ಭಾರತದಲ್ಲಿ ಕಳೆದ 7 ವರ್ಷಗಳಲ್ಲಿ ಉನ್ನತ ಶಿಕ್ಷಣ ವಿದ್ಯಾಭ್ಯಾಸಕ್ಕೆ ನೋಂದಣಿ ಮಾಡಿಕೊಂಡವರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು ಎಂದು ಕೇಂದ್ರ ಶಿಕ್ಷಣ ಇಲಾಖೆಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
2014 ರಿಂದ 2022ರವರೆಗೆ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿನಿಯರ ಸಂಖ್ಯೆ ಪುರುಷ ವಿದ್ಯಾರ್ಥಿಗಳಿಗಿಂತ ಶೇ.32 ರಷ್ಟು ಹೆಚ್ಚಾಗಿದೆ. 2014-15ರಲ್ಲಿ 1.57 ಕೋಟಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕೆ ನೋಂದಣಿ ಮಾಡಿಕೊಂಡಿದ್ದರೆ, 2021-22ರಲ್ಲಿ 2.07 ಕೋಟಿ ವಿದ್ಯಾರ್ಥಿನಿಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ 2021-22ರಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ 2020-21 ರಿಂದ 2021 -22 ರವರೆಗೆ 2.01 ಕೋಟಿಯಿಂದ 2.07 ಕೋಟಿಗೆ ಹೆಚ್ಚಾಗಿದೆ.
ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ)ದ ಪ್ರಕಾರ ಮಹಿಳಾ ದಾಖಲಾತಿ ಅನುಪಾತ ಸೂಚ್ಯಂಕ(ಜಿಇಆರ್) 2021-22ರಲ್ಲಿ ಶೇ.1.01 ಇದೆ. 2017-18ರಿಂದ ಸತತವಾಗಿ ಐದು ವರ್ಷಗಳಲ್ಲಿ ಪುರುಷರಿಗಿಂತ ಶೇ.1ಕ್ಕಿಂತ ಹೆಚ್ಚಾಗಿದೆ ಎಂದು ಸರ್ಕಾರವು ವರದಿಯಲ್ಲಿ ತಿಳಿಸಿದೆ, ಇದನ್ನು ಗುರುವಾರ ತಡರಾತ್ರಿ ಸಚಿವಾಲಯವು ಬಿಡುಗಡೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಳಿಸಿದ ಶಕ್ತಿಗಳೇ ಕರ್ಪೂರಿಯವರನ್ನು ಅಟ್ಟಕ್ಕೇರಿಸುತ್ತಿರುವ ಅಣಕ
2020-21ರಲ್ಲಿ 4.14 ಕೋಟಿಯಿಂದ 2021-22ರಲ್ಲಿ 4.33 ಕೋಟಿಗೆ ಉನ್ನತ ಶಿಕ್ಷಣದ ಮಹಿಳಾ ನೋಂದಣಿ ಸಂಖ್ಯೆ ಹೆಚ್ಚಾಗಿದೆ. 2014-15ರಿಂದ 3.42 ಕೋಟಿಯಿಂದ 4.33 ಕೋಟಿ ವಿದ್ಯಾರ್ಥಿನಿಯರು ನೋಂದಣಿ ಮಾಡಿಕೊಂಡಿದ್ದಾರೆ. ಇದು 91 ಲಕ್ಷ ಮಂದಿ ಹೆಚ್ಚು ನೋಂದಣಿ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ.
18-23 ವರ್ಷದ ವಯೋಮಿತಿ ಗುಂಪುಗಳ 2011ರ ಜನಸಂಖ್ಯಾ ಪ್ರಕ್ಷೇಪಣಾ ವರದಿಯ ಆಧಾರದ ಮೇಲೆ ಮಹಿಳಾ ಜಿಇಆರ್ 2014-15ರಿಂದ ಶೇ. 23.7 ರಿಂದ 2021-22 ವರೆಗೆ ಶೇ. 28.4 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರದ ವರದಿ ತಿಳಿಸಿದೆ. ಮಹಿಳಾ ಜಿಇಆರ್ 2014-15ರಲ್ಲಿ ಶೇ. 22.09 ರಿಂದ 2021-22 ವರೆಗೆ ಶೇ.28.05 ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ.
ಶೇ.78.9 ರಷ್ಟು ವಿದ್ಯಾರ್ಥಿಗಳು ಪದವಿ ಶಿಕ್ಷಣಗಳಿಗೆ ನೋಂದಣಿ ಮಾಡಿಕೊಂಡಿದ್ದರೆ, ಶೇ.12.1 ರಷ್ಟು ಸ್ನಾತಕೋತ್ತರ ಪದವಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ವರದಿ ತಿಳಿಸಿದೆ.
ಪದವಿ ಶಿಕ್ಷಣ ನೋಂದಣಿ ಮಾಡಿಕೊಂಡವರಲ್ಲಿ ಕಲೆ (ಶೇ.34.2), ವಿಜ್ಞಾನ (ಶೇ.14.8), ವಾಣಿಜ್ಯ (ಶೇ.13.3) ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ (ಶೇ.11.8) ಮಂದಿ ಇದ್ದಾರೆ. ಸ್ನಾತಕೋತ್ತರ ಪದವಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನ(ಶೇ.21.2) ಹಾಗೂ ವಿಜ್ಞಾನ(ಶೇ.14.7) ಶಿಕ್ಷಣ ನೋಂದಣಿ ಮಾಡಿಕೊಂಡಿದ್ದಾರೆ.
ಪಿಹೆಚ್.ಡಿ ಪದವಿಯಲ್ಲಿ ಕಳೆದ 5 ವರ್ಷಗಳಲ್ಲಿ ಶೇ.81.2 ರಷ್ಟು ಏರಿಕೆಯಾಗಿದೆ. 2014-15 ರಲ್ಲಿ 1.17 ಲಕ್ಷದಿಂದ 2021-22 ವರೆಗೆ 2.12 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.