ನನ್ನಂತ ಸಾಮಾನ್ಯ ಶಾಸಕನ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ನನಗೆ ನೋವುಂಟುಮಾಡಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಬೇಸರ ವ್ಯಕ್ತಪಡಿಸಿದರು.
ಇಡಿ ಶೋಧದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಕೋಚಿಮುಲ್ ನೇಮಕಾತಿ, ದರಖಾಸ್ತು ಸಮಿತಿ ಮತ್ತು ನನ್ನ ವಹಿವಾಟಿನ ಬಗ್ಗೆ ಪ್ರಶ್ನೆ ಮಾಡಿದರು. ಇಡಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗೆ ಕುಟುಂಬ ಸಮೇತರಾಗಿ ಎಲ್ಲರೂ ಸಹಕರಿಸಿದ್ದೇವೆ ಎಂದರು.
ನನ್ನ ಆಸ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಸೇರಿದಂತೆ ತಮ್ಮನ ಮಗಳ ಮದುವೆಗೆ ಇಟ್ಟಿದ್ದ 16 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಬೇಡ ಎಂದು ಮನವಿ ಮಾಡಿದರು ಬಿಡದೆ ತೆಗೆದುಕೊಂಡು ಹೋಗಿದ್ದಾರೆ. ಜನರ ಮಧ್ಯೆ ಬೆಳೆದಿದ್ದೇನೆ. ಯಾರು ಏನೇ ಮಾಡಿದರೂ ಏನೂ ಆಗುವುದಿಲ್ಲ. ನನ್ನ ಪಾಲಿಗೆ ದೇವರಿದ್ದಾನೆ ಎಂದಿದ್ದಾರೆ.
ಕೋಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ಆರೋಪ ಹಿನ್ನೆಲೆ ಬೆಳ್ಳಂಬೆಳಗ್ಗೆ ನಂಜೇಗೌಡರ ಕೊಮ್ಮನಹಳ್ಳಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ಜ.8ರಂದು ದಾಳಿ ನಡೆಸಿ ಪರಿಶೀಲನೆ ಮಾಡಿದ್ದರು.