ಗದಗ | ಸ್ವಂತ ಮಗನನ್ನು ಮೂರು ಲಕ್ಷ ರೂ.ಗೆ ಮಾರಿದ ತಂದೆ; ಕಾರ್ಮಿಕ ಇಲಾಖೆಯಿಂದ ಬಾಲಕನ ರಕ್ಷಣೆ

Date:

Advertisements

ಗದಗ ಜಿಲ್ಲೆಯ ತಂದೆಯೊಬ್ಬ ತನ್ನ ಸ್ವಂತ ಮಗನನ್ನು ಮೂರು ಲಕ್ಷ ರೂ.ಗೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಮಹಿಳೆಗೆ ಮಾರಾಟಮಾಡಿದ್ದಾರೆ. ಮಾರಾಟವಾಗಿದ್ದ ಒಂಬತ್ತು ವರ್ಷದ ಬಾಲಕನ್ನು ಕೆ.ಆ‌ರ್.ನಗರ ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕರು ಪತ್ತೆ ಮಾಡಿ ರಕ್ಷಿಸಿದ್ದಾರೆ.

ಸಾಲಿಗ್ರಾಮ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಬಾಲಕನನ್ನು ರಕ್ಷಿಸಲಾಗಿದ್ದು, ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಒಂಬತ್ತು ವರ್ಷದ ಬಸವನಗೌಡ ಶರಣಪ್ಪಗೌಡ ಮಾರಾಟವಾಗಿದ್ದ ಬಾಲಕನಾಗಿದ್ದು, ಈತನ ತಂದೆ ಶರಣಪ್ಪಗೌಡ ಮೂರು ಲಕ್ಷಕ್ಕೆ ತನ್ನ ಮಗನನ್ನು ಮಾರಾಟ ಮಾಡಿದ್ದ.

ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ರುಕ್ಕಿಣಿ ಮತ್ತು ಮಹದೇವಮ್ಮ ಎಂಬ ಮಹಿಳೆಯರು ಕಳೆದ ಎರಡು ವರ್ಷಗಳ ಹಿಂದೆ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಶರಣಪ್ಪಗೌಡ ಎಂಬವರ ಮಗನಾದ ಬಸವನಗೌಡ ಶರಣಪ್ಪಗೌಡನನ್ನು ಮೂರು ಲಕ್ಷ ಹಣ ಕೊಟ್ಟು ಖರೀದಿ ಮಾಡಿದ್ದಾರೆ.

Advertisements

ಸವಡಿ ಗ್ರಾಮದಿಂದ ಬೆಟ್ಟಹಳ್ಳಿ ಗ್ರಾಮಕ್ಕೆ ಕರೆತಂದು ಕುರಿ, ಮೇಕೆ ಮೇಯಿಸಲು ಕಳುಹಿಸುತ್ತಿದ್ದರು. ಮನೆ ಕೆಲಸವನ್ನು ಕೂಡ ಬಾಲಕನಿಂದ ಮಾಡಿಸುತ್ತಿದ್ದರು. ಈ ಸಂಗತಿ ಗ್ರಾಮಸ್ಥರಿಗೆ ತಿಳಿದು, ಯಾರೇ ಪ್ರಶ್ನೆ ಮಾಡಿದರು ರುಕ್ಕಿಣಿ ಹಾಗೂ ಮಹದೇವಮ್ಮ, ಸಂಬಂಧಿಕರ ಹುಡುಗ ಎಂದೆಲ್ಲ ಸಬೂಬು ಹೇಳುತ್ತಿದ್ದರು. ಕೊನೆಗೂ ಗ್ರಾಮಸ್ಥರಿಗೆ ಅನುಮಾನ ಬಂದು ಮೈಸೂರಿನ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಈ ಕುರಿತು ದೂರು ನೀಡಿದ್ದರು.

ತಕ್ಷಣವೇ ಕಾರ್ಯ ಪ್ರವೃತ್ತರಾದ ಮಕ್ಕಳ ಸಹಾಯವಾಣಿ ಕೇಂದ್ರದವರು ಮೈಸೂರಿನ ಪಟ್ಟಣದಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತ ನಾಜೀಯ ಸುಲ್ತಾನ್ ಅವರಿಗೆ ಕರೆ ಮಾಡಿ ಬಾಲಕ ಮಾರಾಟ ಆಗಿರುವ ಹಳ್ಳಿಯೊಂದರಲ್ಲಿ ಜೀತ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿಸಿದ್ದರು.

ತಕ್ಷಣವೇ ಸಹಾಯಕ ಕಾರ್ಮೀಕ ಆಯುಕ್ತ ನಾಜೀಯ ಸುಲ್ತಾನ್ ಅವರು ತಮ್ಮ ಮಾರ್ಗದರ್ಶನದ ಮೂಲಕ ಕೆ.ಆ‌ರ್.ನಗರ ತಾಲೂಕು ತಹಸೀಲ್ದಾರ್ ಸಿ. ಎಸ್.ಪೂರ್ಣಿಮಾ ಹಾಗೂ ಪಟ್ಟಣದ ಕಾರ್ಮಿಕ ಇಲಾಖೆಯ ನಿರೀಕ್ಷಕ ಗೋವಿಂದರಾಜು ಅವರಿಗೆ ಮಾರಾಟವಾಗಿರುವ ಬಾಲಕನ ವಿಳಾಸ, ದೂರು ನೀಡಿ ಸೂಕ್ತ ಕ್ರಮಗಳನ್ನು ಕೈಗೊಂಡು ಬಾಲಕನನ್ನು ರಕ್ಷಿಸುವಂತೆ ಸೂಚಿಸಿದ್ದರು.

ಕಾರ್ಮಿಕ ಇಲಾಖೆಯ ನಿರೀಕ್ಷಕ ತಮ್ಮ ಸಿಬ್ಬಂದಿಯೊಂದಿಗೆ ಬೆಟ್ಟಹಳ್ಳಿ ಗ್ರಾಮಕ್ಕೆ ಆಗಮಿಸಿ ದೂರು ನೀಡಿದ್ದ ಗ್ರಾಮಸ್ಥರ ಜೊತೆ ಚರ್ಚಿಸಿ, ಬಾಲಕ ವಾಸವಿದ್ದ ಮನೆಯ ರುಕ್ಕಿಣಿ ಹಾಗೂ ಮಹದೇವಮ್ಮ ಅವರ ವಿರುದ್ಧ ದೂರು ಪಡೆದುಕೊಂಡು ಬಾಲಕ ಬಸವನಗೌಡ ಶರಣಪ್ಪನನ್ನು ರಕ್ಷಿಸಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಗೆ ರುಕ್ಕಿಣಿ ಹಾಗೂ ಮಹದೇವಮ್ಮ ಅವರ ವಿರುದ್ಧ ದೂರು ದಾಖಲಿಸಿ ಸದ್ಯಕ್ಕೆ ಬಾಲಕ ಬಸವನಗೌಡ ಶರಣಪ್ಪನನ್ನು ಮೈಸೂರಿನ ಬಾಲ ಮಂದಿರಕ್ಕೆ ಬಿಟ್ಟಿದ್ದಾರೆ.

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ರಾಜ್ಯದಲ್ಲಿ ದಿನೆ ದಿನೇ ಮಕ್ಕಳ ಮಾರಾಟ ಜಾಲ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಹೆಚ್ಚಿನ ರೀತಿಯಲ್ಲಿ ಕ್ರಮವಹಿಸಿ ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ ಎನ್ನುತ್ತಿದ್ದಾರೆ ನಾಗರಿಕರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X