ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಮಾನ ಮನಸ್ಕರ ತಂಡದ ಸುಮಿತಾ ಹಿರೇಮಠ ಅವರು ಆಯ್ಕೆಯಾಗಿದ್ದಾರೆ. ಸಂಘ ಆರಂಭವಾಗಿ ಎರಡು ದಶಕಗಳ ನಂತರ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿರುವ ಸಂಘದ ನಿರ್ದೇಶಕ ಮಂಡಳಿಗೆ 6 ಮಹಿಳಾ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಆಸಿಫ್ ಸವಣೂರ್ ಅವರು ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ ನಡೆಯುವ ವೇಳೆ ಸಂಘದ ನಿರ್ದೇಶಕರಾದ ಎಂ ಆರ್ ಕಬ್ಬೇರ್, ಶಕುಂತಲಾ ಅರಮನಿ, ಶ್ರೀದೇವಿ ದ್ಯಾವನಕೊಂಡ, ಪ್ರಭಾವತಿ ನಿಂಬನಗೌಡ್ರ, ಮಂಜುಳಾ ಹಾರಿಕೊಪ್ಪ, ಜಬೀನಾ ಹುನಗುಂದ, ಎಚ್ ಎಂ ದೊಡಮನಿ ,ನೀಲಪ್ಪ ರಾ ಕಟ್ಟಿಮನಿ, ಡಾ. ಮಹೇಶ ಬಾಳಗಿ, ಪ್ರಕಾಶ ರಾಠೋಡ್,ಇರ್ಫಾನ್ ಕವಲಗೇರಿ, ಪಿ ಎಫ್ ಗುಡೇನಕಟ್ಟಿಯವರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಸಲೀಮ್ ಮುಲ್ಲಾ ಅವರು ಕಾರ್ಯನಿರ್ವಹಿಸಿದರು.