ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದ ದೇವನಹಳ್ಳಿಗೆ ಜನವರಿ 19ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನೆಲೆ, ನಗರ ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಮಾಡಿ, ಪರ್ಯಾಯ ಮಾರ್ಗ ಸೂಚಿಸಿದ್ದಾರೆ.
ಜನವರಿ 19ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಜ.19ರ ಮಧ್ಯಾಹ್ನ 2:10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಹೀಗಾಗಿ, ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಲ ಕಡೆ ಸಂಚಾರ ನಿಷೇಧಿಸಲಾಗಿದ್ದು, ಹೆಣ್ಣೂರು-ಬಾಗಲೂರು ರಸ್ತೆ (ಹೊಸ ವಿಮಾನ ನಿಲ್ದಾಣ ರಸ್ತೆ) ಮತ್ತು ಕೆಐಎಗೆ ಹೋಗುವ ಇತರ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ.
ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋದಿ ಅವರು ಸಂಚರಿಸಲಿದ್ದು, ಅವರು ಸಾಗುವ ಮಾರ್ಗಗಳಲ್ಲಿ ಎಲ್ಲ ಮಾದರಿಯ ವಾಹನಗಳು, ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಿಕೊಂಡು ಸಂಚಾರ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಮಾರ್ಗ ಬದಲಾವಣೆ
ಜನವರಿ 19ರ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
- ಗೊಲ್ಲಹಳ್ಳಿ ಗೇಟ್ – ಹುಣಚೂರು ಗ್ರಾಮ (ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾ)
- ಡಾಬಾ ಗೇಟ್ (ಎನ್.ಹೆಚ್.648) ನಿಂದ ಏರ್‌ಪೋರ್ಟ್ ಕಡೆಗೆ
- ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಿಂದ ಏರ್‌ಪೋರ್ಟ್ ಕಡೆಗೆ
- ಚಿಕ್ಕಜಾಲ ಕೋಟೆ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣ
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಸರ್ಜಾಪುರ – ಹೆಬ್ಬಾಳ ಮಾರ್ಗಕ್ಕೆ ಡಿಪಿಆರ್ ಸಿದ್ಧ
ಮಾರ್ಗ ಬದಲಾವಣೆ
- ವೈಟ್ ಫೀಲ್ಡ್, ಕೆ.ಆರ್.ಪುರಂ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗೊಲ್ಲಹಳ್ಳಿ ಗೇಟ್ ಮಾರ್ಗವಾಗಿ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು
ಗೊಲ್ಲಹಳ್ಳಿ ಗೇಟ್-ಬಲತಿರುವು-ಜೊನ್ನಹಳ್ಳಿ ಗೇಟ್-ಬೆಟ್ಟಿಕೋಟೆ-ಏರ್‌ಲೈನ್ ಡಾಬಾ-ಎಡತಿರುವು-ದೇವನಹಳ್ಳಿ ಬಸ್ ನಿಲ್ದಾಣ-ಎಡ ತಿರುವು-ದೇವನಹಳ್ಳಿ ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ-ದೇವನಹಳ್ಳಿ ಟೋಲ್-ಎಡ ತಿರುವು-ಕೆಂಪೇಗೌಡ ವಿಮಾನ ನಿಲ್ದಾಣ.
- ರಾಷ್ಟ್ರೀಯ ಹೆದ್ದಾರಿ-648 ಏರ್‌ಲೈನ್ ಡಾಬಾ ಜಂಕ್ಷನ್ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಡೆಗೆ
“Traffic Advisory”
“ಸಂಚಾರ ಸಲಹೆ” pic.twitter.com/HLW5Z246b8— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 17, 2024
ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾ ಸಂಚರಿಸುವ ವಾಹನ ಸಂಚರಿಸಬೇಕಾದ ಮಾರ್ಗಗಳು
ಏರ್‌ಲೈನ್ಸ್ ಡಾಬಾ-ದೇವನಹಳ್ಳಿ ಬಸ್ ನಿಲ್ದಾಣ-ಎಡತಿರುವು-ದೇವನಹಳ್ಳಿ ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ- ದೇವನಹಳ್ಳಿ ಟೋಲ್-ಎಡ ತಿರುವು- ಕೆಂಪೇಗೌಡ ವಿಮಾನ ನಿಲ್ದಾಣ.
- ಹೆಣ್ಣೂರು-ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ವಾಹನಗಳು ಸಂಚರಿಸಬೇಕಾದ ಮಾರ್ಗಗಳು
ಬಾಗಲೂರು ಗುಂಡಪ್ಪ ಸರ್ಕಲ್-ಎಡ ತಿರುವು-ರೇವಾ ಕಾಲೇಜು ಜಂಕ್ಷನ್-ಬಾಗಲೂರು ಕ್ರಾಸ್-ಬಲ ತಿರುವು-ಚಿಕ್ಕಜಾಲ-ಸಾದಹಳ್ಳಿ ಟೋಲ್-ಏರ್ ಪೋರ್ಟ್ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ
- ಚಿಕ್ಕಜಾಲ ಕೋಟೆ ಕ್ರಾಸ್ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ವಾಹನಗಳು ಸಂಚರಿಸಬೇಕಾದ ಮಾರ್ಗಗಳು.
ಚಿಕ್ಕಜಾಲ-ಸಾದಹಳ್ಳಿ ಟೋಲ್ – ಏರ್ ಪೋರ್ಟ್ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ
- ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ವಾಹನಗಳು ಸಂಚರಿಸಬೇಕಾದ ಮಾರ್ಗಗಳು.
ಬಾಗಲೂರು ಕಾಲೋನಿ ಬಲ ತಿರುವು – ರಜಾಕ್ ಪಾಳ್ಯ – ಎಂ.ವಿ.ಐ.ಟಿ ಕಾಲೇಜು – ಚಿಕ್ಕಜಾಲ ಬಲ ತಿರುವು – ಬಿಬಿ ರಸ್ತೆ – ಸಾದಹಳ್ಳಿ ಟೋಲ್- ಏರ್ ಪೋರ್ಟ್ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಬೆಂಗಳೂರು-ಬಳ್ಳಾರಿ ಮಾರ್ಗವನ್ನು ಬಳಸಲು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.