ಬೆಂಗಳೂರು | ಕಲಾವಿದರಿಂದ ನೇರವಾಗಿ ಕಲಾಕೃತಿ ಖರೀದಿ; ಚಿತ್ರಸಂತೆಯಲ್ಲಿ ಜನವೋ ಜನ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅವರೇ ಮೇಳ, ಕಡಲೆಕಾಯಿ ಪರಿಷೆ, ಕೇಕ್ ಷೋ, ಸಿರಿಧಾನ್ಯ ಮೇಳ, ಸೇರಿದಂತೆ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ನಗರದ ಜನರು ವರ್ಷಪೂರ್ತಿ ಹೊಸತನ ನೋಡಲು, ಅರಿಯಲು ಈ ಸಂತೆ, ಜಾತ್ರೆ, ಮೇಳ ಹಾಗೂ ಪರಿಷೆ ಸಹಕಾರಿಯಾಗಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ 21ನೇ ಚಿತ್ರಸಂತೆಯನ್ನು ಚಿತ್ರಕಲಾ ಪರಿಷತ್ತು ಆಯೋಜಿಸಿದೆ.

ಪ್ರತಿ ವರ್ಷವೂ ಚಿತ್ರಕಲಾಕಾರರು, ಚಿತ್ರಕಲಾ ಆಸ್ತಕರು ಹಾಗೂ ಅಭಿಮಾನಿಗಳು ವರ್ಷೊಕ್ಕೊಮ್ಮೆ ಬಂದು ಸೇರುವ ತಾಣ ಈ ಕುಮಾರಕೃಪಾ ರಸ್ತೆ. ವರ್ಷಕ್ಕೆ ಒಂದೇ ದಿನ ನಡೆಯುವ ಈ ಚಿತ್ರಸಂತೆಯ ವೀಕ್ಷಣೆ ಮತ್ತು ಚಿತ್ರಕಲೆಗಳನ್ನು ಕೊಳ್ಳಲು ಲಕ್ಷಾಂತರ ಜನ ಕುಮಾರ ಕೃಪಾ ರಸ್ತೆ ಕಡೆಗೆ ಮುಖ ಮಾಡುತ್ತಾರೆ. ಪ್ರತಿ ಬಾರಿಯೂ ಚಿತ್ರಸಂತೆಯಲ್ಲಿ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ವಿಶೇಷ ಎಂದರೆ, ವರ್ಷದ ಆರಂಭದ ಮೊದಲ ಭಾನುವಾರ ಈ ಚಿತ್ರಸಂತೆ ನಡೆಯುತ್ತದೆ.

ಈ ವರ್ಷ ಜ.7ರ ಭಾನುವಾರ ಚಿತ್ರಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಚಿತ್ರಸಂತೆಯಲ್ಲಿ ಕಣ್ಮನ ಸೆಳೆವ ಕಲಾಪ್ರದರ್ಶನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.

Advertisements

ಬಿಬಿಎಂಪಿ 11

ಪ್ರತಿ ವರ್ಷ ಚಿತ್ರಸಂತೆಯ ಸಮಯದಲ್ಲಿ 1,200 ಮಳಿಗೆಗಳನ್ನು ತೆರೆಯಲಾಗುತ್ತಿತ್ತು. ಈ ಬಾರಿ ಚಿತ್ರಸಂತೆಗೆ 22 ರಾಜ್ಯಗಳ 2,726 ಕಲಾವಿದರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1,581 ಪುರುಷರು, 1,145 ಮಹಿಳೆಯರಿಂದ ಅರ್ಜಿಗಳು ಬಂದಿದ್ದವು. ಕರ್ನಾಟಕದಿಂದಲೇ 1386 ಅರ್ಜಿಗಳು ಬಂದಿದ್ದವು. ಅರ್ಜಿಗಳು ಹೆಚ್ಚಾದ ಹಿನ್ನೆಲೆ 1,500 ಮಂದಿ ಕಲಾವಿದರಿಗೆ ಮಳಿಗೆ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಶಿವಾನಂದ ವೃತ್ತದ ಮೇಲ್ಸೇತುವೆ ಕೆಳಗಡೆ 300 ಮಳಿಗೆಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದೆ. ಈ ಚಿತ್ರಸಂತೆಯಲ್ಲಿ ₹100 ನಿಂದ ಲಕ್ಷಗಳವರೆಗೆ ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಈ ಬಾರಿಯ ಚಿತ್ರಸಂತೆ ಹಲವು ವಿಶೇಷಗಳನ್ನು ಒಳಗೊಂಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಾಡಿದ ಸಾಧನೆ ಹಾಗೂ ಚಂದ್ರಯಾನ–3ರ ಯಶಸ್ಸಿನಿಂದ ಈ ಬಾರಿಯ ಚಿತ್ರಸಂತೆಯನ್ನು ಭಾರತೀಯ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಲಾಗಿದೆ.

