ರೈತರಿಗೆ ಬೆಳೆ ಪರಿಹಾರ ಒದಗಿಸಲು ಫ್ರೂಟ್ಸ್ ತಂತ್ರಾಂಶದಲ್ಲಿ ರೈತ ಮಾಹಿತಿಯ ದಾಖಲೀಕರಣವನ್ನು ಇನ್ನೇರಡು ದಿನಗಳಲ್ಲಿ ಪೂರ್ಣಗೊಳಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ಇಂದು (ಜ.16) ರಾಯಚೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಆಧ್ಯಕ್ಷತೆವಹಿಸಿದ್ದ ಅವರು ತಹಸೀಲ್ದಾರರಿಂದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಒಂದು ಲಕ್ಷ 30 ಸಾವಿರಕ್ಕೂ ಹೆಚ್ಚು ರೈತರ ಮಾಹಿತಿ ದಾಖಲೀಕರಣ ಬಾಕಿಯಿದೆ.
ದೇವದುರ್ಗ ತಾಲೂಕ ಒಂದರಲ್ಲಿಯೇ 11 ಸಾವಿರ ರೈತರ ಮಾಹಿತಿ ದಾಖಲಾಗಿಲ್ಲ. ಇತರೆ ತಾಲೂಕಗಳಲ್ಲಿಯೂ ಬಾಕಿಯಿದೆ. ಕಾರಣ ತ್ವರಿತವಾಗಿ ತಂತ್ರಾಂಶದಲ್ಲಿ ಮಾಹಿತಿಯನ್ನು ಕ್ರೋಢಿಕರಿಸುವಂತೆ ಸೂಚಿಸಿದರು. ಬೆಳೆ ಇಲ್ಲದೇ ಇದ್ದರೂ ಪರಿಹಾರ ನೀಡುವದು, ಎನ್‌ಎ ಆಗಿರುವ ಭೂಮಿಗೂ ಪರಿಹಾರ ನೀಡಿರುವದು ನಡೆಯುತ್ತಿದೆ. ಆಧಾರದೊಂದಿಗೆ ಆರ್‌ಟಿಸಿ ಲಿಂಕ್ ಮಾಡುವ ಅವಶ್ಯಕತೆಯಿದೆ. ಈಗಾಗಲೇ ಕೇಂದ್ರ ಸರ್ಕಾರ ಈ ಕುರಿತು ನಿರ್ದೇಶನ ನೀಡಿದ್ದು ಶೀಘ್ರದಲ್ಲಿ ಜಾರಿಗೆ ಕ್ರಮವಹಿಸುವದಾಗಿ ಹೇಳಿದರು.
ಬರದೊಂದಿಗೆ ಬೇಸಿಗೆ ಸಮೀಪಿಸುತ್ತಿರುವುದರಿಂದ ಸಮಸ್ಯೆ ಇರುವ ಹಳ್ಳಿಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ. 374 ೩೭೪ ಸಮಸ್ಯೆಯಾತ್ಮಕ ಹಳ್ಳಿಗಳಲ್ಲಿ 269 ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿ ನೀರು ಪಡೆಯಲು ಮುಂಚಿತವಾಗಿ ಒಪ್ಪಂದಪೂರ್ಣಗೊಳಿಸಿಕೊಳ್ಳಿ ಎಂದರು. ಗ್ರಾಮ ಪಂಚಾಯ್ತಿ ಪಿಡಿಓ, ಗ್ರಾಮ ಲೆಕ್ಕಿಗ ಹಾಗೂ ಕುಡಿಯುವ ನೀರಿನ ಯೋಜನೆ ಸಹಾಯಕ ಅಭಿಯಂತರ ಒಳಗೊಂಡ ಮೂರು ಜನರ ಸಮಿತಿ ರಚಿಸಿ ಮೂರು ಜನ ಸಹಿಯೊಂದಿಗೆ ಸಲ್ಲಿಕೆಯಾಗುವ ಬಿಲ್‌ಗಳನ್ನು ತಹಸೀಲ್ದಾರರು ಹಣ ಪಾವತಿಗೆ ಕ್ರಮವಹಿಸಿ ಎಂದು ಸೂಚಿಸಿದರು.
ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರು ಕೊಳವೆಭಾವಿ ಬಳಸಿಕೊಂಡು ಕೃಷಿಮಾಡಿಕೊಳ್ಳುತ್ತಾರೆ. ಮುಂಚಿತವಾಗಿ ಒಪ್ಪಂದ ಮಾಡಿಕೊಂಡರೆ ಮಾತ್ರ ನೀರುಕೊಡಲು ಸಾಧ್ಯ. ಆದರೆ ಅಧಿಕಾರಿಗಳು ಒತ್ತಡ ಹಾಕಿ ರೈತರಿಗೆ ತೊಂದರೆ ಕೊಡದಂತೆ ಎಚ್ಚರವಹಿಸಬೇಕೆಂದರು.
