“ಪತ್ರಿಕಾರಂಗವನ್ನು ಬೆಳೆಸಿದವರೂ ಇದ್ದಾರೆ. ಪತ್ರಿಕಾ ರಂಗವನ್ನು ಬಳಕೆ ಮಾಡಿಕೊಂಡು ಬೆಳೆದವರು ನಮ್ಮ ಮುಂದೆ ಇದ್ದಾರೆ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಪತ್ರಿಕಾರಂಗವನ್ನು ಕೆಲವರು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ಸಿದ್ಧನಗೌಡ ಪಾಟೀಲ್ ಅಭಿಪ್ರಾಯಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ʼಅಕ್ಷರ ಸಂಗಾತʼ ಸಾಹಿತ್ಯ ಮಾಸಿಕ ಪತ್ರಿಕೆ ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯನ್ನು ಮುನ್ನಡೆಸುತ್ತಾ ಬಂದಿರುವಂತ ಟಿ.ಎಸ್. ಗೊರವರ ಅವರನ್ನು ಅಭಿನಂದಿಸಿದರು.
“ಆಲೋಚನೆಗಳನ್ನ, ಚಿಂತನೆಗಳನ್ನ, ಸಾಮಾಜಿಕ ಚಿಂತನೆಗಳನ್ನು ರಾಜಕೀಯ, ಶೈಕ್ಷಣಿಕ ಬೆಳವಣಿಗೆಗಳ ವಿಚಾರಗಳನ್ನು ಎಲ್ಲ ಕ್ಷೇತ್ರಗಳ ವಿಚಾರಗಳನ್ನು ಜನರಿಗೆ ತಿಳಿಸುವುದೇ ಮಾಧ್ಯಮವಾಗಿರುತ್ತದೆ. ಈ ಎಲ್ಲ ಆಗುಹೋಗುಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸತು ಪತ್ರಿಕೆ ತರಲಾಯಿತು. ಸಾಹಿತ್ಯದ ಮೂಲಕ ಮನುಷ್ಯನ ಪ್ರಜ್ಞೆಯನ್ನು ಪ್ರವೇಶಿಸುವುದೇ ಸಾಹಿತ್ಯ ಪ್ರತಿಕೆಯಾಗಿದೆ ಎಂದರು.
ರಾಷ್ಟ್ರ, ರಾಜ್ಯದ, ವಿಶ್ವದ ಹಲವಾರು ಬೆಳವಣಿಗಳ ಅರ್ಥ ಮಾಡಿಕೊಳ್ಳಬೇಕಾದರೆ, ಯಾವುದೇ ಒಂದು ತೀರ್ಮಾನ ತೆಗೆದುಕೊಂಡರೆ ಅದು ಜನರಿಗೆ ಎಷ್ಟು ಪೂರಕವಾಗಿದೆ ಅಥವಾ ವಿರೋಧವಾಗಿದೆ ಎಂಬುದನ್ನು ಅರ್ಥಮಾಡಿಸಿಕೊಳ್ಳಲು ಈ ರೀತಿಯ ಪತ್ರಿಕೆಗಳು ಪರಿಣಾಮಕಾರಿ ಎಂದು ತಿಳಿಸಿದರು.
ಟಿವಿ ಮಾಧ್ಯಮಗಳು, ರೈತರ, ಬಡವರ, ಪರವಾಗಿ ಇವುಗಳಲ್ಲಿ ಯಾವುದೇ ಕಾಳಜಿಯಿಲ್ಲ. ಇವತ್ತು ಅತ್ಯಾಚಾರಗಳು ಆಗುತ್ತಿವೆ. ಬರಗಾಲ ಬೀಳ್ತಿದೆ, ಮಳೆ ಕಡಿಮೆ ಆಗ್ತಿದೆ. ಇಂತ ಸಂದರ್ಭದಲ್ಲಿ ಇಂತವುಗಳ ಕುರಿತು ಮಾತನಾಡದೇ ಅಯೋಧ್ಯೆಯಲ್ಲಿ ಏನಾಯಿತು, ರಾಮ ಮಂದಿರ ಬೇಕಾ? ಬೇಡ್ವಾ? ರಾಮ ಮಂದಿರ ಕಟ್ಟುವಾಗ ನಾವೇನ್ ಮಾಡ್ಬೇಕು, ನಿಮಗೆ ಅಕ್ಕಿಕಾಳು ಬಂದ್ವಾ, ಇದನ್ನೇ ಹೇಳ್ತಾ ಇದ್ದಾವೆ” ಎಂದು ವಿಷಾದಿಸಿದರು.
ಪಲ್ಲವ ವೆಂಕಟೇಶ ಮಾತನಾಡಿ, ಜೀವಪರ ಸಂಗತಿಗಳನ್ನು ಪಸರಿಸುವ ಒಂದು ಜಗತ್ತಿದೆ. ಸೃಜನಶೀಲತೆಯನ್ನು ನಾಶಗೊಳಿಸುವ ಒಂದು ಗುಂಪಿದೆ. ನಾವು ಯಾವ ಗುಂಪಿಗೆ ಇರಬೇಕೆಂದರೆ ಜೀವಪರ ಸಂಗತಿಗಳನ್ನು ಪಸರಿಸುವವರೊಂದಿಗೆ ಇರಬೇಕು ಎಂದು ಸಲಹೆ ನೀಡಿದರು.
ಐ.ಜೆ. ಮ್ಯಾಗೇರಿ, ಅನಸೂಯಾ ಕಾಂಬಳೆ ಅಕ್ಷರ ಸಂಗಾತ ಪಯಣ ಪ್ರತಿಕ್ರಿಯೆ ಕಾಲಕಾಲೇಶ್ವರ ಹಾದಿಮನಿ ಶಿವನಗೌಡ, ಮೆನಸಗಿ, ಮಹಾಂತೇಶ ಹಿರೇಕುರುಬರ್, ಮೌನೇಶ್ ನವಲಹಳ್ಳಿ, ಬಿ.ಎ. ಕೆಂಚರೆಡ್ಡಿ ಮಾತನಾಡಿದರು.
ವಿಶೇಷಾಂಕದ ಕವಿತೆಗಳನ್ನು ವಿಲ್ಸನ್ ಕಟೀಲ್, ಕಿರೆಸೂರು ಗಿರಿಯಪ್ಪ, ಕಳಕೇಶ ಗೂಡ್ಲಾನೂರು, ದಮ್ಮೂರು ಮಲ್ಲಿಕಾರ್ಜುನ ಹಾಗೂ ಸಾಹಿತ್ಯ ಆಸಕ್ತರು ಉಪಸ್ಥಿತರಿದ್ದರು.