- ಚುನಾವಣೆ ಪ್ರಚಾರದ ವೇಳೆ ಮನೋಜ್ ಕುಮಾರ್ ಮತ್ತು ಶಶಿಕುಮಾರ್ ಎಂಬುವವರಿಂದ ಹಲ್ಲೆ
- ವಿಡಿಯೋ ಮಾಡುವ ವೇಳೆ, ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಲಾಗಿದೆ: ಎಎಪಿ ಆರೋಪ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗೇರಿದೆ. ಈ ಹಿನ್ನಲೆ, ಬೆಂಗಳೂರಿನ ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರಚಾರ ನಡೆಸುವ ವೇಳೆ ಅವರ ಮೇಲೆ ಬಿಜೆಪಿ ಶಾಸಕ ರಘು ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಕೋವಿಡ್ ಸಮಯದಲ್ಲಿ ನಿಮ್ಮ ಪಕ್ಷದಿಂದ ಏನ್ ಮಾಡಿದ್ದೀರಿ. ನಮಗೆ ನಮ್ಮ ಶಾಸಕರೇ ಸಾಕು. ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ಎಂದು ಪ್ರಚಾರದ ವೇಳೆ ಬಿಜೆಪಿ ಶಾಸಕ ರಘು ಬೆಂಬಲಿಗರು ಬಂದು ಅಡ್ಡಿಪಡಿಸಿದ್ದಾರೆ. ವಿಡಿಯೋ ಮಾಡುವ ವೇಳೆ, ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಲಾಗಿದೆ ಎಂದು ಆಪ್ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೇ 10ರಂದು ತಪ್ಪದೆ ಮತದಾನ ಮಾಡಲು ಐಟಿ-ಬಿಟಿ ಉದ್ಯೋಗಿಗಳಿಗೆ ಸಂಬಳ ಸಹಿತ ರಜೆ
ಈ ಸಂಬಂಧ ಆಮ್ ಆದ್ಮಿ ಪಕ್ಷದ ಸರ್ ಸಿವಿ ರಾಮನ್ ನಗರ ಅಭ್ಯರ್ಥಿ ಮೋಹನ್ ದಾಸರಿ ಪ್ರತಿಕ್ರಿಯಿಸಿದ್ದು, “ಸಿವಿ ರಾಮನ್ ನಗರದ ಸುದ್ದಗುಂಟೆಪಾಳ್ಯದಲ್ಲಿ ಚುನಾವಣೆ ಪ್ರಚಾರದ ವೇಳೆ ಮನೋಜ್ ಕುಮಾರ್ ಮತ್ತು ಶಶಿಕುಮಾರ್ ಎನ್ನುವವರು ನಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮೋಹನ್ ಮತ್ತು ನಾಗರಾಜ್ ಸಂಗಡಿಗರು ಬಿಜೆಪಿಗೆ ಸೇರಿದವರಾಗಿದ್ದು, ಪ್ರಚಾರ ಆರಂಭಕ್ಕೂ ಮೊದಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಹಾಗೆ ನಮ್ಮ ಕಾರ್ಯಕರ್ತರು ವಿಡಿಯೋ ತೆಗೆಯಲು ಹೋದಾಗ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.