ಅಪ್ರಾಪ್ತೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ನೇಪಾಳ ಕ್ರಿಕೆಟ್ ತಂಡದ ಆಟಗಾರ ಸಂದೀಪ್ ಲಮಿಚನ್ನೆ ಎಂಬಾತನಿಗೆ ನೇಪಾಳ ರಾಷ್ಟ್ರೀಯ ನ್ಯಾಯಾಲಯ 8 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಶಶೀರ್ ರಾಜ್ ದಕಲ್ ನೇತೃತ್ವದ ಪೀಠವು ಕಳೆದ ವರ್ಷದ ಡಿಸೆಂಬರ್ 29 ರಂದು ಅಪ್ರಾಪ್ತೆ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ನಡೆಸಿ ಅಪರಾಧಿ ಎಂದು ಘೋಷಿಸಿದ್ದ ಸಂದೀಪ್ ಲಮಿಚನ್ನೆಗೆ ಶಿಕ್ಷೆ ನೀಡಿ ತೀರ್ಪು ನೀಡಿದೆ.
17 ಅಪ್ರಾಪ್ತೆಯೊಬ್ಬರ ಮೇಲೆ ಕಠ್ಮಂಡುವಿನ ಹೋಟೆಲ್‌ನಲ್ಲಿ ಅತ್ಯಾಚಾರವೆಸಗಿದ ಆರೋಪಕ್ಕಾಗಿ ಸಂದೀಪ್ ಲಮಿಚನ್ನೆಯನ್ನು 2022ರ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ, ಸರಣಿ ಸಮಬಲ: ಒಂದೂವರೆ ದಿನದಲ್ಲಿ ಮುಗಿದ ಟೆಸ್ಟ್ ಹೊಸ ದಾಖಲೆ
ಆದಾಗ್ಯೂ ಜನವರಿ 2023ರಲ್ಲಿ ನ್ಯಾಯಾಲಯ ಈತನನ್ನು ಬಿಡುಗಡೆ ಮಾಡಿತ್ತು. ಶಿಕ್ಷೆ ನೀಡುವ ಸಮಯದಲ್ಲಿ ಅಪರಾಧಿ ಜಾಮೀನಿನ ಮೇಲೆ ಹೊರಗಿದ್ದರು. ಕೆಲವು ತಿಂಗಳ ಹಿಂದೆ ಕಠ್ಮಂಡು ಹೈಕೋರ್ಟ್ ಪ್ರಮುಖ ಷರತ್ತುಗಳೊಂದಿಗೆ 20 ಲಕ್ಷ ರೂ. ಬಾಂಡ್‌ನೊಂದಿಗೆ ಸಂದೀಪ್ ಲಮಿಚನ್ನೆಗೆ ಜಾಮೀನು ನೀಡಿತ್ತು.
23 ವರ್ಷದ ಲಮಿಚನ್ನೆ ನೇಪಾಳ ರಾಷ್ಟ್ರೀಯ ತಂಡದ ಕ್ರಿಕೆಟಿಗನಾಗಿದ್ದು, ಐಪಿಎಲ್ ಕ್ರಿಕೆಟ್‌ನಲ್ಲಿ ಆಡಿದ ಮೊದಲ ಮೊದಲ ಕ್ರಿಕೆಟಿಗನಾಗಿದ್ದಾನೆ. 2018ರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಪರ ಲಮಿಚನ್ನೆ ಪಾದಾರ್ಪಣೆ ಮಾಡಿದ್ದ.
ಲೆಗ್ ಸ್ಪಿನ್ನರ್ ಆಗಿರುವ ಸಂದೀಪ್ ಲಮಿಚನ್ನೆ ರಾಷ್ಟ್ರೀಯ ಟಿ20 ಕ್ರೀಡೆಗಳ ಜೊತೆಗೆ ಐಪಿಎಲ್, ಆಸೀಸ್ ಬಿಗ್ ಬ್ಯಾಷ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಬೌಲಿಂಗ್‌ನಲ್ಲಿ ಲಮಿಚನ್ನೆ 50 ವಿಕೆಟ್‌ಗಳನ್ನು ಕಬಳಿಸಿದ್ದ.