ಚಿತ್ರಸಂತೆಯಲ್ಲಿ ಶಿವಾನಂದ ವೃತ್ತದ ಸಮೀಪದಿಂದ ವಿಂಡ್ಸರ್ ಮ್ಯಾನರ್ ಸೇತುವೆವರೆಗೆ 1,200 ಮಳಿಗೆಗಳು, ಉಳಿದ 300 ಮಳಿಗೆಗಳು ಸ್ಟೀಲ್ ಬ್ರಿಡ್ಜ್ ಕೆಳಗೆ ಹಾಗೂ ಸುತ್ತಮುತ್ತ ಇವೆ. ಇನ್ನು ಶಿವಾನಂದ ವೃತ್ತದಿಂದ ಗುರುರಾಜ ಕಲ್ಯಾಣ ಮಂಟಪದವರೆಗೆ ಸ್ಟೀಲ್ ಬ್ರಿಡ್ಜ್‌ನ ತಳಭಾಗದಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ಕಲಾಕೃತಿಗಳ ಮಾರಾಟ ಮಳಿಗೆಗಳನ್ನು ಹಾಕಲಾಗಿದೆ.

ಚಿತ್ರಸಂತೆ

ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾಧಿವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್, ಲಿಥೋಗ್ರಾಫ್, ಡೂಡಲ್, ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ, ಶಿಲ್ಪ ಕಲೆ, ಇನ್ಸ್ಟಲೇಶನ್ (ಪ್ರತಿಧಿಷ್ಠಾಧಿಪನಾ ಕಲೆ), ಪರ್ಫಾರ್ಮೆನ್ಸ್ ಕಲೆ ಹೀಗೆ ನಾನಾ ಮಾಧ್ಯಮದ ಚಿತ್ರಗಳು ಒಂದೇ ಸೂರಿನಡಿ ಪ್ರದರ್ಶನದಲ್ಲಿವೆ. ಇನ್ನು ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಅವಕಾಶವಿದೆ. ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲಿಯೇ ರಚಿಸಿಕೊಡುವ ಕಲಾವಿದರು ಇದ್ದಾರೆ.

ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

chitrasante1

ಪರಿಷತ್ತು ಸಂಗ್ರಹಿಸಿರುವ ತೊಗಲು ಗೊಂಬೆ ಹಾಗೂ ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನ ಪರಿಷತ್ತಿನ ಗ್ಯಾಲರಿಗಳಲ್ಲಿವೆ. ಈ ಬಾರಿಯ ಚಿತ್ರಸಂತೆಗೆ ಐದು ಲಕ್ಷದಿಂದ ಆರು ಲಕ್ಷ ಮಂದಿ ಭೇಟಿ ನೀಡುವ ಸಂಭವವಿದೆ. ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕುಮಾರಕೃಪಾ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 6 | ಮತ್ತೆ ಪುಟಿದೆದ್ದ ಜೆಪಿನಗರ 7ನೇ ಹಂತದ ಪುಟ್ಟೇನಹಳ್ಳಿ ಪ್ರಾಚೀನ ಕೆರೆ

