ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಎರಡನೇ ದಿನದ ಅಂತ್ಯಕ್ಕೆ 110 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿದ್ದು, 175 ಮುನ್ನಡೆ ಸಾಧಿಸಿದೆ.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪಾರಮ್ಯ ಮೆರೆದರು. ಕೆ ಎಲ್ ರಾಹುಲ್(86) ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ(81) ಅರ್ಧ ಶತಕ ಬಾರಿಸಿದರೆ, ವಿಕೆಟ್ ಕೀಪರ್ ಶ್ರೀಕರ್ ಭರತ್ 41, ಅಕ್ಸರ್ ಪಟೇಲ್ 35 ಹಾಗೂ ಶ್ರೇಯಸ್ ಅಯ್ಯರ್ 35 ರನ್ ಗಳಿಸಿ ಭಾರತ ಬೃಹತ್ ಮೊತ್ತದತ್ತ ದಾಪುಗಾಲು ಹಾಕಲು ಕಾರಣರಾದರು.
119/1 ರನ್‌ನೊಂದಿಗೆ ಎರಡನೇ ದಿನದಾಟವನ್ನು ಆರಂಭಿಸಿದ ಟೀಂ ಇಂಡಿಯಾ ಪ್ರಾರಂಭದಲ್ಲಿಯೇ ಜೈಸ್ವಾಲ್ (80) ಹಾಗೂ ಶುಭಮನ್ ಗಿಲ್ (23) ಅವರ ವಿಕೆಟ್ ಕಳೆದುಕೊಂಡಿತು. ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ 4ನೇ ವಿಕೆಟ್ ನಷ್ಟಕ್ಕೆ 64 ರನ್ ಕಲೆ ಹಾಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲರನ್ನೂ ಒಳಗೊಳ್ಳದಿದ್ದರೆ ‘ಗಣರಾಜ್ಯ’ ಹೇಗಾಗುತ್ತದೆ?
ಶ್ರೇಯಸ್ ಔಟಾದ ನಂತರ ರವೀಂದ್ರ ಜಡೇಜಾ ಅವರೊಂದಿಗೆ ಜೊತೆಯಾಟವಾಡಿದ ಕೆ ಎಲ್ ರಾಹುಲ್ 86 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ನಂತರ ಬಂದ ವಿಕೆಟ್ ಕೀಪರ್ ಶ್ರೀಕರ್ ಭರತ್ 41 ರನ್ ಬಾರಿಸಿ ರೂಟ್‌ಗೆ ಎಲ್‌ಬಿ ಆದರು.
ನಂತರದಲ್ಲಿ ಅನಾವಶ್ಯಕ ರನ್ ಓಡಲು ಪ್ರಯತ್ನಿಸಿದ ಆರ್ ಅಶ್ವಿನ್ 1 ರನ್‌ಗೆ ಔಟಾದರು. ಜಡೇಜಾ ಹಾಗೂ ಅಕ್ಸರ್ ಪಟೇಲ್ 8ನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಬಾರಿಸಿದ್ದಾರೆ.
ಇಂಗ್ಲೆಂಡ್ ಪರ ಜೋರೂಟ್ 77/2, ಟಾಮ್ ಹಾರ್ಟ್ಲ್ 131/2, ಲೀಚ್ ಹಾಗೂ ರಿಯಾನ್ ಅಹಮದ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.
Stumps on Day 2 in Hyderabad! 🏟️#TeamIndia move to 421/7, lead by 175 runs 🙌
See you tomorrow for Day 3 action 👋
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/sul21QNVgh
— BCCI (@BCCI) January 26, 2024