ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಆದರೆ, ಸ್ವಯಂ ಉದ್ಯೋಗ ಮಾಡುವ ಮೂಲಕ ನಾಲ್ಕು ಜನರಿಗೆ ಉದ್ಯೋಗ ಕೊಡುವಂತಹ ಕಾರ್ಯ ಮಾಡುವುದು ಉತ್ತಮ ಕಾರ್ಯ ಎಂದು ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅಭಿಪ್ರಾಯಪಟ್ಟರು.
ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸೂಗೂರೇಶ್ವರ ಭೂಜನಾಲಯದ ಎದುರುಗಡೆ ನೂತನವಾಗಿ ಆರಂಭಿಸಲಾಗಿರುವ ʼಟೀ ಟೈಂʼಚಹಾ ಅಂಗಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸುಮಾರು 39ಬಗೆಯ ಚಹಾ ಕಾಫೀ, ಜ್ಯೂಸ್, ಮಿಲ್ಕ್ ಶೇಖ್ ಸೇರಿ ಬೆಲ್ಲದ ಚಾ ಒದಗಿಸುವ ಕೇಂದ್ರ ಇದಾಗಿದ್ದು, ಇಂತಹ ಕೇಂದ್ರಗಳನ್ನು ತೆರೆಯುವ ಮೂಲಕ ಯುವಕರು ಸ್ವಾವಲಂಬಿಯಾಗಬಹುದು ಮತ್ತು ಸ್ವಯಂ ಹಾಗೂ ಇನ್ನಿತರರ ನಿರುದ್ಯೋಗ ಸಮಸ್ಯೆಯನ್ನು ಮೆಟ್ಟಿ ನಿಲ್ಲಬಹುದಾಗಿದೆ ಎಂದು ಹೇಳಿದರು.
ಈ ರೀತಿಯ ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಕೊಟ್ಟಲ್ಲಿ ಯುವಕರು ಸ್ವಯಂ ಉದ್ಯೋಗ ಮಾಡಲು ಮುಂದಾಗುತ್ತಾರೆ ಎಂದರು.
ಇಂತಹ ಸ್ವಯಂ ಉದ್ಯೋಗ ಒದಗಿಸುವ ಫ್ರಾಂಚೆಸಿಗಳು ಜನನಿಭಿಡ ಸ್ಥಳದಲ್ಲಿ ಇನ್ನು ಹೆಚ್ಚು ಆರಂಭಿಸಬೇಕು ಇದರಿಂದ ಉದ್ಯೋಗವೂ ಲಭಿಸುತ್ತದೆ. ಸ್ವಯಂ ಉದ್ಯೋಗಕ್ಕೆ ಒತ್ತು ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಫ್ರಾಂಚೆಸಿಯ ನಿರ್ವಾಹಕ ಕಾಂತು ಪುಟಪಾಕ್, ಚಾರಿ ದಂತಾಪುರ, ಶಿವಕುಮಾರ ದಂತಾಪುರ, ದೇವದಾಸ ಕೆ. ಗುರುಮಠಕಲ್, ಮದರಪ್ಪ ಮಡೆಪಲ್ಲಿ, ನಾಗೇಶ, ಗಣೇಶ ಅಜಲಾಪುರ ಸೇರಿ ಅನೇಕರು ಉಪಸ್ಥಿತರಿದ್ದರು.