ಈ ದಿನ ಜತೆಗೆ ಕಲಾವಿದರ ಮಾತು

“ಕಳೆದ 22 ವರ್ಷಗಳಿಂದ ನಾನು ಚಿತ್ರಕಲಾಕೃತಿ ಮಾಡುತ್ತಿದ್ದೇನೆ. ಕಳೆದ ನಾಲ್ಕು ವರ್ಷಗಳಿಂದ ಚಿತ್ರಸಂತೆಯಲ್ಲಿ ಭಾಗಿಯಾಗುತ್ತಿದ್ದೇನೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಷ್ಟೋಂದು ಆದಾಯ ಇಲ್ಲ. ಪೇಟಿಂಗ್‌ ನೋಡಿ ಚೆನ್ನಾಗಿದೆ ಎಂದು ಹೇಳುತ್ತಾರೆ. ಕೊಂಡುಕೊಳ್ಳುವವರ ಸಂಖ್ಯೆ ಇದೆ” ಎಂದು ಬೆಂಗಳೂರು ಮೂಲದ ಕಲಾವಿದೆ ರಚನಾ ಹೇಳಿದರು.

chitrasante 2

“ಆಕ್ಸಿಡೆಂಟ್‌ ಆದ ಬಳಿಕ ನಾನು ಕಾಲು ಕಳೆದುಕೊಂಡೆ, ಅಂದಿನಿಂದ ಸುಮ್ಮನೆ ಕುಳಿತುಕೊಳ್ಳಬಾರದು. ಏನಾದರೂ ಸಾಧನೆ ಮಾಡಬೇಕು ಎಂದು ಚಿತ್ರಕಲೆ ಕಲಿತೆ ಅಂದಿನಿಂದ ಇಂದಿನಿಂದವರೆಗೂ ಚಿತ್ರಕಲಾಕೃತಿಗಳನ್ನು ಮಾಡುತ್ತಿದ್ದೇನೆ. ಕಳೆದ ಮೂರು ವರ್ಷದಿಂದ ಚಿತ್ರಸಂತೆಯಲ್ಲಿ ಭಾಗಿಯಾಗುತ್ತಿದ್ದೇನೆ. ಇದು ಕಲಾಪ್ರೇಮಿಗಳಿಗೆ ಅವರ ಕಲಾಕೃತಿ ಮಾರಾಟ ಮಾಡಲು ಒಂದು ಉತ್ತಮ ವೇದಿಕೆಯಾಗಿದೆ” ಎಂದು ಆಕಲಾವಿದೆ ಉಷಾ ಹೇಳಿದರು.

ಜನರು ಏನಂತಾರೆ?

“ಸುಮಾರು ವರ್ಷಗಳಿಂದ ಚಿತ್ರಸಂತೆ ವೀಕ್ಷಣೆ ಮಾಡಲು ಬರುತ್ತಿದ್ದೇನೆ. ಎತ್ತ ಕಡೆ ತಿರುಗಿದರು ಸುಂದರವಾದ ಕಲಾಕೃತಿಗಳು ಕಂಗೊಳಿಸುತ್ತವೆ. ಇಲ್ಲಿರುವ ಕಲಾಕೃತಿಗಳನ್ನು ಕೊಂಡುಕೊಳ್ಳುವಷ್ಟು ಶಕ್ತಿ ನನ್ನಲಿಲ್ಲ. ನೋಡಿ ಕಣ್ತುಂಬಿಸಿಕೊಳ್ಳುತ್ತೇನೆ” ಎಂದು ವಿಜಯನಗರ ನಿವಾಸಿ ಲತಾ ಈ ದಿನ.ಕಾಮ್‌ಗೆ ಹೇಳಿದರು.

ಚಿತ್ರಸಂತೆ

“ನಾನು ಹುಬ್ಬಳ್ಳಿ ಮೂಲದವಳು. ಬೆಂಗಳೂರಿಗೆ ಬಂದು ಸುಮಾರು ವರ್ಷಗಳೇ ಕಳೆದಿವೆ. ಕಳೆದ 15 ವರ್ಷದಿಂದ ಚಿತ್ರಸಂತೆ ವೀಕ್ಷಣೆಗೆ ಬರುತ್ತಿದ್ದೇನೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಿತ್ರಸಂತೆ ನೋಡುವುದಕ್ಕೆ ಸೊಗಸಾಗಿದೆ. ನನಗೆ ಬೇಕಾದ ಮತ್ತು ಇಷ್ಟವಾದ ಕೆಲವೇ ಪೇಂಟಿಂಗ್‌ಗಳನ್ನು ಕೊಂಡುಕೊಂಡೆ” ಎಂದು ಕಮಲಾ ಅವರು ಸಂತಸ ವ್ಯಕ್ತಡಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X