ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

Date:

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ ಹಳೆಯ ಸಿಮ್ ಸಂಖ್ಯೆ ದೊರೆತಿದ್ದು, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಯಶ್ ದಯಾಳ್‌ರಂತಹ ಕ್ರಿಕೆಟ್ ದಿಗ್ಗಜರಿಂದ ಕರೆಗಳು ಬಂದ ಘಟನೆ ಬೆಳಕಿಗೆ ಬಂದಿದೆ.

- Advertisement -

ಗರಿಯಾಬಂದ್ ಜಿಲ್ಲೆಯ ಮಡಗಾಂವ್ ಗ್ರಾಮದ 21 ವರ್ಷದ ಮನೀಶ್ ಬಿಸಿ ಎಂಬ ಯುವಕನಿಗೆ ಈ ಸಿಮ್ ಸಂಖ್ಯೆ ಮಂಜೂರಾಗಿತ್ತು. ಕಳೆದ ಆರು ತಿಂಗಳಿನಿಂದ ಈ ಸಂಖ್ಯೆಯನ್ನು ಯಾರೂ ಬಳಸದ ಕಾರಣ, ಟೆಲಿಕಾಂ ಕಂಪನಿಯ ನಿಯಮಗಳ ಪ್ರಕಾರ ಇದನ್ನು ಮನೀಶ್‌ಗೆ ಮರು ಮಂಜೂರು ಮಾಡಲಾಗಿತ್ತು ಎಂದು ಗರಿಯಾಬಂದ್ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರಖೇಚಾ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

“ಈ ಸಂಖ್ಯೆಯು ರಜತ್ ಪಾಟೀದಾರ್‌ರ ವಾಟ್ಸ್‌ಆ್ಯಪ್ ಖಾತೆಗೆ ಸಂಬಂಧಿಸಿದ್ದಾಗಿದ್ದು, ಆರು ತಿಂಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿತ್ತು. ಕಂಪನಿಯ ನಿಯಮದಂತೆ, ಇಂತಹ ಸಂಖ್ಯೆಗಳನ್ನು ಮತ್ತೊಬ್ಬ ಗ್ರಾಹಕನಿಗೆ ಮಂಜೂರು ಮಾಡಲಾಗುತ್ತದೆ. ಈ ಕಾರಣದಿಂದ ಮನೀಶ್ ಈ ಸಿಮ್ ಪಡೆದಿದ್ದರು. ಈಗ ಈ ಸಂಖ್ಯೆಯನ್ನು ರಜತ್ ಪಾಟೀದಾರ್‌ಗೆ ಮರಳಿಸಲಾಗಿದೆ,” ಎಂದು ರಖೇಚಾ ಸ್ಪಷ್ಟಪಡಿಸಿದ್ದಾರೆ.

ಮನೀಶ್ ಬಿಸಿ ಜೂನ್‌ನಲ್ಲಿ ಸ್ಥಳೀಯ ಮೊಬೈಲ್ ಅಂಗಡಿಯಿಂದ ಈ ಸಿಮ್ ಖರೀದಿಸಿದ್ದರು. ಒಂದು ವಾರದ ನಂತರ, ಆತನ ಸ್ನೇಹಿತ ಖೇಮ್ ರಾಜ್ ವಾಟ್ಸ್‌ಆ್ಯಪ್ ಅಳವಡಿಸುವಾಗ ರಜತ್ ಪಾಟೀದಾರ್‌ರ ಚಿತ್ರವು ಪ್ರೊಫೈಲ್‌ನಲ್ಲಿ ಸ್ವಯಂಚಾಲಿತವಾಗಿ ಕಾಣಿಸಿತು. ಮೊದಲಿಗೆ ಇದು ತಾಂತ್ರಿಕ ದೋಷವಿರಬಹುದು ಎಂದು ಭಾವಿಸಿದ ಮನೀಶ್, ಸಿಮ್‌ ಅಳವಡಿಸಿದ ನಂತರ ಕೊಹ್ಲಿ, ಎಬಿಡಿ ಮತ್ತು ಇತರ ಕ್ರಿಕೆಟಿಗರಿಂದ ಕರೆಗಳನ್ನು ಸ್ವೀಕರಿಸಲಾರಂಭಿಸಿದರು. ಆ ಕರೆಗಳಲ್ಲಿ ಎಲ್ಲರೂ ಆತನನ್ನು “ರಜತ್” ಎಂದೇ ಸಂಬೋಧಿಸುತ್ತಿದ್ದರು.

