ವಿಶ್ವದ ಪ್ರಬಲ ಕರೆನ್ಸಿಯಲ್ಲಿ ಅಮೆರಿಕದ ಡಾಲರ್‌ಗೆ 10ನೇ ಸ್ಥಾನ; ಭಾರತದ ರೂಪಾಯಿಗೆ ಎಷ್ಟನೇ ಸ್ಥಾನ?

Date:

Advertisements

ಕರೆನ್ಸಿಯು ಜಾಗತಿಕ ಮಾರುಕಟ್ಟೆಯ ಜೀವನಾಡಿ ಎಂದು ಪರಿಗಣಿಸಲಾಗುತ್ತದೆ ಹಾಗೂ ದೇಶದ ಆರ್ಥಿಕ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಕರೆನ್ಸಿ ಶಕ್ತಿಯು ದೇಶದ ಸ್ಥಿರತೆಗೆ ಹಾಗೂ ದೃಢವಾದ ಆರ್ಥಿಕ ಸುಸ್ಥಿತಿಗೆ ಸಾಕ್ಷಿಯಾಗಿದೆ. ಕರೆನ್ಸಿಯು ಏರಿಕೆ ಕಂಡಂತೆ ಆರ್ಥಿಕತೆಗೆ ಆತ್ಮವಿಶ್ವಾಸ ತುಂಬುವುದು, ಬಂಡವಾಳಗಳನ್ನು ಆಕರ್ಷಿಸುವುದು ಹಾಗೂ ಅಂತಾರಾಷ್ಟ್ರೀಯ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಪ್ರಬಲ ಕರೆನ್ಸಿಯು ದೇಶಗಳ ಆರ್ಥಿಕ ಸವಾಲುಗಳನ್ನು ಎದುರಿಸಲು ಅಧಿಕಾರ ನೀಡುತ್ತದೆ ಹಾಗೂ ಜಾಗತಿಕ ಆರ್ಥಿಕ ಅಂತರ್ಸಂಪರ್ಕಕ್ಕೆ ತನ್ನ ಸ್ಥಾನವನ್ನು ಬಲಪಡಿಸುತ್ತದೆ. ಅಮೆರಿಕವು ವಿಶ್ವದ 180 ಕರೆನ್ಸಿಗಳನ್ನು ಕಾನೂನುಬದ್ಧವಾಗಿರುವುದಾಗಿ ಅಧಿಕೃತವಾಗಿ ಗುರುತಿಸಿದೆ. ಇದರಲ್ಲಿ ಕೆಲವು ಕರೆನ್ಸಿಯು ಜನಪ್ರಿಯತೆ ಹೊಂದಿದ್ದು, ವಿಶ್ವದಾದ್ಯಂತ ಉಪಯೋಗಿಸಲಾಗುತ್ತದೆ.

ಕರೆನ್ಸಿ ಸಾಮರ್ಥ್ಯವು ಪೂರೈಕೆ ಮತ್ತು ಬೇಡಿಕೆಯ ಸೂಕ್ಷ್ಮ ಓಲಾಟವಾಗಿದ್ದು, ಬಡ್ಡಿ ದರಗಳು ಮತ್ತು ಹಣದುಬ್ಬರದಿಂದ ಭೌಗೋಳಿಕ ರಾಜಕೀಯ ಸ್ಥಿರತೆಯವರೆಗಿನ ಅಂಶಗಳಿಂದ ಪ್ರಭಾವಿತವಾಗಿರುತ್ತದೆ.

Advertisements

ದೃಢವಾದ ಕರೆನ್ಸಿಯು ದೇಶದ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ವಿಶ್ವದ ವೇದಿಕೆಯಲ್ಲಿ ಅದರ ವಿಶ್ವಾಸಾರ್ಹತೆಯನ್ನು ಒತ್ತಿ ಹೇಳುತ್ತದೆ. ಹೂಡಿಕೆದಾರರು ದೃಢವಾಗಿ ನಿಂತಿರುವ ಕರೆನ್ಸಿಗಳಲ್ಲಿ ಆಶ್ರಯ ಪಡೆಯುತ್ತಾರೆ, ಇದು ವಿಶ್ವಾದ್ಯಂತ ಹಣಕಾಸು ಮಾರುಕಟ್ಟೆಗಳನ್ನು ರೂಪಿಸುವ ಏರಿಳಿತದ ಪರಿಣಾಮವನ್ನು ಸೃಷ್ಟಿಸುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಕಿ ಖಟ್ಲೆಗಳ ಭಾರದಡಿ ಕುಸಿದಿರುವ ನ್ಯಾಯಾಂಗ ಮತ್ತು ಸಿನಿಕ ಸಾರ್ವಜನಿಕರು

