ಗದಗ | ಪತ್ರಿಕಾರಂಗವನ್ನು ಇಂದು ವ್ಯಾಪಾರವನ್ನಾಗಿ ಮಾಡಿಕೊಳ್ಳಲಾಗಿದೆ: ಸಿದ್ಧನಗೌಡ ಪಾಟೀಲ್

Date:

“ಪತ್ರಿಕಾರಂಗವನ್ನು ಬೆಳೆಸಿದವರೂ ಇದ್ದಾರೆ. ಪತ್ರಿಕಾ ರಂಗವನ್ನು ಬಳಕೆ ಮಾಡಿಕೊಂಡು ಬೆಳೆದವರು ನಮ್ಮ ಮುಂದೆ ಇದ್ದಾರೆ‌. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಪತ್ರಿಕಾರಂಗವನ್ನು ಕೆಲವರು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ಸಿದ್ಧನಗೌಡ ಪಾಟೀಲ್ ಅಭಿಪ್ರಾಯಿಸಿದರು.

- Advertisement -

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ʼಅಕ್ಷರ ಸಂಗಾತʼ ಸಾಹಿತ್ಯ ಮಾಸಿಕ ಪತ್ರಿಕೆ ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯನ್ನು ಮುನ್ನಡೆಸುತ್ತಾ ಬಂದಿರುವಂತ ಟಿ.ಎಸ್. ಗೊರವರ ಅವರನ್ನು ಅಭಿನಂದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಆಲೋಚನೆಗಳನ್ನ, ಚಿಂತನೆಗಳನ್ನ, ಸಾಮಾಜಿಕ ಚಿಂತನೆಗಳನ್ನು ರಾಜಕೀಯ, ಶೈಕ್ಷಣಿಕ ಬೆಳವಣಿಗೆಗಳ ವಿಚಾರಗಳನ್ನು ಎಲ್ಲ ಕ್ಷೇತ್ರಗಳ ವಿಚಾರಗಳನ್ನು ಜನರಿಗೆ ತಿಳಿಸುವುದೇ ಮಾಧ್ಯಮವಾಗಿರುತ್ತದೆ. ಈ ಎಲ್ಲ ಆಗುಹೋಗುಗಳನ್ನು ಗಮನದಲ್ಲಿ‌ ಇಟ್ಟುಕೊಂಡು ಹೊಸತು ಪತ್ರಿಕೆ ತರಲಾಯಿತು. ಸಾಹಿತ್ಯದ ಮೂಲಕ ಮನುಷ್ಯನ ಪ್ರಜ್ಞೆಯನ್ನು ಪ್ರವೇಶಿಸುವುದೇ ಸಾಹಿತ್ಯ ಪ್ರತಿಕೆಯಾಗಿದೆ ಎಂದರು.

ರಾಷ್ಟ್ರ, ರಾಜ್ಯದ, ವಿಶ್ವದ ಹಲವಾರು ಬೆಳವಣಿಗಳ ಅರ್ಥ ಮಾಡಿಕೊಳ್ಳಬೇಕಾದರೆ, ಯಾವುದೇ ಒಂದು ತೀರ್ಮಾನ ತೆಗೆದುಕೊಂಡರೆ ಅದು ಜನರಿಗೆ ಎಷ್ಟು ಪೂರಕವಾಗಿದೆ ಅಥವಾ ವಿರೋಧವಾಗಿದೆ ಎಂಬುದನ್ನು ಅರ್ಥಮಾಡಿಸಿಕೊಳ್ಳಲು ಈ ರೀತಿಯ ಪತ್ರಿಕೆಗಳು ಪರಿಣಾಮಕಾರಿ ಎಂದು ತಿಳಿಸಿದರು.

ಟಿವಿ ಮಾಧ್ಯಮಗಳು, ರೈತರ, ಬಡವರ, ಪರವಾಗಿ ಇವುಗಳಲ್ಲಿ ಯಾವುದೇ ಕಾಳಜಿಯಿಲ್ಲ. ಇವತ್ತು ಅತ್ಯಾಚಾರಗಳು ಆಗುತ್ತಿವೆ. ಬರಗಾಲ ಬೀಳ್ತಿದೆ, ಮಳೆ ಕಡಿಮೆ ಆಗ್ತಿದೆ. ಇಂತ ಸಂದರ್ಭದಲ್ಲಿ ಇಂತವುಗಳ ಕುರಿತು ಮಾತನಾಡದೇ ಅಯೋಧ್ಯೆಯಲ್ಲಿ ಏನಾಯಿತು, ರಾಮ ಮಂದಿರ ಬೇಕಾ? ಬೇಡ್ವಾ? ರಾಮ ಮಂದಿರ ಕಟ್ಟುವಾಗ ನಾವೇನ್ ಮಾಡ್ಬೇಕು, ನಿಮಗೆ ಅಕ್ಕಿಕಾಳು ಬಂದ್ವಾ, ಇದನ್ನೇ ಹೇಳ್ತಾ ಇದ್ದಾವೆ” ಎಂದು ವಿಷಾದಿಸಿದರು.

ಪಲ್ಲವ ವೆಂಕಟೇಶ ಮಾತನಾಡಿ, ಜೀವಪರ ಸಂಗತಿಗಳನ್ನು ಪಸರಿಸುವ ಒಂದು ಜಗತ್ತಿದೆ. ಸೃಜನಶೀಲತೆಯನ್ನು ನಾಶಗೊಳಿಸುವ ಒಂದು ಗುಂಪಿದೆ. ನಾವು ಯಾವ ಗುಂಪಿಗೆ ಇರಬೇಕೆಂದರೆ ಜೀವಪರ ಸಂಗತಿಗಳನ್ನು ಪಸರಿಸುವವರೊಂದಿಗೆ ಇರಬೇಕು ಎಂದು ಸಲಹೆ ನೀಡಿದರು.

ಐ.ಜೆ. ಮ್ಯಾಗೇರಿ, ಅನಸೂಯಾ ಕಾಂಬಳೆ ಅಕ್ಷರ ಸಂಗಾತ ಪಯಣ ಪ್ರತಿಕ್ರಿಯೆ ಕಾಲಕಾಲೇಶ್ವರ ಹಾದಿಮನಿ ಶಿವನಗೌಡ, ಮೆನಸಗಿ, ಮಹಾಂತೇಶ ಹಿರೇಕುರುಬರ್, ಮೌನೇಶ್ ನವಲಹಳ್ಳಿ, ಬಿ.ಎ. ಕೆಂಚರೆಡ್ಡಿ ಮಾತನಾಡಿದರು.

ವಿಶೇಷಾಂಕದ ಕವಿತೆಗಳನ್ನು ವಿಲ್ಸನ್ ಕಟೀಲ್, ಕಿರೆಸೂರು ಗಿರಿಯಪ್ಪ, ಕಳಕೇಶ ಗೂಡ್ಲಾನೂರು, ದಮ್ಮೂರು ಮಲ್ಲಿಕಾರ್ಜುನ ಹಾಗೂ ಸಾಹಿತ್ಯ ಆಸಕ್ತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...