ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡಿ, ಮಾಲಾಧಾರಿಗಳಿಗೆ ಪ್ರಸಾದ ಹಂಚಿ ಭಾವೈಕ್ಯತೆ ಸಾರಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಯನಗರ ನಿವಾಸಿ, ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಶಿಂ ಅಲಿ ಮುದ್ದಾಬಳ್ಳಿ ಅವರು ತಮ್ಮ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳಿಂದ ಭಜನೆ ಮಾಡಿಸಿ, ಪ್ರಸಾದ ಹಂಚಿದ್ದಾರೆ.
ಕಾಶಿಂ ಅಲಿ ಅವರ ಕುಟುಂಬಸ್ಥರೂ ಕೂಡ ಅಯ್ಯಪ್ಪ ಮಾಲಾಧಾರಿಗಳ ಜೊತೆಗೂಡಿ ಭಜನೆ ಮಾಡಿದ್ದಾರೆ. ಮಾಲಾಧಾರಿಗಳಿಗೆ ಸತ್ಕರಿಸಿದ್ದಾರೆ.
“ಎಲ್ಲ ಧರ್ಮಗಳು ಒಂದೇ. ಲ್ಲಾ ಧರ್ಮದ ಸಾರಗಳು ಎಲ್ಲರಿಗೂ ಗೊತ್ತಿರಬೇಕು” ಎಂದು ಕಾಶಿಂ ಅಲಿ ಹೇಳಿದ್ದಾರೆ.