ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಅಂಚೆ ಇಲಾಖೆ ಆವರಣದಲ್ಲಿರುವ ಮತ್ತು ನಗರದ ಸುತ್ತಮುತ್ತಲಿರುವ ಎಲ್ಲ ಬೃಹತ್ ಮರಗಳ ರಕ್ಷಣೆಗೆ ಹಸಿರು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಹೋರಾಟ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮುಧೋಳ್ ನಗರದಲ್ಲಿ ಹಸಿರು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಪರಿಸರ ರಕ್ಷಣಾ ಹೋರಾಟ, ಬನ್ನಿ ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಗಿಡ ಮರ ಉಳಿದರೆ ಅಂತರ್ಜಲ ಉಳಿಯುವುದು, ಮರಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ, ಮುಧೋಳ ತಾಲೂಕು ನಿವಾಸಿಗಳಾಗಿದ್ದು, ನಾವು ಪಟ್ಟಣದಲ್ಲಿರುವ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಹಾಗೂ ಮರಾಠ ಶಾಲೆಯ ಆವರಣದಲ್ಲಿರುವ ಮರಗಳನ್ನು ಕಟಾವು ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ದಯವಿಟ್ಟು ಈ ಮರಗಳನ್ನು ಕಡಿದು ನಾಶಮಾಡದಂತೆ ನಿಗಾವಹಿಸಿ ಉಳಿಸಿ ಕೊಡಬೇಕು” ಎಂದು ಸಂಘಟನೆಗಳಿಂದ ಮನವಿ ಮಾಡಿದರು.
“ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಹಾಗೂ ಪ್ರಸ್ತುತ ದಿನಗಳಲ್ಲಿ ನಮ್ಮ ಸುತ್ತಮುತ್ತಲೂ ಇರುವ ಮರಗಿಡಗಳನ್ನು ಕಡಿದು ಪರಿಸರ ನಾಶ ಮಾಡುತ್ತಿರುವುದು ಶೋಚನಿಯವಾಗಿದೆ. ಪ್ರಸ್ತುತ ತಾವುಗಳು ಈಗ ಕಡಿಯಲು ಹೊರಟಿರುವ ಮರಗಳಿಂದ ಸಾರ್ವಜನಿಕವಾಗಿ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೆ ಈ ಮರಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಮರಗಳನ್ನು ನಮ್ಮ ಮುಧೋಳದ ಘೋರ್ಪಡೆ ಮಹಾರಾಜರು ಮುಂದಿನ ಪೀಳಿಗಾಗಿ ನಟ್ಟಿರುವ ಮರಗಳಾಗಿದ್ದು, ಈ ಮರಗಳು ಸಾವಿರಾರು ಪಕ್ಷಗಳಿಗೆ ಆಶ್ರಯ ತಾಣವಾಗಿವೆ” ಎಂದರು.
“ಉತ್ತಮ ಗಾಳಿ, ನೆರಳು, ತಂಪಾದ ವಾತಾವರಣ ನೀಡುತ್ತೀರುವ ಇಂತಹ ಮರಗಳನ್ನು ಕಡಿಯುವುದರಿಂದ ಸಾರ್ವಜನಿಕರಿಗೆ ತುಂಬಲಾರದ ನಷ್ಟವಾಗುತ್ತದೆ. ಹಾಗಾಗಿ ದಯವಿಟ್ಟು ನಮ್ಮ ಮರಗಳನ್ನು ಕಡಿಯದೆ ಹಾಗೇ ಉಳಿಸಿ. ನಮ್ಮ ಪರಿಸರ ಸಂಕ್ಷಣೆ ಮಾಡಲು ತಾವುಗಳು ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಿಂದು ರಾಷ್ಟ್ರವಾಗಿಸುವುದನ್ನು ತಡೆಯದಿದ್ದರೆ ಭಾರತ ನಾಶ: ಚಿಂತಕ ರಾಮಚಂದ್ರ ಗುಹಾ
ಈ ಸಂದರ್ಭದಲ್ಲಿ ರೈತ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ, ದಲಿತ ಸಂಘರ್ಷ ಸಮಿತಿ(ಭೀಮವಾದ) ಉಪಾಧ್ಯಕ್ಷ, ಹಸಿರು ಗ್ರಾಮೀಣ ಸಂಸ್ಥೆ ಪ್ರಕಾಶ್ ಚಕ್ರವರ್ತಿ, ಭೀಮ್ ಆರ್ಮಿ ಸಂಘಟನೆಯ ಮುಖಂಡ, ಭೀಮರಾವ್ ಕಾಳವ್ವಗೋಳ ಭಾರತೀಯ ಬೌದ್ಧ ಮಹಾಸಭಾ ಸದಸ್ಯ ಸಂಜು ಕರನ್ನವರ, ಸಂಜೀವಿನಿ ಸಮಗ್ರ ಶಿಕ್ಷಣ ಗ್ರಾಮೀಣ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ ಪೂಜಾರ, ಅಂಜುಮನ್ ಆಡಳಿತ ಮಂಡಳಿ ಅಧ್ಯಕ್ಷ ಆರಿಫ್ ಮೂವಿನ್ ಸೇರಿದಂತೆ ಇತರರು ಇದ್ದರು.