ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ವಿವೇಕನಗರದ ಪ್ರಶಾಂತ್, ದನುಷ್, ಕಾಮ್ಲೆಟ್ ಮತ್ತು ಸುನೀಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಬುಧವಾರ ಮುಂಜಾನೆ 3 ಗಂಟೆಯ ಸುಮಾರಿಗೆ ರೌಡಿಶೀಟರ್ ಸತೀಶ್ ಮಾಯಾಬಜಾರ್‌ನಲ್ಲಿರುವ ತನ್ನ ಮನೆಯ ಮುಂಭಾಗ ಮಲಗಿದ್ದಾಗ, ಆತನನ್ನು ಕೊಲೆ ಮಾಡಲಾಗಿತ್ತು. ಬಾರ್‌ನಲ್ಲಿ ತಮ್ಮನ್ನು ನಿಂದಿಸಿದ್ದನೆಂಬ ಕಾರಣಕ್ಕೆ ಆತನನ್ನು ನಾಲ್ವರು ಆರೋಪಿಗಳು ಹತ್ಯೆ ಮಾಡಿದ್ದರು ಎಂದು ಹೇಳಲಾಗಿದೆ.
ರೌಡಿಶೀಟರ್ ಆಗಿದ್ದ ಸತೀಶ್ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಆತನನ್ನು ಕೊಲೆ ಮಾಡಿರುವ ಆರೋಪಿಗಳೂ ಕೂಡ ಕೆಲವು ಅಪರಾಧ ಪ್ರಕರಂಣಗಳಲ್ಲಿ ಭಾಗಿಯಾಗಿದ್ದರು ಎಂದು ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ತೆಕ್ಕನವರ್ ಹೇಳಿದ್ದಾರೆ.