ಫೋರ್ಬ್ಸ್‌ ದೇಶಗಳ ಪ್ರಾಮುಖ್ಯತೆಗೆ ಕಾರಣವಾಗುವ ಅಂಶಗಳ ಜೊತೆಗೆ ವಿಶ್ವದ ಪ್ರಬಲ 10 ಕರೆನ್ಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮೊದಲ ಪಟ್ಟಿಯಲ್ಲಿ ಕುವೈತ್ ದಿನಾರ್ ಸ್ಥಾನ ಪಡೆದಿದೆ ಎಂದು ಫೋರ್ಬ್ಸ್ ಹೇಳಿದೆ. ಒಂದು ಕುವೈತ್ ದಿನಾರ್ ಭಾರತೀಯ ರೂಪಾಯಿಯ 270.23ಗೆ ಸಮ. ಮುಂದಿನದು ಬಹ್ರೇನ್ ದಿನಾರ್, ಇದರ ಮೌಲ್ಯ 220.4 ರೂಪಾಯಿ.

ಮೂರನೇ ಸ್ಥಾನದಲ್ಲಿ ಒಮಾನಿ ರಿಯಾಲ್ (ರೂ. 215.84), 4ನೇ ಸ್ಥಾನ ಜೋರ್ಡಾನ್ ದಿನಾರ್ (ರೂ. 117.10), ಐದನೇ ಸ್ಥಾನ ಜಿಬ್ರಾಲ್ಟರ್ ಪೌಂಡ್ (ರೂ. 105.52), ಆರನೇ ಸ್ಥಾನ ಬ್ರಿಟಿಷ್ ಪೌಂಡ್ (ರೂ. 105.547), ಏಳನೇ ಸ್ಥಾನ ಕೇಯ್‌ಮಂಡ್ ಐಸ್‌ಲ್ಯಾಂಡ್ ಡಾಲರ್(ರೂ. 99.76), ಸ್ವಿಸ್ ಫ್ರಾಂಕ್ (ರೂ. 97.54) ಮತ್ತು ಯುರೋ (ರೂ. 90.80) ಎಂಟು ಮತ್ತು 9ನೇ ಸ್ಥಾನ ಪಡೆದಿದೆ.

ಹತ್ತರ ಪಟ್ಟಿಯ ಕೊನೆಯ ಸ್ಥಾನದಲ್ಲಿ ಅಮೆರಿಕದ ಡಾಲರ್ ಸ್ಥಾನ ಪಡೆದಿದೆ. ಇದರ ಮೌಲ್ಯ ಒಂದು ಡಾಲರ್‌ಗೆ ರೂ. 83.10 ಇದೆ. ಅಮೆರಿಕ ಡಾಲರ್ ಜಾಗತಿಕವಾಗಿ ಹೆಚ್ಚು ಪ್ರಸಾರವಾಗುವ ಕರೆನ್ಸಿಯಾಗಿದೆ. ಅಲ್ಲದೆ ಪ್ರಾಥಮಿಕ ಮೀಸಲು ಕರೆನ್ಸಿಯಾಗಿ ಸ್ಥಾನವನ್ನು ಹೊಂದಿದೆ ಎಂದು ಫೋರ್ಬ್ಸ್ ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಬುಧವಾರದ ವಿನಿಮಯ ದರದ ಪ್ರಕಾರ, ಭಾರತದ ರೂಪಾಯಿ 15 ನೇ ಸ್ಥಾನದಲ್ಲಿದೆ. ಪ್ರತಿ ಅಮೆರಿಕ ಡಾಲರ್‌ಗೆ ಭಾರತೀಯ ರೂಪಾಯಿ 82.9 ಮೌಲ್ಯವನ್ನು ಹೊಂದಿದೆ.

ಮೊದಲ ಸ್ಥಾನವನ್ನು ಹೊಂದಿರುವ ಕುವೈತ್ ದಿನಾರ್, 1960 ರಲ್ಲಿ ಪರಿಚಯಿಸಲ್ಪಟ್ಟ ಸಮಯದಿಂದ ಸತತವಾಗಿ ವಿಶ್ವದ ಅತ್ಯಂತ ಬೆಲೆಬಾಳುವ ಕರೆನ್ಸಿಯಾಗಿ ಸ್ಥಾನ ಪಡೆದಿದೆ. ಕುವೈತ್‌ನ ಆರ್ಥಿಕ ಸ್ಥಿರತೆ, ಅದರ ತೈಲ ನಿಕ್ಷೇಪಗಳು ಹಾಗೂ ತೆರಿಗೆ ವ್ಯವಸ್ಥೆಯು ಕರೆನ್ಸಿಯ ಯಶಸ್ಸಿನ ಹಿಂದಿನ ಕಾರಣವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X