ಕೂಸಿನ ಮನೆ ಕಾರ್ಯಕ್ರಮವು ಮನರೇಗಾ ಯೋಜನೆಯ ಒಂದು ಭಾಗವಾಗಿದೆ. ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದ ಮಕ್ಕಳ ಲಾಲನೆ-ಪಾಲನೆಗೆ ರಾಜ್ಯ ಸರ್ಕಾರದ ಕೂಸಿನ ಮನೆ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಗ್ರಾಮೀಣ ಮಕ್ಕಳ ಲಾಲನೆ, ಪಾಲನೆ ಮಾಡುವ ಮೂಲಕ ಆ ಮಕ್ಕಳಿಗೆ ತಾಯಿಯಾಗಿ ಕೆಲಸ ಮಾಡೋ ಸೌಭಾಗ್ಯ ಅರೈಕೆದಾರರಿಗೆ ದೊರೆತಿದೆ ಎಂದು ರೋಣ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಎ.ಎನ್ ತಿಳಿಸಿದ್ದಾರೆ.
ಗದಗ ಜಿಲ್ಲೆಯ ರೋಣದಲ್ಲಿ ತಾಲೂಕು ಪಂಚಾಯಇ ಆಯೋಜಿಸಿದ್ದ ಕೂಸಿನ ಮನೆ ಆರೈಕೆದಾರರಿಗೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. “ಕೂಸಿನ ಮನೆ ಯೋಜನೆಯು ಸಹ ಮಹಿಳಾ ಸಭಲೀಕರಣ ಮಾಡುವ ದೃಷ್ಟಿಯಿಂದ ಆರಂಭವಾಗಿದೆ. ಗ್ರಾಮಗಳ ಬಂಧುಗಳು, ನೆರೆಹೊರೆಯವರು, ಗ್ರಾಮಸ್ಥರು ಗ್ರಾಮದಲ್ಲಿ ದುಡಿಯಲಿಕ್ಕೆ ಹೋಗುತ್ತಾರೆ ಆ ಸಂದರ್ಭದಲ್ಲಿ ಆರೈಕೆದಾರರು ಅವರ ಮಕ್ಕಳನ್ನು ಆರೈಕೆ ಮಾಡುವ ಕೆಲಸ ಮಾಡಬೇಕಾಗುತ್ತದೆ. ಆರೈಕೆದಾರರಿಗೂ ಮನರೇಗಾ ಯೋಜನೆಯಡಿ ವೇತನ ನೀಡಲಾಗುತ್ತದೆ” ಎಂದು ಹೇಳಿದರು.
“ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಕೊಟ್ಟು ಆರೈಕೆ ಮಾಡಬೇಕು. ಇದರಿಂದಾಗಿ ಮಕ್ಕಳ ಪೌಷ್ಟಿಕಾಂಶದ ಕೊರತೆಯೂ ನೀಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಮಹಿಳೆಯರ ಶ್ರಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮ ಜಾರಿಗೊಳಿಸಿದೆ. ಪ್ರಾರಂಭದಲ್ಲಿ ತಾಲೂಕಿನಲ್ಲಿ 10 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಆರಂಭಿಸಲಾಗಿದೆ” ಎಂದರು.
ಜಿಲ್ಲಾ ಐಇಸಿ ಸಂಯೋಜಕರಾದ ವೀರಭದ್ರಪ್ಪ ಸಜ್ಜನ ಮಾತನಾಡಿ, “ಗದಗ ಜಿಲ್ಲೆಯಲ್ಲಿ ಒಟ್ಟು 109 ಕೂಸಿನ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅದರಂತೆ ಮೊದಲ ಹಂತದಲ್ಲಿ 29 ಕೂಸಿನ ಮನೆಗಳನ್ನು ಜಿಲ್ಲೆಯಾದ್ಯಂತ ಆರಂಭಿಸಲಾಗುತ್ತಿದ್ದು, ರೋಣ ತಾಲೂಕಿನಲ್ಲಿ ಒಟ್ಟು 10 ಕೂಸಿನ ಮನೆಗಳನ್ನು ಅರಂಭಿಸಲಾಗುತ್ತಿದೆ” ಎಂದರು.
ಶಿಬಿರದಲ್ಲಿ ರಿಯಾಜ ಖತೀಬ್ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ಶಿವಯೋಗಿ ರಿತ್ತಿ ಸಹಾಯಕ ನಿರ್ದೇಶಕರು (ಪಂಚಾಯತ ರಾಜ್), ಶ್ರೀಮತಿ ಮಂಜುಳಾ ಗುರಾಣಿ ಹಿರಿಯ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ, , ಅಬ್ಬಿಗೇರಿ, ಹೊಸಳ್ಳಿ, ಕುರಹಟ್ಟಿ, ಕೌಜಗೇರಿ, ಬೆಳವಣಿಕಿ, ಹೊಳೆ ಆಲೂರು, ಹೊಳೆಮಣ್ಣೂರು ಗ್ರಾಮ ಪಂಚಾಯತಿಯ ಕೂಸಿನ ಮನೆ ಆರೈಕೆದಾರರು ಭಾಗವಹಿದ್ದರು. ತಾಲೂಕು ಪಂಚಾಯತ ಐಇಸಿ ಕೊ ಅರ್ಡಿನೇಟರ್ ಮಂಜುನಾಥ ಅವರು ನಿರೂಪಿಸಿ ವಂದಿಸಿದರು….