ಕ್ರೀಡೆಗೆ ಸಂಬಂಧಿಸಿದ ಆಘಾತದಿಂದ ಬಳಲುತ್ತಿದ್ದ ಯುವ ರೋಗಿಯ ಮೂಳೆಮುರಿತ ರೋಗವನ್ನು ಗುಣಪಡಿಸಲು ಮೈಸೂರಿ ನ ಖಾಸಗಿ ಆಸ್ಪತ್ರೆಯ ತಜ್ಞರು ಸಿಂಗಲ್ ಸ್ಟೇಜ್ ಆರ್ಥ್ರೋಸ್ಕೋಪಿಕ್ ಕಾರ್ಟಿಲೆಜ್(ಕೀಲು ಶಸ್ತ್ರಚಿಕಿತ್ಸೆ) ಇಂಪ್ಲಾಂಟೇಶನ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಮಹಿಳೆ(25)ಯೊಬ್ಬರು ಟೆನಿಸ್ ಆಡುವಾಗ ಬಿದ್ದು ಗಾಯಗೊಂಡಿದ್ದರು. ನೋವು ನಿವಾರಕ ಮಾತ್ರೆಗಳು ಮತ್ತು ವಿಶ್ರಾಂತಿಯ ರೂಪದಲ್ಲಿ ಚಿಕಿತ್ಸೆ ಪಡೆದರೂ, ಅವರ ರೋಗದಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ.
ನಾರಾಯಣ ಆಸ್ಪತ್ರೆಯ ಡಾ.ಉಮೇಶ ಚೌಡಯ್ಯ ಅವರು ಆರ್ಥ್ರೋಸ್ಕೋಪಿಕ್ ವಿಧಾನದ ಮೂಲಕ ಕೀಲು ಕಸಿ ಮಾಡಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ರೋಗವನ್ನು ಗುಣಪಡಿಸುವಳ್ಳಿ ಯಶಸ್ವಿಯಾಗಿದ್ದಾರೆ.
“ಆರ್ಥ್ರೋಸ್ಕೋಪಿ ತಂತ್ರಜ್ಞಾನದ ಪ್ರಗತಿಯೊಂದಿಗೆ ಹೆಚ್ಚಿನ ಮೊಣಕಾಲು ಮುರಿತದಂತಹ ಗಾಯಗಳನ್ನು ಈಗ ಪತ್ತೆಹಚ್ಚಿದ್ದು, ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಡಾ.ಚೌಡಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭದ್ರಾ ನಾಲೆಯ ಕೊನೆಯ ಭಾಗಕ್ಕೆ ದೊರೆಯದ ನೀರು; ರೈತರ ಆಕ್ರೋಶ
ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಡಾ. ಎಂ ಎನ್ ರವಿ ಮಾತನಾಡಿ, “ಕ್ರೀಡಾಪಟುಗಳು ಹೆಚ್ಚಾಗಿ ಅನುಭವಿಸುವ ಮೂಳೆ ಮುರಿತ ರೋಗಗಳಿಗೆ ಕೀಲು ಅಳವಡಿಕೆಯು ತುಲನಾತ್ಮಕವಾಗಿ ಸುರಕ್ಷಿತ ಮತ್ತು ಏಕ-ಹಂತದ ಕಾರ್ಯವಿಧಾನವಾಗಿದೆ” ಎಂದು ಹೇಳಿದರು.