ಕರ್ನಾಟಕದಲ್ಲಿ ಅಪಘಾತ ಪ್ರಮಾಣ ಹೆಚ್ಚಳವಾಗುತ್ತಿದ್ದು, ಜನವರಿ 24ರಂದು ಒಂದೇ ದಿನ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 39 ಜನರು ಸಾವನಪ್ಪಿದ್ದು, 152 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸಂಚಾರ ಹಾಗೂ ರಸ್ತೆ ಸುರಕ್ಷತೆ (ಟ್ರೇನಿಂಗ್) ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
“ಚಿತ್ರದುರ್ಗ-ಬಳ್ಳಾರಿ ರಸ್ತೆಯಲ್ಲಿ ನಿದ್ದೆಯಲ್ಲಿದ್ದ ಚಾಲಕನೊಬ್ಬ ಮೋರಿಗೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ ಘಟನೆ ಅತ್ಯಂತ ದುರಂತವಾಗಿದೆ. ರಾತ್ರಿ ವಾಹನ ಚಾಲನೆಯ ಅನುಭವವಿಲ್ಲದೆ, ರಾತ್ರಿಯ ಸಮಯದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ” ಎಂದು ಹೇಳಿದ್ದಾರೆ.
ಇದಕ್ಕೆ ಹಲವು ಜನರು ಕಮೆಂಟ್ ಮಾಡಿದ್ದು, “ತುಂಬಾ ಬೇಸರವಾಗಿದೆ ಸರ್. ಯಾವುದೇ ಮೋಡ್‌ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ನಾಗರಿಕರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಸಾರಿಗೆಯನ್ನು ಆಯ್ಕೆ ಮಾಡುವ ಮೊದಲು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂತಹ ಪರಿಸ್ಥಿತಿಯು ಆತಂಕಕಾರಿಯಾಗಿದೆ” ಎಂದು ಹೇಳಿದ್ದಾರೆ.
39 deaths & 152 injuries in road accidents in Karnataka yesterday
A drowsy driver hitting a culvert on Chitradurga – Ballary road killing 4 persons, is the most tragic one
“Avoid travelling with a driver during night, without night driving experience”#Roadsafety pic.twitter.com/VzrM2KfFCl
— alok kumar (@alokkumar6994) January 25, 2024
“ಕರ್ನಾಟಕದಲ್ಲಿ ರಸ್ತೆ ಅಪಘಾತಗಳು ಮುಖ್ಯವಾಗಿ ಅತಿಯಾದ ವೇಗ ಮತ್ತು ಕೆಟ್ಟ ವಿನ್ಯಾಸದ ರಸ್ತೆಗಳಿಂದಾಗಿ ಸಂಭವಿಸುತ್ತವೆ. ಹೆಚ್ಚಿನ ಹೆದ್ದಾರಿಗಳು ನಿರ್ದೇಶನಗಳಿಗಾಗಿ ಸರಿಯಾದ ಸೈನ್ ಬೋರ್ಡ್‌ಗಳನ್ನು ಹೊಂದಿಲ್ಲ. ಅನೇಕ ಸ್ಪೀಡ್ ಬ್ರೇಕರ್‌ಗಳು ಬಿಳಿ ಬಣ್ಣಗಳು ಅಥವಾ ಪ್ರತಿಫಲಕಗಳನ್ನು ಹೊಂದಿಲ್ಲ” ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಸ್ನಲ್ಲಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ನಿಗಾ ಇರಿಸಲು ಮುಂದಾದ ಬಿಎಂಟಿಸಿ ಅಧಿಕಾರಿಗಳು
“ಉಡುಪಿಯ ಕಟಪಾಡಿ NH-66 ನಲ್ಲಿ ದಯಮಾಡಿ ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ಕಟಪಾಡಿ ಜಂಕ್ಷನ್ ನಲ್ಲಿ ಪೊಲೀಸ್ ಸಿಬ್ಬಂದಿ ಇರುವಂತಾದರೆ ಜನರಿಗೆ ರೋಡ್ ಕ್ರಾಸ್ ಮಾಡಲು ತುಂಬಾ ಅನುಕೂಲ ಆಗುತಿತ್ತು. ಪೊಲೀಸರು ಕೆಲವೊಮ್ಮೆ 8 ಗಂಟೆಯ ವರೆಗೆ ಹಾಗೂ ಬೆಳಗ್ಗೆ 8.30ರ ನಂತರ ಮಾತ್ರ ಇರುತ್ತಾರೆ” ಎಂದು ನವೀನ್ ಎಂಬುವವರು ತಿಳಿಸಿದ್ದಾರೆ.