ಇದನ್ನು ಓದಿದ್ದೀರಾ? ಟೆಸ್ಟ್ ಕ್ರಿಕೆಟ್‌ನಲ್ಲಿರುವ ನಿಜವಾದ ಸೌಂದರ್ಯ ಹಾಗೂ ಭರವಸೆ ಮೂಡಿಸಿದ ಯಂಗ್ ಇಂಡಿಯಾ ಟೀಮ್

ಈ ಕರೆಗಳನ್ನು ಪ್ರ್ಯಾಂಕ್ ಎಂದು ಭಾವಿಸಿದ ಮನೀಶ್, ಸುಮಾರು ಎರಡು ವಾರಗಳ ಕಾಲ ಕ್ರಿಕೆಟಿಗರ ಜೊತೆ ಸಂಭಾಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ, ತಮ್ಮ ಸಂಖ್ಯೆಗೆ ಪ್ರವೇಶವಿಲ್ಲದ ಕಾರಣ ರಜತ್ ಪಾಟೀದಾರ್ ಮಧ್ಯಪ್ರದೇಶ ಸೈಬರ್ ಸೆಲ್‌ಗೆ ದೂರು ನೀಡಿದಾಗ, ಈ ವಿಷಯ ಗಂಭೀರವಾಯಿತು. ಸೈಬರ್ ಸೆಲ್ ತಂಡ ಗರಿಯಾಬಂದ್ ಪೊಲೀಸರ ಸಹಾಯದಿಂದ ಮನೀಶ್‌ನ ಗ್ರಾಮಕ್ಕೆ ತೆರಳಿ, ಸಿಮ್‌ ಅನ್ನು ಮರಳಿ ರಜತ್‌ಗೆ ಮರಳಿಸಿದೆ.

ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾದ ಮನೀಶ್‌ಗೆ ಈ ಘಟನೆ ಒಂದು ಅವಿಸ್ಮರಣೀಯ ಅನುಭವವಾಗಿದೆ. “ವಿರಾಟ್ ಕೊಹ್ಲಿ ಮತ್ತು ಎಬಿಡಿಯಂತಹ ದಿಗ್ಗಜರ ಜೊತೆ ಮಾತನಾಡುವ ಅವಕಾಶ ಸಿಕ್ಕಿತು. ಒಂದು ದಿನ ರಜತ್ ಪಾಟೀದಾರ್‌ರನ್ನು ಭೇಟಿಯಾಗುವ ಆಸೆ ಇದೆ,” ಎಂದು ಮನೀಶ್ ತಿಳಿಸಿದ್ದಾರೆ. ರಜತ್ ಪಾಟೀದಾರ್ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಿದ್ದು, ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ವಿದಾಯ: ದಿಟ್ಟ ನಿರ್ಧಾರದೊಂದಿಗೆ ನಿರ್ಗಮಿಸಿದ ಹರ್ಮನ್‌ಪ್ರೀತ್ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹರ್ಮನ್‌ಪ್ರೀತ್ ಕೌರ್...

SIR ವಿವಾದ | ಚುನಾವಣಾ ಆಯೋಗಕ್ಕೆ INDIA ವಿಪಕ್ಷಗಳ ಘೇರಾವ್; ರಾಹುಲ್‌, ಪ್ರಿಯಾಂಕಾ ಸೇರಿ ಹಲವರು ವಶಕ್ಕೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಅಕ್ರಮಗಳ...