ದೆಹಲಿಯಿಂದ ಗೋವಾಕ್ಕೆ ಹೊರಟಿದ್ದ ಇಂಡಿಗೋ ವಿಮಾನವು 10 ಗಂಟೆ ವಿಳಂಬಗೊಂಡ ವಿಚಾರಕ್ಕೆ ಪೈಲಟ್ ಮೇಲೆ ಪ್ರಯಾಣಿಕನೋರ್ವ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಕೇಂದ್ರದ ನಾಗರಿಕ ಮತ್ತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, “ವಿಮಾನ ಪ್ರಯಾಣಿಕರಿಂದ ಇಂತಹ ಅಶಿಸ್ತಿನ ವರ್ತನೆಗಳನ್ನು ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಅವರು, “ವಿಮಾನಗಳಲ್ಲಿ ಅಶಿಸ್ತಿನ ವರ್ತನೆಯನ್ನು ಸಹಿಸಲಾಗುವುದಿಲ್ಲ ಮತ್ತು ಅಂತಹ ಪ್ರತಿಯೊಂದು ಘಟನೆಯನ್ನು ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳ ಪೈಕಿಯೇ ಕ್ರಮ ಕೈಗೊಳ್ಳಬಹುದಾದ ಹೆಚ್ಚು ಕ್ರಮಗಳನ್ನೇ ಬಳಸಲಾಗುವುದು” ಎಂದು ಹೇಳಿದ್ದಾರೆ.
“ದಿಲ್ಲಿ ವಿಮಾನ ನಿಲ್ದಾಣದಲ್ಲಿ ಭಾನುವಾರ ವಿಮಾನ ವಿಳಂಬವಾಗಿದ್ದಕ್ಕೆ ದಟ್ಟವಾದ ಮಂಜು ಕಾರಣ. 5 ಗಂಟೆಯಿಂದ ನಾಲ್ಕು ಗಂಟೆಗಳವರೆಗೆ ಸೀಮಿತ ಗೋಚರತೆ ಇತ್ತು. ಹಾಗಾಗಿ, ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ವಿಮಾನಗಳನ್ನು ವಿಳಂಬ ಮಾಡಬೇಕಾಗಿ ಬಂತು. ಇಂತಹ ಬೆಳವಣಿಗೆಗಳ ಸಂದರ್ಭದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೂಡ ಸಹಕಾರ ನೀಡಬೇಕಾಗುತ್ತದೆ” ಎಂದು ಸಲಹೆ ನೀಡಿದ್ದಾರೆ.
Yesterday, Delhi witnessed unprecedented fog wherein visibility fluctuated for several hours, and at times, dropped to zero between 5 AM to 9 AM.
The authorities, therefore, were compelled to enforce a shut-down of operations for some time even on CAT III runways (CAT III…
— Jyotiraditya M. Scindia (@JM_Scindia) January 15, 2024
ಭಾನುವಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಇನ್ನು ಮುಂದೆ ನಡೆಯಬಾರದು. ಈ ರೀತಿಯ ಅಶಿಸ್ತಿನ ವರ್ತನೆಯ ಘಟನೆಗಳು ಸ್ವೀಕಾರಾರ್ಹವಲ್ಲ. ಮಂಜು ಸಂಬಂಧಿತ ಪರಿಣಾಮವನ್ನು ಕಡಿಮೆ ಮಾಡಲು ವಾಯುಯಾನದ ಎಲ್ಲ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಜನರ ಸುರಕ್ಷತೆಗೂ ಆದ್ಯತೆ ನೀಡಬೇಕಾದುದರಿಂದ ಇಂತಹ ವಿಳಂಬಗಳು ಆಗುತ್ತವೆ. ಹಾಗಾಗಿ, ಎಲ್ಲಾ ಪ್ರಯಾಣಿಕರು ಇಂತಹ ಕಷ್ಟದ ಅವಧಿಯಲ್ಲಿ ತಾಳ್ಮೆ ವಹಿಸಿಕೊಳ್ಳಬೇಕೆಂಬುದು ನನ್ನ ವಿನಂತಿ” ಎಂದು ಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
A passenger punched an Indigo capt in the aircraft as he was making delay announcement. The guy ran up from the last row and punched the new Capt who replaced the previous crew who crossed FDTL. Unbelievable ! @DGCAIndia @MoCA_GoI pic.twitter.com/SkdlpWbaDd
— Capt_Ck (@Capt_Ck) January 14, 2024
ಕಳೆದ ಕೆಲವು ದಿನಗಳಿಂದ ಭಾರೀ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ವಿಮಾನಗಳು ವಿಳಂಬವಾಗಿದೆ. ಭಾನುವಾರದಂದು 150 ಕ್ಕೂ ಹೆಚ್ಚು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಇದರಿಂದ ಸೇವೆಯಲ್ಲಿ ವಿಳಂಬವಾಗಿತ್ತು.
ಇದನ್ನು ಓದಿದ್ದೀರಾ? 10 ಗಂಟೆ ಇಂಡಿಗೋ ವಿಮಾನ ವಿಳಂಬ: ಪೈಲಟ್ ಮೇಲೆ ಹಲ್ಲೆಗೈದ ಪ್ರಯಾಣಿಕ; ವಿಡಿಯೋ ವೈರಲ್
ಈ ನಡುವೆ ನಿನ್ನೆ(ಜ.14) 10 ಗಂಟೆಗಳ ಕಾಲ ಇಂಡಿಗೋ ವಿಮಾನ ಪ್ರಯಾಣ ವಿಳಂಬಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಪ್ರಯಾಣಿಕನೋರ್ವ ಪೈಲಟ್ ಮೇಲೆಯೇ ಹಲ್ಲೆಗೈದ ಘಟನೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿತ್ತು.
ಘಟನೆಯ ದೃಶ್ಯವನ್ನು ಪ್ರಯಾಣಿಕರೋರ್ವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿತ್ತು. ಕೋ- ಪೈಲಟ್ ಅನೂಪ್ ಕುಮಾರ್ ಎಂಬುವವರ ಮೇಲೆ ಕುಪಿತಗೊಂಡ ಸಾಹಿಲ್ ಕಟಾರಿಯಾ ಎಂಬ ಪ್ರಯಾಣಿಕ ಹಲ್ಲೆಗೈದಿದ್ದನು. ಆತನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ನ್ಯಾಯಾಲಯವು ಆತನಿಗೆ ಜಾಮೀನು ನೀಡಿರುವುದಾಗಿ ವರದಿಯಾಗಿದೆ.