ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡು, ಗಡಿಪಾರು ಮಾಡಬೇಕೆಂದು ಮಾದಿಗ ದಂಡೋರ ಸಮಿತಿ ಆಗ್ರಹಿಸಿವೆ.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ಮಾತನಾಡಿ, “ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿ, ಸಮಾಜದ ಸ್ವಾಸ್ತ್ರ ಕೆಡಿಸಿ, ಅರಾಜಕತೆ ಸೃಷ್ಟಿಸುತ್ತಿರುವುದು ದುರದೃಷ್ಠಕರ. ಸಮಾಜದ ಸ್ವಾಸ್ಥ್ಯ ಕೆಡಿಸಿ ಅರಾಜಕತೆ ಸೃಷ್ಟಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಂಬೇಡ್ಕರ್ ಪ್ರತಿಮೆ ಅಪಮಾನ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ರಾಜ್ಯದ ಎಲ್ಲಡೆ ಇರುವ ಅಂಬೇಡ್ಕರ್ ಪ್ರತಿಮೆಗಳ ಬಳಿ ಸಿ.ಸಿ ಕ್ಯಾಮೇರಾ ಅಳವಡಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಲ್ಲು ಬೆಳಗೇರಾ, ಎಂ.ಶಂಕ್ರಪ್ಪ ರಾಮಸಮುದ್ರ, ವಿಲ್ಸನ್ ವಿ. ಘ, ಅನೀಲ್ ವಾಸನಕೇರಿ, ಚಂದ್ರಶೇಖರ ಮುಂಡ್ರಗಿ, ನಿಂಗಪ್ಪ ಹಾಲಗೇರಾ, ಅಶೋಕ ಮಾಧ್ವಾರ, ಪ್ರಭು ಉಪಸ್ಥಿತರಿದ್ದರು.