ಶಿವಮೊಗ್ಗದಲ್ಲಿ ಡಿಎಆರ್ ಪೊಲೀಸ್ ಹುದ್ದೆಗೆ ಪರೀಕ್ಷೆ ಆರಂಭಗೊಂಡಿದೆ. ರಾಜ್ಯದಲ್ಲಿ 3,064 ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿದೆ. ಅದರಂತೆ ಶಿವಮೊಗ್ಗದ 22 ಕೇಂದ್ರದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 8,000ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪೊಲೀಸ್ ಇಲಾಖೆಯಿಂದ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರು. ಪರೀಕ್ಷಾ ಕೇಂದ್ರದಲ್ಲಿ 3 ಹಂತದಲ್ಲಿ ಅಭ್ಯರ್ಥಿಗಳ ತಪಾಸಣೆ ನಡೆದಿದೆ.
ಜೀನ್ಸ್ ಪ್ಯಾಂಟ್, ಫುಲ್ ಶರ್ಟ್ ಪರೀಕ್ಷಾರ್ಥಿಗಳಿಗೆ ನಿಷೇಧಿಸಲಾಗಿದೆ. ಜೀನ್ಸ್ ಪ್ಯಾಂಟ್, ಫುಲ್ ಶರ್ಟ್ ಹಾಕಿಕೊಂಡು ಬಂದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೇ ವಾಪಸ್ ಕಳುಹಿಸಿದ್ದರು.
ವಾಪಸ್ ಕಳುಹಿಸಿದ್ದ ಅಭ್ಯರ್ಥಿಗಳನ್ನು ವಾಪಸ್ ಕರೆದು ನೈಟ್ ಪ್ಯಾಂಟ್ ಖರೀದಿಗೆ ಪೊಲೀಸರೇ ಹಣಕೊಟ್ಟಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ನೈಟ್ ಪ್ಯಾಂಟ್ ಖರೀದಿಸಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ನೈಟ್ ಪ್ಯಾಂಟ್ ಖರೀದಿಗೆ ಹಣ ಸಹಾಯ ಮಾಡಿದ ವಿನೋಬನಗರ ಪೊಲೀಸ್ ಕಾನ್ಸ್‌ಟೇಬಲ್ ಮಲ್ಲಪ್ಪರ ಬಗ್ಗೆ ಉತ್ತಮ ಪ್ರಶಂಸೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಮನುಷ್ಯರನ್ನು ಮೃಗಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ: ಪತ್ರಕರ್ತ ನವೀನ್ ಕುಮಾರ್
ಫುಲ್ ಶರ್ಟ್ ಹಾಕಿಕೊಂಡು ಬಂದವರಿಗೂ ಶಾಕ್ ನೀಡಲಾಗಿದೆ. ಫುಲ್ ಶರ್ಟ್ ಹಾಕಿಕೊಂಡು ಬಂದವರಿಗೆ ಪ್ರವೇಶವನ್ನು ನಿರಾಕರಿಸಿದರು ಎನ್ನಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.