ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಬಿಳೇನಿಸಿದ್ದ ಬಿರಾದಾರ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಬಿಳೇನಿಸಿದ್ದ ಅವರು ʼವಿಜಯಪುರ ಜಿಲ್ಲೆ ಕುರುಬ ಸಮುದಾಯದ ಸಾಂಸ್ಕೃತಿಕ ಅಧ್ಯಯನʼ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ವಿವಿಯ ಕನ್ನಡ ವಿಭಾಗದ ಡಾ. ಅರುಣಾ. ಎಸ್. ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ.
ಸಂಶೋಧನೆ ಕುರಿತು ಮಾತನಾಡಿರುವ ಬಿಳೇನಿಸಿದ್ದ ಅವರು, ಕುರುಬರನ್ನು ಒಂದು ಜಾತಿಗೆ ಸೀಮಿತಗೊಳಿಸಿದರೆ ಅದನ್ನು ಸಾಮಾಜಿಕವಾಗಿ ಹಾಲುಮತ ಸಮುದಾಯ ಎಂದು ಕರೆಯುವರು. ಜಾತಿಯಲ್ಲಿ ಅದೊಂದು ಸಮುದಾಯ ಪ್ರಜ್ಞೆ ಕೂಡಿಕೊಂಡು ಬೃಹತ್ ಸಮುದಾಯವಾಗಿದೆ. ಇಂತಹ ಸಮುದಾಯದಲ್ಲಿ ಅನೇಕ ಪಂಗಡಗಳನ್ನು ಕಾಣುತ್ತೇವೆ. ಆ ಎಲ್ಲ ಪಂಗಡಗಳು ವಿಜಯಪುರ ಜಿಲ್ಲೆಯಲ್ಲಿ ಹೇರಳವಾಗಿವೆ. ಇಲ್ಲಿನ ಹಾಲುಮತ ಸಮುದಾಯದ ಸಂಸ್ಕೃತಿ ಜನಜೀವನ, ಸಾಮಾಜಿಕ ಪರಿಸ್ಥಿತಿ, ಆರ್ಥಿಕತೆ, ಪೌರಾಣಿಕತೆ ಈ ಎಲ್ಲ ದೃಷ್ಟಿಯಲ್ಲಿ ನನ್ನ ಅಧ್ಯಯನ ಮಹತ್ವದ್ದಾಗಿದೆ ಎಂದಿದ್ದಾರೆ.