- ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ
- ಸ್ವರೂಪ್ ಪಾಲಾದ ಹಾಸನ ವಿಧಾನಸಭಾ ಕ್ಷೇತ್ರ
ಹಾಸನದ ಟಿಕೆಟ್ ಸಲುವಾಗಿ ಜೆಡಿಎಸ್‌ನಲ್ಲಿ ಎದ್ದಿದ್ದ ಅಂತೆ ಕಂತೆಗಳ ಲೆಕ್ಕಾಚಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.
ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕುಮಾರಸ್ವಾಮಿ, ಹಾಸನದಿಂದ ಸ್ವರೂಪ್ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದರು.
ಕುಮಾರಸ್ವಾಮಿ ಪತ್ರಿಕಾಗೋಷ್ಠಿ ವೇಳೆ ಹೊಳೆನರಸೀಪುರ ಶಾಸಕ, ಕುಮಾರಸ್ವಾಮಿ ಸಹೋದರ ಎಚ್ ಡಿ ರೇವಣ್ಣ ಕೂಡ ಉಪಸ್ಥಿತರಿದ್ದರು.
ಹಾಸನ ಟಿಕೆಟ್ ವಿಚಾರದಲ್ಲಿ ದೇವೇಗೌಡರದ್ದೇ ಅಂತಿಮ ನಿರ್ಧಾರ ಎಂದಿದ್ದ ಇಬ್ಬರೂ ನಾಯಕರುಗಳು ಈಗ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಪ್ರಕಾಶ್‌ಗೆ ಟಿಕೆಟ್ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇದಾದ ಬಳಿಕ ಜೆಡಿಎಸ್ ಪಕ್ಷದ 49 ಉಮೇದುವಾರರ ಎರಡನೇ ಪಟ್ಟಿಯನ್ನೂ ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಹಾಸನದ ಟಿಕೆಟ್ ವಿಚಾರವಾಗಿ ಭವಾನಿ ಹಾಗೂ ರೇವಣ್ಣ ಅವರ ಜೊತೆಗೆ ಚರ್ಚೆ ಮಾಡಿಯೇ ನಿರ್ಧಾರ ತೆಗೆದುಕೊಂಡು ಅವರ ಸಹಮತದೊಂದಿಗೆ ಹಾಸನದಲ್ಲಿ ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ಘೋಷಣೆ ಮಾಡಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? : ಜೆಡಿಎಸ್‌ಗೆ ವರವಾದ ರಾಷ್ಟ್ರೀಯ ಪಕ್ಷಗಳ ಬಂಡಾಯ : ಕಾಂಗ್ರೆಸ್‌ನ ರಘು ಆಚಾರ್ ಸೇರಿದಂತೆ ಹಲವರ ಸೇರ್ಪಡೆ
ಎರಡನೇ ಪಟ್ಟಿಯಂತೆ ಕುಡುಚಿ ಕ್ಷೇತ್ರದಿಂದ ಆನಂದ್ ಮಾಳಗಿ, ರಾಯಭಾಗ ಕ್ಷೇತ್ರದಲ್ಲಿ ಪ್ರದೀಪ್ ಮಾಳಗಿ, ಅಥಣಿ ಶಶಿಕಾಂತ ಪಡಸಲಗಿ, ಜೇವರ್ಗಿ ದೊಡ್ಡಪ್ಪಗೌಡ ಪಾಟೀಲ್ ಗೆ ಟಿಕೆಟ್ ನೀಡಲಾಗಿದೆ.
ಕಡೂರಿನಲ್ಲಿ ಪಕ್ಷಕ್ಕೆ ಮರಳಿದ ವೈ ಎಸ್ ವಿ ದತ್ತ, ಸಕಲೇಶಪುರದಲ್ಲಿ ಮಾಜಿ ಪಕ್ಷಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ, ಬೇಲೂರಿನಿಂದ ಲಿಂಗೇಶ್, ಭಟ್ಕಳ – ನಾಗೇಂದ್ರ ನಾಯ್ಕ್, ಯಲ್ಲಾಪುರ -ನಾಗೇಶ್ ನಾಯ್ಕ್ , ಹಗರಿ ಬೊಮ್ಮನಹಳ್ಳಿ – ಪರಮೇಶ್ವರಪ್ಪ ನವರಿಗೆ ಟಿಕೆಟ್ ನೀಡಲಾಗಿದೆ.