪರಲೋಕವನ್ನು ಬೆಳಗಿಸಲು ಉತ್ತಮ ಮಾರ್ಗದರ್ಶಿಯಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಯೂಸುಫ್ ಕನ್ನಿ ಹೇಳಿದ್ದಾರೆ.

ಉಡುಪಿಯಲ್ಲಿಸಣ್ಣ ಮಕ್ಕಳಿಗಾಗಿ ರೋಶನ್ ಸಿತಾರೆ ಶೀಷಿಕೆ ಅಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಮಕ್ಕಳ ಜೀವನ ಹೊಳೆಯುವ ನಕ್ಷತ್ರದಂತೆ ಇರಬೇಕು. ಮಕ್ಕಳಿಗೆ ಶಿಸ್ತಿನ ಅರಿವು ಮೂಡಿಸಬೇಕು. ಶಿಸ್ತನ್ನು ಅಳವಡಿಸಿ ಕೊಳ್ಳಲು, ಶ್ರಮ ಜೀವಿಯಾಗಿ ಬದುಕಲು, ಅವರನ್ನು ಸದ್ಗುಣವಂರನ್ನಾಗಿಸುವ ವಾತಾವರಣ ನಿರ್ಮಿಸಬೇಕು” ಎಂದರು.

ಕಾರ್ಯಕ್ರಮದಲ್ಲಿ ಕೆಮ್ಮಣ್ಣು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಮತಿ ರಝೀಯ, ಹಾಲಿ ಸದಸ್ಯೆ ಮುಮ್ತಾಜ್ ಬಾನು, ಡಾ ಶಾಹೆ ನವಾಜ್ ಹಾಗು ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಅಧ್ಯಕ್ಷ ಡಾ ಅಬ್ದುಲ್ ಅಜೀಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisements

ಕ್ರೀಡಾಕೂಟದಲ್ಲಿ ಜಿಲ್ಲೆಯ ಶಿರೂರು ಬೈಂದೂರು, ಗಂಗೊಳ್ಳಿ, ಕುಂದಾಪುರ, ಕಂಡ್ಲೂರು, ಕಾರ್ಕಳ, ಕಾಪು, ಮಲ್ಪೆ, ಹೂಡೆ, ಕುಕ್ಕಿಕಟ್ಟೆ, ಕಟಪಾಡಿ ಹಾಗೂ ಇನ್ನಿತರ ಪ್ರದೇಶಗಳ ಸುಮಾರು 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ, ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಅಧ್ಯಕ್ಷ ಡಾ ಅಬ್ದುಲ್ ಅಜೀಜ್, ಹೂಡೆ ಅಧ್ಯಕ್ಷ ಅಬ್ದುಲ್ ಕಾದಿರ್ ಹೂಡೆ, ಕಾರ್ಯಕ್ರಮದ ಸಂಚಾಲಕ ಜಿಯಾಉರ‍್ರಹ್ಮಾನ್ ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಮಹಿಳಾ ಸಂಚಾಲಕಿ ಕುಲ್ಸೂಮ್ ಅಬುಬಕ್ಕರ್, ಇಬ್ರಾಹೀಮ್ ಚೌಗುಲೆ ಉಪಸ್ಥಿತರಿದ್ದರು. ಡಾ ಅಬ್ದುಲ್ ಅಜೀಜ್ ಪ್ರಾಸ್ತಾವಿಕ ಮಾಡಿದರು. ಯಸೀನ್ ಮನ್ನ ಹಾಗು ಅನ್ವರ್ ಅಲಿ ಕಾಪು ಕರ‍್ಯಕ್ರಮ ನಿರೂಪಿಸಿದರು. ನಿಸಾರ್ ಧನ್ಯವಾದವಿತ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X