ಕೇಂದ್ರ ಥೈಲ್ಯಾಂಡ್‌ನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟವುಂಟಾಗಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಸುಪಾನ್ ಬುರಿ ಪ್ರಾಂತ್ಯದ ಸುಯಾನ್ ತಯೇಂಗ್‌ನ ಉಪ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬೆಂಕಿಯ ಜ್ವಾಲೆ ಎಲ್ಲಡೆ ಆವರಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಮಾಧ್ಯಮಗಳ ಭಾವಚಿತ್ರಗಳು ಹಾಗೂ ದೃಶ್ಯಗಳು ದಟ್ಟವಾದ ಹೊಗೆಯನ್ನು ಹೊರಸೂಸುವುದನ್ನು ತೋರಿಸಿವೆ ಹಾಗೂ ಸ್ಪೋಟದ ಅವಶೇಷಗಳು ಪಕ್ಕದ ಗದ್ದೆಗಳಲ್ಲಿ ಚಿಲ್ಲಾಪಿಲ್ಲಿಯಾಗಿ ಬಿದ್ದಿವೆ.
ವಿಪತ್ತು ತಡೆಗಟ್ಟುವಿಕೆ ಮತ್ತು ನಿವಾರಣಾ ಇಲಾಖೆ ಪ್ರಕಾರ, ಈ ಸ್ಫೋಟವು ವಸತಿ ಪ್ರದೇಶದಲ್ಲಿ ಸಂಭವಿಸಿದೆ. ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 100 ಮನೆಗಳಿಗೆ ಹಾನಿಯಾಗಿದೆ. ಗೋದಾಮಿನಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಯಿಂದ ಸ್ಫೋಟ ಸಂಭವಿಸಿದ್ದು, ಲೋಹದ ವೆಲ್ಡಿಂಗ್‌ನಿಂದ ಬಂದ ಕಿಡಿಗಳು ಒಳಗೆ ಸಂಗ್ರಹವಾಗಿರುವ ಪಟಾಕಿಗೆ ತಗುಲಿ ಸ್ಫೋಟಗೊಳ್ಳಲು ಕಾರಣವಾಗಿವೆ ಎಂದು ನಾರಾಠಿವತ್ ರಾಜ್ಯಪಾಲರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಂಧಿ ಪ್ರಣೀತ ರಾಮನೇ ಬೇರೆ; ಮೋದಿ ರಾಮನೇ ಬೇರೆ
ಕಳೆದ ವರ್ಷದ ಜುಲೈನಲ್ಲಿ ಥೈಲ್ಯಾಂಡಿನ ದಕ್ಷಿಣ ಭಾಗದಲ್ಲಿ ಇದೇ ರೀತಿಯ ಸ್ಪೋಟವುಂಟಾಗಿ 10 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಫೆಬ್ರವರಿಯಲ್ಲಿ ಚೀನೀ ಹೊಸ ವರ್ಷಕ್ಕೆ ಒಂದು ತಿಂಗಳ ಮೊದಲು ಪಟಾಕಿ ಆಗಮಿಸಿತ್ತು. ಆಗ ಪಟಾಕಿಗಳಿಗೆ ಬೇಡಿಕೆ ಹೆಚ್ಚಾಗಿತ್ತು.