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಖಾಸಗಿ ಮಾಲೀಕರಿಗೆ ಸಕಾಲದಲ್ಲಿ ಹಣ ನೀಡದೇ ಇರುವದರಿಂದ ನೀರು ಒದಗಿಸಲು ಹಿಂದೇಟು ಹಾಕುವಂತಾಗಿದೆ. ತ್ವರಿತವಾಗಿ ಬಿಲ್ ನೀಡಲು ಸೂಚಿಸಬೇಕೆಂದರು.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬೇಸಿಗೆ ಮುಂಚಿತವಾಗಿ ಟಾಸ್ಕ್ ಫೋರ್ಸ ಸಮಿತಿಯಲ್ಲಿ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಆದರೆ, ಜಿಲ್ಲಾಧಿಕಾರಿಗಳು ಕ್ರಿಯಾಯೋಜನೆ ತಿರಸ್ಕರಿಸಿದ್ದಾರೆ. ನಾಲಾದಲ್ಲಿರುವ ನೀರು ಬಳಸಿಕೊಳ್ಳಲು ಅವಕಾಶ ನೀಡಿದರೆ ಸಮಸ್ಯೆ ನೀಗಿಸಬಹುದು. ಸರ್ಕಾರದ ಸುತ್ತೋಲೆ ಬರುವ ಮುಂಚಿತವಾಗಿಯೇ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.
ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ, ಪ್ರತಿ ತಾಲೂಕಿಗೆ 50ಲಕ್ಷ ರೂ.ನ ಕುಡಿಯುವ ನೀರಿನ ಯೋಜನೆ ಅನುಮೋದನೆ ನೀಡಬೇಕಿದೆ. ಹಿಂದಿನ ಸರ್ಕಾರದ ಅವಧಿಯ ಯೋಜನೆಗಳ ಜಾರಿಗೊಂಡಿಲ್ಲ. ಸರ್ಕಾರ ದಿವಾಳಿ ಮಾಡಿದೆ ಎಂದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಟಾಸ್ಕ ಪೋರ್ಸಸಮಿತಿಯಲ್ಲಿ ಟ್ಯಾಂಕರ್ ನೀರು ಪೂರೈಕೆ, ಕೊಳವೆಭಾಡಿಗೆ, ಪೈಪಲೈನ್ ರಿಪೇರಿ, ಹೈಡ್ರೋ ಫಾಕ್ಚರೀಂಗ್‌ಗೆ ಅವಕಾಶವಿದೆ. ಹೊಸ ಕೊಳವೆಭಾವಿ ಕೊರೆಯಲು ಅವಕಾಶವಿಲ್ಲ. ಆರ್‌ಡಿಪಿಆರ್‌ದಿಂದ ಹೊಸ ಕೊಳವೆ ಬಾವಿ ಕೊರೆಯಿಸಬಹುದು ಎಂದರು.
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕೆಕೆಆರ್‌ಡಿಬಿಯಿಂದ ಪ್ರತಿ ತಾಲೂಕಿಗೆ ಒಂದು ಕುಡಿಯುವ ನೀರಿನ ಟ್ಯಾಂಕರ್ ಖರೀದಿಸಲು ಉದ್ದೇಶಿಸಲಾಗಿದೆ. ಅದುಜಾರಿಗೊಂಡಿಲ್ಲ. ಬೇಸಿಗೆಯಲ್ಲಿ ಹೊಸ ಕೊಳವೆ ಬಾವಿ ಕೊರೆದರೆ ಉಪಯೋಗವಿಲ್ಲ. ಅಲ್ಲದೇ ಟ್ಯಾಂಕರ್ ಪೂರೈಕೆ ಹಾಗೂ ಖಾಸಗಿ ಕೊಳವೆ ಬಾವಿ ಮಾಲೀಕರಿಗೆ ಸಕಾಲದಲ್ಲಿ ಬಿಲ್ ಪಾವತಿಯಾಗುತ್ತಿಲ್ಲ. ಯಾರು ಮುಂದೆಯೂ ಬರುತ್ತಿಲ್ಲ. ಬಿಲ್ ಪಾವತಿಗೆ ಮೊದಲ ಕ್ರಮವಹಿಸಬೇಕೆಂದರು. ಅಲ್ಲದೇ ಹಿಂದಿನ ಅವಧಿಯಲ್ಲಿ ಅಕ್ರಮವಾಗಿದ್ದರೆ ತನಿಖೆ ನಡೆಸಲಿ.
ಹಿಂದೆ ಮಸ್ಕಿ ಶಾಸಕರಾಗಿದ್ದ ಬಸನಗೌಡ ತುರ್ವಿಹಾಳರೇ ಟಾಸ್ಕಪೋರ್ಸ ಅಧ್ಯಕ್ಷರಾಗಿದ್ದರು, ಅಧಿಕಾರಿಗಳು ಹಿಂದಿನ ಅವಧಿಯಲ್ಲಿ ಇದ್ದವರೇ ಇದ್ದಾರೆ ತನಿಖೆ ನಡೆಸಿ ಎಂದು ತುರ್ವಿಹಾಳ ಆರೋಪಕ್ಕೆ ಉತ್ತರಿಸಿದರು.
ಕಂದಾಯ ಸಚಿವ ಕೃಷ್ಣ ಬೈರೆಗೌಡ, ಕುಡಿಯುವ ನೀರಿನ ಸಮಸ್ಯೆಯಾತ್ಮಕ ಹಳ್ಳಿಗಳಿಗೆ 24 ಗಂಟೆಯಲ್ಲಿ ನೀರು ಪೂರೈಕೆ ವ್ಯವಸ್ಥೆ ಮಾಡಿ ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ಶಾಸಕರುಗಳಾದ ಹಂಪಯ್ಯನಾಯಕ ಉಪಸ್ಥಿತರಿದ್ದರು. ಕಂದಾಯ ಆಯುಕ್ತ ಸುನೀಲ್‌ಕುಮಾರ್, ಪ್ರಾದೇಶಿಕ ಆಯಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಉಪಸ್ಥಿತರಿದ್ದರು. ಸಹಾಯಕ ಆಯುಕ್ತರು, ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.