ಟಿಕೆಟ್ ವಿಚಾರಕ್ಕೆ ಮಹಿಳಾ ನಿರ್ವಾಹಕಿ ಮೇಲೆ ಪ್ರಯಾಣಕಿಯೊಬ್ಬರು ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಡಿಪೋ 40ಕ್ಕೆ ಸೇರಿದ ಬಸ್‌ನಲ್ಲಿ ಜನವರಿ 14ರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ನಗರೂರಿನಿಂದ ಮೆಜೆಸ್ಟಿಕ್‌ಗೆ ಬರುವ ಮಾರ್ಗದ ಬಸ್‌ನಲ್ಲಿ ಟಿಕೆಟ್ ಪಡೆಯದೇ ಓರ್ವ ಮಹಿಳೆ ಹಾಗೆಯೇ ಕುಳಿತಿದ್ದಾರೆ. ಈ ವೇಳೆ, ಟಿಕೆಟ್ ಪಡೆಯುವ ವಿಚಾರಕ್ಕೆ ಮಹಿಳಾ ಪ್ರಯಾಣಕಿ ಹಾಗೂ ಬಸ್ ನಿರ್ವಾಹಕಿ ಸುಕನ್ಯಾ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಡ್ರೋನ್ ಕ್ಯಾಮೆರಾ ಬಳಕೆ: ವಿಶ್ವೇಶ್ವರ ಭಟ್‌ಗೆ ಆರ್‌ಏಫ್‌ಒ ನೋಟಿಸ್
ಈ ವೇಳೆ, ದಾಸರಹಳ್ಳಿ ಬಳಿ ಬಸ್ ನಿರ್ವಾಹಕಿ ಸುಕನ್ಯಾ ಅವರ ಮೇಲೆ ಮಹಿಳಾ ಪ್ರಯಾಣಕಿ ಹಲ್ಲೆ ಮಾಡಿದ್ದು, ಸದ್ಯ ಅವರಿಗೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ….